ಚಾಮರಾಜನಗರ ಪಿಡಬ್ಲ್ಯೂಡಿ  ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧ ಆಯ್ಕೆ

  • ಅಧ್ಯಕ್ಷರಾಗಿ ಅಯ್ಯನಪುರ ಶಿವಕುಮಾರ್ 3 ನೇ ಬಾರಿಗೆ, ಉಪಾಧ್ಯಕ್ಷರಾಗಿ ವೈ.ಪಿ. ರಾಜೇಂದ್ರ ಪ್ರಸಾದ್ ಅವಿರೋಧ ಆಯ್ಕೆ

ಚಾಮರಾಜನಗರ: ಚಾಮರಾಜನಗರ ತಾಲೂಕು ಲೋಕೋಪಯೋಗಿ  ಇಲಾಖೆಯ ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಅಯ್ಯನಪುರ ಶಿವಕುಮಾರ್ 3ನೇ ಬಾರಿಯೂ, ಉಪಾಧ್ಯಕ್ಷ ವೈ.ಪಿ.ರಾಜೇಂದ್ರ ಪ್ರಸಾದ್ ಅವಿರೋಧವಾಗಿ ಆಯ್ಕೆಯಾದರು.
 ನಗರದ ಪಿಡಬ್ಲ್ಯೂಡಿ
ಕಚೇರಿ ಅವರಣದಲ್ಲಿರುವ ಸಂಘದ ಕಚೇರಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾಗಿ
ನೂತನ ಅಧ್ಯಕ್ಷ ರು, ಉಪಾಧ್ಯಕ್ಷ ರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಯ್ಯನಪುರ ಶಿವಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ವೈ.ಪಿ.ರಾಜೇಂದ್ರ ಪ್ರಸಾದ್ ನಾಮಪತ್ರ ಸಲ್ಲಿಸಿದರು. ಈ ಎರಡು ಸ್ಥಾನಗಳಿಗೆ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ  ಅಧಿಕಾರಿ  ನಾಗೇಶ್ ಘೋಷಿಸಿದರು.
ಸಭೆಯಲ್ಲಿ ನಿರ್ದೇಶಕರಾದ ಎಂ. ರವಿ , ಬಸಪ್ಪನಪಾಳ್ಯ  ನಟರಾಜು, ಎಂ. ಶಿವಕುಮಾರ್, ನಲ್ಲೂರು ಮಹದೇವಸ್ವಾಮಿ ಬಿ, ಶಿವಬಸವಣ್ಣ, ಎಂ.ಸಿ. ಸುರೇಂದ್ರ,ಮಲೆಯೂರು ಎಂ.ಎ. ನಾಗರಾಜು, ಅಬ್ದುಲ್ ಅಜೀಜ್, ನಂಜುಂಡಸ್ವಾಮಿ,ಸುಬ್ಬೇಗೌಡ , ದೇವಾಜಮ್ಮಣಿ, ದೊರೆಸ್ವಾಮಿ ,ಸಂಘ ಸಿಇಓ ಬರ್ನಾಲ್ಟ್ ದೀಕ್ಷೀತ್ ಸಿ ಭಾಗವಹಿಸಿದ್ದರು.

ಸಂಘಕ್ಕೆ ಒಂದು ಕೋಟಿ ಲಾಭ ತರುವ ಗುರಿ:  ನೂತನ ಅಧ್ಯಕ್ಷ ಅಯ್ಯನಪುರ ಶಿವಕುಮಾರ್ ಮಾತನಾಡಿ, ಸಂಘದ ನಿರ್ದೇಶಕರು ನನ್ನನ್ನು ಮೂರನೇ ಬಾರಿಯೂ ಅವಿರೋಧ ಆಯ್ಕೆ ಮಾಡಿರುವುದು ತುಂಬಾ ಖುಷಿಯಾಗಿದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ರಋಣಿಯಾಗಿದ್ದೇವೆ.   ಕಳೆದ 2015ರಲ್ಲಿ ಸಂಘ ಸ್ಥಾಪನೆ ಗೊಂಡು  ತಾಲೂಕಿನ  ಗುತ್ತಿಗೆದಾರರನ್ನು ಅರ್ಥಿಕವಾಗಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಸಂಘ ಸಕ್ರಿಯವಾಗಿ ಕೆಲಸ ಮಾಡುತ್ತಿದೆ.   ಸಂಘದ ಸದಸ್ಯರಿಗೆ  2 ಲಕ್ಷ ದ ವರೆಗೂ  ಅರ್ಜಿ ಸಲ್ಲಿಸಿದ ಕೆಲವ  ನಿಮಿಷಗಳಲ್ಲಿ ಅವರ  ಬ್ಯಾಂಕ್ ಖಾತೆಗೆ  ಹಣವನ್ನು ಜಮಾ ಮಾಡಲಾಗುತ್ತದೆ. ಅದೇ ರೀತಿ ಸದಸ್ಯರು ಸಹ ಮರು ಪಾವತಿ ಮಾಡುತ್ತಿದ್ದಾರೆ. ಹೀಗಾಗಿ ನಮ್ಮ ಸಂಘ ಒಟ್ಟು ಷೇರು 20 ಲಕ್ಷ ರೂ. ಆಗಿದ್ದು, ಇದುವರೆಗೆ 45 ಲಕ್ಷ ರೂ.  ನಿವ್ವಳ ಲಾಭ ಬಂದಿದೆ. ಈಗ ಸಂಘದ ಖಾತೆಯಲ್ಲಿ  65 ಲಕ್ಷ ರೂ. ಇದ್ದು, ಮುಂದಿನ ದಿನಗಳಲ್ಲಿ ಒಂದು ಕೋಟಿ ಲಾಭ ತರುವ ಚಿಂತನೆ ಹೊಂದಲಾಗಿದೆ. ಇನ್ನು ಹೆಚ್ಚಿನ ಯೋಜನೆಗಳು ಹಾಗೂ ಸಂಘ ಸದಸ್ಯರ ಆರ್ಥಿಕ ಸಬಲೀಕರಣಕ್ಕೆ ಕಾರ್ಯಕ್ರಮಗಳನ್ನು ರೂಪಿಸುವುದಾಗಿ ತಿಳಿಸಿದರು.
ಅಲ್ಲದೆ ಚಾಮರಾಜನಗರದಲ್ಲಿ ನಡೆದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಉತ್ತಮ ಸಂಘವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಹಕಾರ ಪ್ರಶಸ್ತಿ ಪಡೆದುಕೊಂಡಿದೆ ಎಂದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ನಿರ್ದೇಶಕರು, ಇಲಾಖಾಧಿಕಾರಿಗಳು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಮಸಮುದ್ರ ಪುಟ್ಟಸ್ವಾಮಿ, ವಕೀಲರಾದ ಮಂಜು, ನಗರಸಭಾ ಮಾಜಿ ಸದಸ್ಯ ನಂಜುಂಡಸ್ವಾಮಿ, ಗುತ್ತಿಗೆದಾರ ಗಿರೀಶ್,  ರಾಮಸಮುದ್ರ ಯಜಮಾನ ಪಾಪಣ್ಣ, ಗೋವಿಂದರಾಜ ಹಾಗೂ ನಿರ್ದೇಶಕರು ಸೇರಿದಂತೆ ಅನೇಕ ಮುಖಂಡರು ಅಭಿನಂದಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

Leave a Reply

Your email address will not be published. Required fields are marked *