
ಚಾಮರಾಜನಗರ: ಚಾಮರಾಜನಗರ ಪಟ್ಟಣದಲ್ಲಿರುವ ಶ್ರೀ ಕಾಳಿಕಾಂಬ ಕಮಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆಷಾಡ ಮಾಸದ ಎರಡನೇ ಶುಕ್ರವಾರ ದೇವಿಗೆ ಬೆಲ್ಲದ ಆಲಂಕಾರ ಮಾಡಿ ವಿಜೃಂಭಣೆಯಿಂದ ವಿಶೇಷ ಪೂಜೆ ನೇರವೇರಿಸಲಾಯಿತು.
ಶ್ರೀ ಕಾಳಿಕಾಂಬ ದೇವಸ್ಥಾನವನ್ನು ಹೂವಿನಿಂದ ಆಲಂಕೃತಗೊಳಿಸಲಾಗಿತ್ತು. ಎರಡನೇ ಆಷಾಡ ಶುಕ್ರವಾರದ ಪ್ರಯುಕ್ತ ದೇವಿಗೆ ವಿಶೇಷ ಆಲಂಕಾರ ಮಾಡಿ ವಿಶೇಷ ಹೂವುಗಳಿಂದ ಶೃಂಗರಿಸಿ, ಪೂಜೆ ಸಲ್ಲಿಸಲಾಯಿತು. ಪ್ರಾತಃಕಾಲ ಶ್ರೀ ಕಾಳಿಕಾಂಬ ಸಮೇತ ಶ್ರೀಕಮಠೇಶ್ವರ ಸ್ವಾಮಿ ಮತ್ತು ಪರಿವಾರ ದೇವತೆಗಳಿಗೆ ಪಂಚಮೃತ ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜೆಗಳನ್ನು ನೇರವೇರಿಸಲಾಯಿತು. ನಂತರ ಭಕ್ತರ ದರ್ಶನಕ್ಕೆ ಅವಕಾಶ ಮಾಡಲಾಯಿತು.
ಆಷಾಡದ ಶುಕ್ರವಾರ ಹಿನ್ನೆಲೆಯಲ್ಲಿ ನೂರಾರು ಮಹಿಳೆಯರು, ಗ್ರಾಮಾಂತರ ಪ್ರದೇಶಗಳಿಂದಲು ಹೆಚ್ಚು ಮಹಿಳೆಯರು ನಿಂಬೆ ಹಣ್ಣಿನ ದೀಪ, ತುಪ್ಪದ ದೀಪಗಳನ್ನು ಹಚ್ಚಿ ಇಷ್ಠಾರ್ಥ ಸಿದ್ದಿಗಾಗಿ ಪ್ರಾರ್ಥಿಸಿಕೊಳ್ಳುವ ಜೊತೆಗೆ ಕುಂಕುಮಾರ್ಚನೆ ಮಾಡಿಸಿದರು. ಭಕ್ತರಿಗೆ ಪ್ರಸಾದವನ್ನು ಟ್ರಸ್ಟ್ ಹಾಗೂ ಭಕ್ತರ ಸಹಕಾರದಿಂದ ನೀಡಲಾಯಿತು. ಸಾಯಂಕಾಲ ಶ್ರೀ ಕಾಳಿಕಾಂಬ ಸಮೇತ ಶ್ರೀಕಮಠೇಶ್ವರ ಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ದೇವಸ್ಥಾನದ ಅವರಣದಲ್ಲಿ ನಡೆಯಿತು. ಸಾಯಂಕಾಲ ಶ್ರೀ ಸಿಂಧೂರ ಭಜನ ಮಂಡಳಿಯಿಂದ ದೇವರ ನಾಮ, ಸ್ವರ ಕುಟೀರ ಶಾಲೆ ಮಕ್ಕಳಿಂದ ಸಂಗೀತ, ಕಲಾ ಸರಸ್ವತಿ ನಾಟ್ಯ ಸಂಘದಿಂದ ಭರತ್ ನಾಟ್ಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಚಾಮರಾಜನಗರದಲ್ಲಿ ಎರಡನೇ ಆಷಾಢ ಶುಕ್ರವಾರದ ಪ್ರಯುಕ್ತ ಶ್ರಿ ಕಾಳಿಕಾಂಬ ಶ್ರೀ ಕಮಠೇಶ್ವರ ಸ್ವಾಮಿಗೆ ವಿಶೇಷವಾಗಿ ಬೆಲ್ಲದ ಆಲಂಕಾರ ಮಾಡಿ, ಪೂಜೆ ಸಲ್ಲಿಸಲಾಯಿತು.