- ಭೋಗಾಪುರ ವಸತಿಯುಕ್ತ ಸರ್ಕಾರಿ ಪ್ರಥಮ ಕಾಲೇಜಿನಲ್ಲಿ ಗಮನ ಸೆಳೆದ ಲಿಂಗಸಮನ್ವಯತಾ ಮೇಳ
ಚಾಮರಾಜನಗರ: ತಾಲೂಕಿನ ಭೋಗಾಪುರ ವಸತಿಯುಕ್ತ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಲಿಂಗಸಮನ್ವಯತಾ ಮೇಳ ಗಮನ ಸೆಳೆಯಿತು.
ಕಾಲೇಜಿನಲ್ಲಿ ಕಾಲೇಜು ಮತ್ತು ಕಾಲೇಜು ಮತ್ತು ಸಾವಿತ್ರಿಬಾಯಿಫುಲೆ ತಂಡದವರ ನೇತೃತ್ವದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಅಯೋಜಿಸಿದ ಲಿಂಗಸಮನ್ವಯತಾ ಮೇಳದಲ್ಲಿ ಲಿಂಗತಾರತಮ್ಯ ಕುರಿತು ವಿಡಿಯೋ ಚಿತ್ರೀಕರಣ, ಪೋಸ್ಟರ್ ಪ್ರದರ್ಶನ ಮೂಲಕ ಅರಿವು ಮೂಡಿಸಲಾಯಿತು.
ಅಜೀಂಪ್ರೇಮ್ ಜಿ ಪ್ರತಿಷ್ಠಾನ ಜಿಲ್ಲಾ ಸಂಯೋಜಕಿ ಎನ್.ಸೌಮ್ಯ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರೂ ಹೆಣ್ಣು ಮತ್ತು ಗಂಡು ಮಗುವನ್ನು ಸಮಾನವಾಗಿ ಕಂಡಲ್ಲಿ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಯಳಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಉಪನ್ಯಾಸ ಶ್ರೇತ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೇವರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಿಡಿಒ ಮಾನಸ, ಉಪನ್ಯಾಸಕರಾದ ನಂಜುಂಡಯ್ಯ, ಡಾ.ರಮೇಶ್ ಬಾಬು, ರಂಗಸ್ವಾಮಿ, ಯಶೋಧದೇವಿ, ಭಾಗ್ಯ, ನೇತ್ರಾವತಿ, ಪೂರ್ಣಿಕ, ಕುಸುಮ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು