ಚಾಮರಾಜನಗರ: ಆದಿವಾಸಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಜಿಲ್ಲಾ ಘಟಕ ವತಿಯಿಂದ ವಿಪಕ್ಷನಾಯಕ ಆರ್.ಅಶೋಕ್, ಕೇಂದ್ರ ಮಾಜಿ ಸಚಿವೆ ಭಾರತಿಪ್ರವೀಣ್ ಪವಾರ್ ಅವರಿಗೆ ಮನವಿ ಸಲ್ಲಿಸಿದರು.
ಯನಗರದ ವರನಟ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ಬಿಜೆಪಿ ವತಿಯಿಂದ ನಡೆದ ಜನಜಾತೀಯ ಗೌರವ ದಿವಸ ಭಗವಾನ್ ಬಿರ್ಸಾಮುಂಡಾ ಅವರ 150ನೇ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ ವಿಪಕ್ಷನಾಯಕ ಆರ್ ಅಶೋಕ್, ಕೇಂದ್ರ ಮಾಜಿ ಸಚಿವೆ ಭಾರತಿಪ್ರವೀಣ್ ಪವಾರ್ ಅವರಿಗೆ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಮನವಿ ಸಲ್ಲಿಸಿದರು.
ಕರ್ನಾಟಕದ 49 ಬುಡಕಟ್ಟುಗಳನ್ನು ಒಳಗೊಂಡಂತೆ ಕಟ್ಟೆಕಡೆಯ ಆದಿವಾಸಿ ಬುಡಕಟ್ಟುಗಳಿಗೆ ಮೊದಲ ಆದ್ಯತೆಯಲ್ಲಿ ಸಾಮಾಜಿಕ ನ್ಯಾಯ ಕೊಡುವ ಉದ್ದೇಶದಿಂದ ಆದಿವಾಸಿಗಳ ಅಭಿವೃದ್ಧಿಗೋಸ್ಕರ ತಾವು ಎಚ್ ಡಿ ಕೋಟೆಯ ಕೆರೆ ಅಡಿಯಲ್ಲಿ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಆಶ್ವಾಸನೆ ನೀಡಿದ್ದು ಇದುವರೆಗೂ ಅನುಷ್ಠಾನಗೊಳಿಸಿಲ್ಲ ತಾವು 49 ಬುಡಕಟ್ಟು ಅಭಿವೃದ್ಧಿಗೋಸ್ಕರ ಅಲೆಮಾರಿ ನಿಗಮದಿಂದ ಬೇರ್ಪಡಿಸಿ ಪ್ರತ್ಯೇಕವಾಗಿ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು.
ಮಳೆ ಗಾಳಿಗಳಿಂದ ಅನೇಕ ಮನೆಗಳು ಕುಸಿದು ಬಿದ್ದಿವೆ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ ಕಾಡು ಪ್ರಾಣಿಗಳಿಂದ ಕುಟುಂಬಗಳ ರಕ್ಷಣೆ ಮಾಡಲು ಕಷ್ಟವಾಗಿದೆ ಆದ್ದರಿಂದ ಅರಣ್ಯ ಮತ್ತು ಗುಡ್ಡ ಕಾಡು ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಬುಡಕಟ್ಟು ಸಮುದಾಯಗಳಿಗೆ 5 ಲಕ್ಷ ರೂ.ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿಕೊಡಬೇಕು.
ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಮತ್ತು ಪ್ರತಿಷ್ಠಿತ ಶಾಲೆಗಳಲ್ಲಿ ಮೂಲ ಆದಿವಾಸಿಗಳಿಗೆ ಪ್ರವೇಶ ಪರೀಕ್ಷೆ ರಹಿತ ಮುಕ್ತ ಪ್ರವೇಶ ನೀಡುವ ಕುರಿತು. ಕರ್ನಾಟಕ ರಾಜ್ಯದ 30 ಬುಡಕಟ್ಟುಗಳಲ್ಲಿ ಕ್ರಮ ಸಂಖ್ಯೆ 38ರ ನಾಯಕ ಡ ಬುಡಕಟ್ಟು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಪ್ರತಿಷ್ಠಿತ ಶಾಲೆಗಳಲ್ಲಿ ಸ್ಪರ್ಧೆ ಮೂಲಕ ಪ್ರವೇಶ ಪಡೆಯುತ್ತಿದರೆ, ಉಳಿದ ಬುಡಕಟ್ಟುಗಳು ಸ್ಪರ್ಧಾತ್ಮಕ ಪರೀಕ್ಷೆ (ಐಎಎಸ್, ಕೆಎಎಸ್, ನೀಟ್, ಸಿಇಟಿ, ಬ್ಯಾಂಕಿಂಗ್ ಇತ್ಯಾದಿ) ಮತ್ತು ಪ್ರತಿಷ್ಠಿತ ಶಾಲೆಗಳಲ್ಲಿ ಸ್ಪರ್ಧೆ ಮೂಲಕ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಸರ್ಕಾರದ ಉಲ್ಲೇಖಿತ ಆದೇಶದಂತೆ ಕೊರಗ ಮತ್ತು ಜೇನು ಕುರುಬ ಅದಿದು ಅದಿವಾಸಿಗಳಿಗೆ ಪ್ರದೇಶಾತಿಯಲ್ಲಿ ಪ್ರವೇಶ ಪರೀಕ್ಷೆರಹಿತವಾಗಿ ಮುಕ್ತವಾಗಿ ಪ್ರವೇಶ ನೀಡುತ್ತಿರುವಂತೆ ಉಳಿದ ಬುಡಕಟ್ಟುಗಳಿಗೂ ಈ ಸೌಲಭ್ಯಗಳನ್ನು ವಿಸ್ತರಿಸಬೇಕು.
ಹರಿಣಿ, ಶಿಕಾರಿ, ಪಾರಿ ಆದಿವಾಸಿ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ವಿಜಯಪುರ, ಬಾಗಲಕೋಟೆ ಜಿಲ್ಲೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಎರಡು ಜಿಲ್ಲೆಗಳಿಗೆ ಎರಡು ಆಶ್ರಮ ಶಾಲೆಗಳನ್ನು ಕೂಡಲೇ ಮಂಜೂರು ಮಾಡಬೇಕು.
ಕರ್ನಾಟಕ ಸರ್ಕಾರವು ಪ್ರತಿ ವರ್ಷ ವಿಶ್ವ ಆದಿವಾಸಿ ದಿನದಂದು ಆದಿವಾಸಿ ಸಾಧಕರನ್ನು ಗುರುತಿಸಿ ಆದಿವಾಸಿ ಸಿರಿ ಎಂಬ ಹೆಸರಿನಡಿ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು.ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳ.ಆದಿವಾಸಿಗಳ ಆರಣ್ಯ ಹಕ್ಕಿನ ಸಂರಕ್ಷಣೆಗಾಗಿ ಬಹುಸಂಖ್ಯಾತ ಬುಡಕಟ್ಟುಗಳು ವಾಸವಾಗಿರುವ ಪಶ್ಚಿಮಘಟ್ಟ ಪ್ರದೇಶವನ್ನು ಅನುಸೂಚಿತ ಪ್ರದೇಶವೆಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಸರ್ಕಾರದ ಗಮನ ಸೆಳೆದು ಈಡೇರಿಸಬೇಕು ಎಂದು ಪರಿಷತ್ ಜಿಲ್ಲಾಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ರಾಜೇಂದ್ರಮನವಿಯಲ್ಲಿ ಒತ್ತಾಯಿಸಿದ್ದಾರೆ.