- ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳಿಂದ ಜ್ಯೋತಿ ಬೆಳಗಿಸುವಿಕೆ, ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ

ಚಾಮರಾಜನಗರ: ನಿಸ್ವಾರ್ಥ ಸೇವೆಯ ಸಂಕೇತವಾಗಿರುವ ನರ್ಸಿಂಗ್ ವೃತ್ತಿ ಒಂದುಪವಿತ್ರ ವೃತ್ತಿಯಾಗಿದ್ದು ಈ ವೃತ್ತಿಗೆ ದೇಶ, ವಿದೇಶದಲ್ಲೂ ಬೇಡಿಕೆ ಇದೆ ಎಂದು ಬೆಂಗಳೂರು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಶ್ರೀಕಾಂತ್ ಫುಲಾರಿ ಹೇಳಿದರು.
ನಗರದ ಡಾ.ರಾಜ್ ಕುಮಾರ್ ರಂಗಮಂದಿರದಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠ ಜೆಎಸ್ಎಸ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಜೆಎಸ್ಎಸ್ ಸ್ಕೂಲ್ ಆಫ್ ನರ್ಸಿಂಗ್ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಸಮುಚ್ಚಯ ವತಿಯಿಂದ ನಡೆದ ಪ್ರಥಮ ವರ್ಷದ
ವಿದ್ಯಾರ್ಥಿಗಳಿಂದ ಜ್ಯೋತಿ ಬೆಳಗಿಸುವಿಕೆ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸಕ್ತ ವರ್ಷದಲ್ಲಿ ಕರ್ನಾಟಕದಲ್ಲಿ 656 ನರ್ಸಿಂಗ್ ಕಾಲೇಜಿಗಳಲ್ಲಿ 40 ಸಾವಿರ ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಕೊಳ್ಳಲಾಗಿದೆ. ಖಾಸಗಿ ಶಾಲೆಗಳಲ್ಲೂ 40 ಸಾವಿರ ಪ್ರವೇಶ ಮಾಡಿಕೊಳ್ಳಲಾಗಿದ್ದು ಒಟ್ಟಾರೆ. ಪ್ರತಿ ವರ್ಷವೂ 80 ಸಾವಿರ ವಿದ್ಯಾರ್ಥಿಗಳು ನರ್ಸಿಂಗ್ ಕೋರ್ಸ್ ಪೂರ್ಣಗೊಳಿಸಿ ಹೊರಗಡೆ ಬರುತ್ತಿದ್ದಾರೆ. ಆದರೂ ಕೂಡ ನರ್ಸಿಂಗ್ ಕೊರತೆಯಾಗಿದೆ. ರಾಜ್ಯ, ದೇಶ, ವಿದೇಶದಲ್ಲೂ ನರ್ಸಿಂಗ್ ವೃತ್ತಿಗೆ ಬೇಡಿಕೆವಿದೆ ಎಂದರು.
ಕರ್ನಾಟಕದಿಂದ ನರ್ಸ್ಗ ಳನ್ನು ಕಳುಹಿಸಿಕೊಡುವಂತೆ ಜರ್ಮನ್, ಇಟಾಲಿ, ಫ್ರಾನ್ಸ್
ಸೇರಿದಂತೆ ಬೇರೆಬೇರೆ ವಿದೇಶಗಳಿಂದಲ್ಲೂ ಬೇಡಿಕೆಗಳು ಬಂದಿದೆ. ಸರ್ಕಾರವೇ ವಿದೇಶಗಳಿಗೆ ಕಳುಹಿಸುವ ವ್ಯವಸ್ಥೆ. ಇದ್ದು, ಸರ್ಕಾರ ವಿದೇಶಿ ಉದ್ಯೋಗಗಳನ್ನು ನೀಡುತ್ತಿದೆ. ಆ ದೇಶದ ಭಾಷೆ ಗೊತ್ತಿದ್ದರೆ ಸಲೀಸಾಗಿ ಕೆಲಸ ಮಾಡಬಹುದು. ಸರ್ಕಾರವೇ ಬಜೆಟ್‌ನಲ್ಲಿ ಭಾಷಾ ಕಲಿಕೆಗೆ ಅನುದಾನ ಘೋಷಣೆ ಮಾಡಿದೆ. ಆಗಾಗಿ ನರ್ಸಿಂಗ್ ಮಾಡಿದವರಿಗೆ ಒಳ್ಳೆಯ ಭವಿಷ್ಯವಿದೆ. ತಾವೂ ಒಳ್ಳೆಯ ವೃತಿ ಆಯ್ಕೆ ಮಾಡಿಕೊಂಡಿದ್ದೀರಿ. ಪೋಷಕರು ನಿಮ್ಮ ಮಕ್ಕಳನ್ನು ಜಾಬ್ ಗೆ ಸೇರಿದ್ದಾರೆ ಎಂದು ತಿಳಿದುಕೊಳ್ಳಿ ಎಂದರು.
ಪ್ರತಿಷ್ಠಿತ ಕಾಲೇಜು ಆದ ಜೆಎಸ್ಎಸ್ ನರ್ಸಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದೀರಿ ಕಾಲೇಜಿನಲ್ಲಿ ಉತ್ತಮ ಭೋದನೆ ಸಿಗುತ್ತಿದೆ. ವಿದ್ಯಾರ್ಥಿಗಳು ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಿಮ್ ಭೋಧನಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಚೆನ್ನಭೋವಿ, ಅಧ್ಯಕ್ಷತೆ ವಹಿಸಿದ್ದ ಮೈಸೂರು ಜೆಎಸ್ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್, ಸಿಮ್ಸ್ ಬೋಧನಾ ಆಸ್ಪತ್ರೆಯ ಪ್ರಭಾರ ಶುಶೂಷಕ ಅಧೀಕ್ಷಕಿ ಚಂದ್ರಕಲಾ ವಿ.ಶೇಷಾದ್ರಿ ಮಾತನಾಡಿದರು. ಕಾಲೇಜು ಪ್ರಾಂಶುಪಾಲ ವಿನಯ್ ಕುಮಾರ್ ಪ್ರತಿಜ್ಞಾವಿಧಿ ಭೋದಿಸಿದರು. ವಿದ್ಯಾರ್ಥಿಗಳು ಭಾಗವಹಿಸಿದ್ದರು.