
ಚಾಮರಾಜನಗರ: ರಾಷ್ಟ್ರಾಭಿಮಾನ, ದೇಶಾಭಿಮಾನ, ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳುವ ಮೂಲಕ ನಾವು ಉತ್ತಮ ಪ್ರಜೆಗಳಾಗಬೇಕು ಎಂದು ಜಿಲ್ಲಾ ನೆಟ್‍ಬಾಲ್ ಅಸೋಸಿಯೇಷನ್‍ನ ಅಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ತಿಳಿಸಿದರು.
79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಗರದ ಸುಲ್ತಾನ್ ಷರೀಫ್ ವೃತ್ತದಲ್ಲಿ ವೃತ್ತದಲ್ಲಿ ಚಾಮರಾಜನಗರ ಜಿಲ್ಲಾ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಸ್ಕೇಟಿಂಗ್ ಮ್ಯಾರಾಥಾನ್‍ಗೆ ಚಾಲನೆ ನೀಡಿ ಮಾತನಾಡಿದರು.
ನಾವು ಬ್ರಿಟೀಷ್ ಆಳ್ವಿಕೆಯಿಂದ ಮುಕ್ತರಾದೆವು. ಇದಕ್ಕೆ ಕಾರಣರಾದ ಸ್ವಾತಂತ್ರ್ಯ ಯೋಧರು, ವೀರ ಸೇನಾನಿಗಳು, ಮಹನೀಯರುಗಳನ್ನು ಸ್ಮರಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಸದೃಢ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಮಹಾನೀಯರ ಆದರ್ಶ ಹಾಗೂ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ಮೂಲಕ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಸ್ಕೇಟಿಂಗ್ ಮ್ಯಾರಥಾನ್ ನಗರದ ಸುಲ್ತಾನ್ ಷರೀಫ್ ವೃತ್ತದಿಂದ ಪ್ರಾರಂಭವಾಗಿ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ ಹಾದು ಪಚ್ಚಪ್ಪ ಸರ್ಕಲ್‍ನ ಕಡೆಯಿಂದ ಜಿಲ್ಲಾಧಿಕಾರಿ ಮುಂಭಾಗ ತಲುಪಿತು.
ಈ ಸಂದರ್ಭದಲ್ಲಿ ಸಂಚಾರಿ ವಿಭಾಗದ ಸಬ್‍ಇನ್‍ಸ್ಪೆಕ್ಟರ್, ಹನುಮಂತ ಉಪ್ಪಾರ್, ಮೈಸೂರು ವಿವಿ ಕನ್ನಡ ಉಪನ್ಯಾಸಕ ಬಸವಣ್ಣ, ಅಂತರಾಷ್ಟ್ರೀಯ ಗಾಯಕ ಸಿ.ಎಂ.ನರಸಿಂಹಮೂರ್ತಿ, ಚಾಮರಾಜನಗರ ಜಿಲ್ಲಾ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಫುರ್ಖಾನ್ ಪಾಷಾ, ಅನ್ಸರ್‍ಖಾನ್, ಎಂಇಟಿ ಹೈಸ್ಕೂಲ್‍ನ ಮೊಹಮ್ಮದ್ ಅಜೀಮ್, ಮತ್ತಿತರರಿದ್ದರು.