ಚಾ.ನಗರ ಟಿಎಪಿಎಸ್‍ಗೆ 80 ಸಾವಿರ ರೂ. ನಿವ್ವಳ ಲಾಭ : ಎಚ್.ಎಂ. ಬಸವಣ್ಣ

ರೈತರಿಗಾಗಿ ಇತರೇ ವ್ಯಾಪಾರ ಅಭಿವೃದ್ದಿಪಡಿಸಲು ಚಿಂತನೆ

ಚಾಮರಾಜನಗರ: ಚಾಮರಾಜನಗರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ಉತ್ತಮ ವಹಿವಾಟು ಮಾಡಿ, 80,603 ರೂ.ಗಳ ನಿವ್ವಳ ಲಾಭವನ್ನು ಗಳಿಸಿದೆ ಎಂದು ಸಂಘ ಅಧ್ಯಕ್ಷ ಎಚ್.ಎಂ. ಬಸವಣ್ಣ ತಿಳಿಸಿದರು.

ನಗರದ ಟಿಎಪಿಸಿಎಂಎಸ್ ಅವರಣದಲ್ಲಿ ನಡೆದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಟಿಎಪಿಸಿಎಂಎಸ್‍ನ ಕಟ್ಟಡಗಳ ಗೋದಾಮು ಬಾಡಿಗೆ ಹಾಗು ಪಡಿತರ ವಿತರಣೆಯಲ್ಲಿ ಬರುವ ಆದಾಯದಲ್ಲಿ ಎಲ್ಲಾ ರೀತಿಯ ಖರ್ಚು ವೆಚ್ಚಗಳನ್ನು ಭರಿಸಿ ಪ್ರಸಕ್ತ ವರ್ಷದಲ್ಲಿ 80 ಸಾವಿರ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದರು.

ನಿರ್ದೇಶಕರು ಹಾಗೂ ಸರ್ವ ಸದಸ್ಯರ ಅಭಿಪ್ರಾಯದಂತೆ ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇತರೇ ವ್ಯಾಪಾರಗಳನ್ನು ಅಭಿವೃದ್ದಿಪಡಿಸಲು ಸಲಹೆ ಸಹಕಾರವನ್ನು ಸದಸ್ಯರ ನೀಡಿದ್ದಾರೆ. ಅದರಂತೆ ಕಾರ್ಯಯೋಜನೆಗಳನ್ನು ರೂಪಿಸಿ, ಟಿಎಪಿಸಿಎಸ್ ಅನ್ನು ಪ್ರಗತಿಯತ್ತ ಕೊಂಡೊಯ್ಯವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ಸಂಘದ ಪ್ರಭಾರ ಕಾರ್ಯದರ್ಶಿ ಎಂ.ಎನ್. ಸಿದ್ದಲಿಂಗಸ್ವಾಮಿ ವಾರ್ಷಿಕ ವರದಿಯನ್ನು ಓದಿ ಅನುಮೋದನೆ ಪಡೆದುಕೊಂಡರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಅಂಕಯ್ಯ, ನಿರ್ದೇಶಕರಾದ ಎಚ್.ಎಂ. ಮಹದೇವಪ್ರಭು, ಎಲ್. ಶಿವಕುಮಾರ್, ಎಚ್.ಎಲ್. ರಾಜೇಶ್, ಕೆ.ಎಂ. ರೂಪೇಶ್, ಶಿವಕುಮಾರ್, ಎನ್. ಕೃಷ್ಣ, ನಾಗೇಶ್ ನಾಯಕ, ಕೆ.ವಿ. ನಾಗರಾಜು, ಸಾಕಮ್ಮ, ರತ್ನಮ್ಮ, ನೌಕರರಾದ ಮಹದೇವ್, ಹಾಗು ಸದಸ್ಯರು ಇದ್ದರು.

Leave a Reply

Your email address will not be published. Required fields are marked *