ಚಾಮರಾಜನಗರ: ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀರೂಪ ಅವರನ್ನು ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ , ಸನ್ಮಾನಿಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಅಧ್ಯಕ್ಷ ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ನೂತನ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಹಾರ ಹಾಕಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಪಣ್ಯದಹುಂಡಿ ರಾಜು, ನಿಜಧ್ವನಿಗೋವಿಂದರಾಜು, ಜಗದೀಶ್, ಹೊಮ್ಮ ಲೋಕೇಶ್, ಮುತ್ತಿಗೆ ಗೋವಿಂದರಾಜ, ರಾ.ಜಗದೀಶ್ ನ್, ಮುತ್ತುರಾಜು, ಶಿವಣ್ಣ ಹೊಸೂರು, ಮಹೇಶ್ ಗೌಡ, ರಾಚಪ್ಪ, ತಾಂಡವಮೂರ್ತಿ, ವೀರಭದ್ರ, ಮೂಡ್ಲುಪುರಪ್ರಕಾಶ್, ಸುರೇಶ್ ಉಪ್ಪಾರ್, ಸುರೇಶ್ ಗೌಡ, ಡಾನ್ಸ್ ಬಸವರಾಜು ಇತರರು ಹಾಜರಿದ್ದರು.