ಚಾಮರಾಜನಗರ. ನಗರದ ಆದರ್ಶ ವಿದ್ಯಾಲಯದಲ್ಲಿ ರೋಟರಿ ಸಂಸ್ಥೆಯ ವತಿಯಿಂದ ಅಳವಡಿಸಿರುವ ತಣ್ಣೀರು, ಬಿಸಿನೀರಿನ ಶುದ್ದ ಕುಡಿಯುವ ನೀರಿನ ಘಟಕ ಹಾಗೂ ಇಂಟರ್ಯಾಕ್ಟ್ ಕ್ಲಬ್, ಅರೋಗ್ಯ ತಪಾಸಣಾ ಶಿಬಿರವನ್ನು ಜಿಲ್ಲಾ ಗೌರ್ನರ್ ಪಿ.ಕೆ.ರಾಮಕೃಷ್ಣ ಉದ್ಘಾಟಿಸಿದರು.
ಶಾಲಾವರಣದಲ್ಲಿ ಪಿ.ಕೆ.ರಾಮಕೃಷ್ಣ ಅವರು ಹುಟ್ಟುಹಬ್ಬದ ಅಂಗವಾಗಿ ರೋಟರಿ ಸಂಸ್ಥೆಯ ವತಿಯಿಂದ ಸಸಿ ನಡೆಸಲಾಯಿತು.
ನಂತರ ಶಾಲೆಯಲ್ಲಿ ನಡೆದ ಇಂಟರ್ಯಾಕ್ಟ್ ಕ್ಲಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ,
ರೋಟರಿ ಸಂಸ್ಥೆಯು ಒಂದು ಸೇವಾ ಸಂಸ್ಥೆಯಾಗಿದ್ದು, ಆರೋಗ್ಯ, ಶಿಕ್ಷಣ, ಪರಿಸರ ಕ್ಷೇತ್ರಗಳಲ್ಲಿ ಸೇವೆ ಮಾಡುವ ಜೊತೆಗೆ ಸಾರ್ವಜನಿಕರ ಅನುಕೂಲಕರ ಕೆಲಸ ಮಾಡುತ್ತಿದೆ. ಅದೇ ರೀತಿಯಲ್ಲಿ ಚಾಮರಾಜನಗರ ಕ್ಲಬ್ ಅನೇಕ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು ಶಾಲೆಯಲ್ಲಿ ರೋಟರಿ ಇಂಟರ್ಯಾಕ್ಟ್ ಕ್ಲಬ್ ಸ್ಥಾಪಿಸುವ ವಿದ್ಯಾರ್ಥಿಗಳಲ್ಲಿ ಸೇವೆಗಿಂತ ಶ್ರೇಷ್ಠತೆ
ಎಂಬ ತತ್ವದೊಂದಿಗೆ ನಾಯಕತ್ವ ಕೌಶಲ್ಯಗಳನ್ನು ಬೆಳೆಸುವುದು ಮತ್ತು ಸಾಮಾಜಿಕ ಸೇವೆ ಮಾಡುವ ಅರಿವು ಮೂಡಿಸುತ್ತದೆ ಎಂದರು.
ಸಹಾಯಕ ಗೌರ್ನರ್ ದೊಡ್ಡರಾಯಪೇಟೆ ಗಿರೀಶ್, ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು, ಕಾರ್ಯದರ್ಶಿ ಕೆಂಪನಪುರ ಸಿದ್ದರಾಜು, ಶಾಲೆಯ ಮುಖ್ಯ ಶಿಕ್ಷಕ ಅರ್ಕಪ್ಪ ಹಾಗೂ ಪದಾಧಿಕಾರಿಗಳು ಹಾಜರಿದ್ದರು.