- ಎಲ್ಇಡಿ ಆಧಾರಿತ ಇಮ್ಮರ್ಸಿವ್ `ಮಿಷನ್ ಇಂಟರ್ ಸೆಲ್ವಾರ್’ ಅನಾವರಣ
- 35 ಕೋಟಿ ರೂ.ಗಳ ವೆಚ್ಚ: ವಂಡರ್ ಲಾ ಪಾರ್ಕ್ ಮುಖ್ಯಸ್ಥ ರುದ್ರೇಶ್ ಮಾಹಿತಿ


ಮೈಸೂರು: ವಂಡರ್ ಲಾದಲ್ಲಿ ನೂತನ ಮನೋರಂಜನಾ ವ್ಯವಸ್ಥೆಯೊಂದನ್ನು ಅಳವಡಿಕೆ ಮಾಡಲಾಗಿದ್ದು, ಇದು ಬಾಹ್ಯಾಕಾಶಯಾನದ ಅನುಭವವನ್ನು ನೀಡಲಿದ್ದು, ಪ್ರವಾಸಿಗರು ಮತ್ತು ಸಂದರ್ಶಕರು ಇದರ ಅನುಭವವನ್ನು ಪಡೆಯಬಹುದಾಗಿದೆ ಎಂದು ಬೆಂಗಳೂರಿನ ವಂಡರ್ಲಾದ ಮುಖ್ಯಸ್ಥ ರುದ್ರೇಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಅತಿದೊಡ್ಡ ಎಲ್ಇಡಿ ಆಧಾರಿತ ಇಮ್ಮರ್ಸಿವ್ ಸ್ಕ್ರೀನ್ ಸ್ಪೇಸ್ ಥಿಯೇಟರ್ ಮಿಷನ್ ಇಂಟರ್ ಸ್ಟೆಲ್ಲಾರ್ ಅನ್ನು ಅಳವಡಿಸಲಾಗಿದ್ದು, ಇದು ಸಾಟಿಯಿಲ್ಲದ ಸ್ಪಷ್ಟತೆಯೊಂದಿಗೆ ವಾಸ್ತವಿಕ ಬಾಹ್ಯಾಕಾಶದ ಅನುಭವವನ್ನು ನೀಡಲಿದೆ ಎಂದರು.
ಅತ್ಯಾಧುನಿಕ ಚಲನೆ ತಂತ್ರಜ್ಞಾನ: ಈ ತಂತ್ರಜ್ಞಾನವನ್ನು ಇಟಲಿಯಿಂದ ಆಮದು ಮಾಡಿಕೊಳ್ಳಲಾಗಿದ್ದು, ಒಮ್ಮೆ 60 ಮಂದಿಗೆ ಹೈಡ್ರಾಲಿಕ್ ಲಿಫ್ಟ್ ಆಸನ ವ್ಯವಸ್ಥೆಯು ಇದ್ದು, ಇದು ಸವಾರರನ್ನು 40 ಅಡಿ ಎತ್ತರಕ್ಕೆ ಕರೆದೊಯ್ಯಲಿದೆ. ಹೈಟೆಕ್ ಲೇಸರ್ ಪೆÇ್ರಜೆಕ್ಷನ್ ಗಳೊಂದಿಗೆ ಚಲನೆಯನ್ನು ಸಿಂಕ್ರೋನೈಸ್ ಮಾಡಲಾಗಿದ್ದು, ಮತ್ತು ಗಾಳಿಯಂತಹ ಪರಿಸರದಂತಹ ಪರಿಣಾಮಗಳನ್ನು ಸಂಪೂರ್ಣವಾಗಿ ಬಹು ಸಂವೇದನೀಯ ಅನುಭವವನ್ನು ನೀಡಲಿದೆ ಎಂದು ತಿಳಿಸಿದರು.
ಸುಮಾರು 35 ಕೋಟಿ ರೂ.ಗಳ ಹೂಡಿಕೆಯೊಂದಿಗೆ, ವಂಡರ್ ಲಾ ಯುಎಸ್ ಮತ್ತು ಯುರೋಪಿನ ಪುಮುಖ ಥೀಮ್ ಪಾರ್ಕ್ ವಿನ್ಯಾಸ ಕಂಪನಿಗಳೊಂದಿಗೆ ಬಾಹ್ಯಾಕಾಶ-ವಿಷಯದ ಆಕರ್ಷಣೆಯನ್ನು ರಚಿಸಲಾಗಿದ್ದು, ಇದು ಜನರಿಗೆ ಉತ್ತಮವಾದ ಮನರಂಜನೆಯನ್ನು ನೀಡಲಿದೆ ಎಂದರು.
ಭಾರತದ ಅತಿದೊಡ್ಡ ಮನರಂಜನಾ ಪಾರ್ಕ್ ಸರಪಳಿಯಾದ ವಂಡರ್ ಲಾ ಹಾಲಿಡೇಸ್ ಲಿಮಿಟೆಡ್, ಮುಂದಿನ ಪೀಳಿಗೆಯ ಫೈಯಿಂಗ್ ಸ್ಪೇಸ್ ವಾಯೇಜ್ ಅನುಭವವಾದ ಮಿಷನ್ ಇಂಟರ್ ಸೆಲ್ವಾರ್ ಅನ್ನು ಬೆಂಗಳೂರಿನ ವಂಡರ್ ಲಾದಲ್ಲಿ ಪರಿಚಯಿಸಲು ಹೆಮ್ಮೆಪಡುತ್ತದೆ.
ನಕ್ಷತ್ರಗಳಾಚೆಗೆ ಸಂದರ್ಶಕರನ್ನು ಕೊಂಡೊಯ್ಯಲು ವಿನ್ಯಾಸಗೊಳಿಸಲಾದ ಈ ಅತ್ಯಾಧುನಿಕ ಆಕರ್ಷಣೆಯು, ಭಾರತದ ಅತಿದೊಡ್ಡ, ಎಲ್ಇಡಿ ಆಧಾರಿತ ಇಮ್ಮರ್ಸಿವ್ ಸ್ಮಿನ್ ಥಿಯೇಟರ್ ಆಗಿದ್ದು, ಭಾರತದಲ್ಲಿ ಮನೋರಂಜನೆ ಮತ್ತು ವಿರಾಮವನ್ನು ಮರುವ್ಯಾಖ್ಯಾನಿಸುವ ಭರವಸೆ ನೀಡುತ್ತದೆ. ನಿಖರತೆ, ಗುಣಮಟ್ಟ ಮತ್ತು ವಿಶ್ವ ದರ್ಜೆಯ ಸುರಕ್ಷತಾ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ವಂಡರ್ ಲಾದ ಆಂತರಿಕ ಎಂಜಿನಿಯರಿಂಗ್ ತಂಡವು ಸಂಪೂರ್ಣ ಶ್ರಮವಹಿಸುತ್ತಿದೆ ಎಂದರು.
ಶಕ್ತಿಯುತ ಧ್ವನಿ ವ್ಯವಸ್ಥೆ: 46,000-ವ್ಯಾಟ್ ಧ್ವನಿ ವ್ಯವಸ್ಥೆಯು ಬಹುಸಂವೇದನಾ ಅನುಭವವನ್ನು ನೀಡಲಿದ್ದು, ಬಾಹ್ಯಾಕಾಶ ಪ್ರಯಾಣದ ವಾಸ್ತವಿಕತೆಯನ್ನು ವರ್ಧಿಸುತ್ತದೆ ವಾಸ್ತುಶಿಲ್ಪದ ಅದ್ಭುತ: 23 ಮೀಟರ್ ಎತ್ತರದ ಛಾವಣಿಯೊಂದಿಗೆ 8 ಅಂತಸ್ತಿನ ಗುಮ್ಮಟ ಈ ಆಕರ್ಷಣೆಯು ಭಾರತದಲ್ಲಿಯೇ ಆಕಾರದ ರಚನೆಯೊಳಗೆ ರಚನೆಯೊಳಗೆ ನೆಲೆಗೊಂಡಿರುವ ಮೊದಲನೆಯದಾಗಿದೆ.
ಮಿಷನ್ ಇಂಟರ್ ಸ್ಟೈಲ್ಕಾರ್ನ ಪ್ರಾರಂಭವು ವಂಡರ್ ಲಾದ 25 ನೇ ವಾರ್ಷಿಕೋತ್ಸವದ ಜೊತೆಯಲ್ಲೇ ಬಂದಿದೆ. ಇದು ಅಮ್ಯೂಸ್ ಮೆಂಟ್ ಪಾರ್ಕ್ ಅನುಭವಗಳಲ್ಲಿ ನವ ನಾವೀನ್ಯತೆ ಮತ್ತು ಶ್ರೇಷ್ಠತೆಯ ಪರಂಪರೆಯನ್ನು ಒತ್ತಿ ಹೇಳುತ್ತದೆ.
2000 ದಲ್ಲಿ ಪ್ರಾರಂಭವಾದಾಗಿನಿಂದ, 43 ದಶಲಕ್ಷಕ್ಕೂ ಹೆಚ್ಚು ಸಂದರ್ಶಕರು, ವಂಡರ್ ಲಾ ಪಾರ್ಕ್ಗೆ ಭೇಟಿ ನೀಡಿ ಆನಂದಿಸಿದ್ದಾರೆ. ಇದು ದೇಶದಲ್ಲಿ ಹೆಚ್ಚು ಭೇಟಿ ನೀಡುವ ಮನರಂಜನಾ ಪಾರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಂಡರ್ ಲಾ ನಿರಂತರವಾಗಿ ಭಾರತ ಮತ್ತು ಏಷ್ಯಾದ ಉನ್ನತ ಮನರಂಜನಾ ಪಾರ್ಕ್ಗಳಲ್ಲಿ ಒಂದಾಗಿದೆ. ಇಲ್ಲಿ ಜಲಕ್ರೀಡೆ, ಸಾಹಸಕ್ರೀಡೆಗೆ ಹೆಸರುವಾಸಿಯಾಗಿದೆ. ಮೋಜು ಮತ್ತು ಕುಟುಂಬ ಸ್ನೇಹಿ ಮನರಂಜನೆಗೆ ಸೂಕ್ತ ಸ್ಥಳವಾಗಿದೆ.
ಪ್ರಾರಂಭದಿಂದಲೂ, ವಂಡರ್ ಲಾ ಮನರಂಜನಾ ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡಿದ್ದು, ಸ್ವಚ್ಛತೆ ಹಾಗೂ ಸುರಕ್ಷಿತವಾದ ಮನರಂಜನೆ ಪಾರ್ಕ್ ಇದಾಗಿದೆ ಎಂದು ತಿಳಿಸಿದರು.
ವಂಡರ್ಲಾ ಪಾರ್ಕ್ ಕೊಚ್ಚಿ, ಬೆಂಗಳೂರು, ಹೈದರಾಬಾದ್ ಮತ್ತು ಭುವನೇಶ್ವರದಲ್ಲಿ ನಾಲ್ಕು ವಿಶ್ವ ದರ್ಜೆಯ ಮನರಂಜನಾ ಉದ್ಯಾನವನಗಳನ್ನು ನಿರ್ವಹಿಸುತ್ತಿದ್ದು, ಇದುವರೆಗೂ ಸುಮಾರು 4 ಕೋಟಿಗೂ ಹೆಚ್ಚು ಸಂದರ್ಶಕರು ಭೇಟಿ ನೀಡಿರುವ ಬೆಂಗಳೂರಿನ ವಂಡರ್ಲಾ ಮನರಂಜನೆಗೆ ಮತ್ತೊಮ್ಮೆ ಹೆಸರುವಾಸಿಯಾಗಿದೆ. ಇದು ನಿರಂತರವಾಗಿ ಸಂದರ್ಶಕರ ಮನರಂಜನೆಗಾಗಿ ಹೊಸ ಮಾನದಂಡಗಳನ್ನು ರೂಪಿಸುತ್ತಿದೆ ಎಂದರು.
ಆಫರ್ ವಿವವರಗಳು: ವಾರದ ದಿನಗಳಲ್ಲಿ / ವಾರಾಂತ್ಯಗಳಲ್ಲಿ ಮತ್ತು ರಜಾದಿನಗಳಲ್ಲಿ ಪಾರ್ಕ್ ಪುವೇಶವು ಟಿಕೆಟ್ಗಳ ಮೇಲೆ 25% ವರೆಗೆ ರಿಯಾಯಿತಿ ಪಡೆಯಬಹುದು. ಶಾಲೆ/ಕಾಲೇಜುಗಳಿಗೆ ಮತ್ತು ಕಾಪೆರ್Çರೇಟ್ ಸಂಸ್ಥೆಗಳು ವಿಶೇಷ ಕೊಡುಗೆಗಳು ಪಡೆಯಬಹುದು.
ವಂಡರ್ಲಾದ ಟಿಕೆಟ್ ಬುಕ್ಕಿಂಗ್ಗಾಗಿ ಮೈಸೂರಿನ ಮಹಾರಾಜ ಕಾಂಪ್ಲೆಕ್ಸ್ನಲ್ಲಿರುವ ಎಸ್ಬೀ ಮಾರ್ಕೆಟಿಂಗ್ ಕಚೇರಿಯನ್ನು (ಸುರೇಶ್ ಬಾಬು – 9845353746)
ಸಂಪರ್ಕಿಸಬಹುದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸುರೇಶ್ ಬಾಬು, ಅಧಿಕೃತ ವ್ಯವಹಾರ ಅಭಿವೃದ್ಧಿ ಪಾಲುದಾರ ಮೈಸೂರು, ರೋಲನ್ ಡೋನಾ ಮಾರ್ಕೆಟಿಂಗ್ ಹೆಡ್, ದೇವಯ್ಯ ಪಿ.ಆರ್ ಹೆಡ್ ಉಪಸ್ಥಿತರಿದ್ದರು.