- ಒಂದುಲಾರಿ ಲೋಡ್ ಪ್ಲಾಸ್ಟಿಕ್ ಸಂಗ್ರಹ
ಚಾಮರಾಜನಗರ: ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ನಿಂದ ಆಗುವ ದುಷ್ಪರಿಣಾಮಗಳ ಕುರಿತು ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಮರಿಯಾಲಬಸವರಾಜೇಂದ್ರ ಟ್ರಸ್ಟ್ ಹಾಗೂ ಚಾಮರಾಜನಗರ ಜೆಎಸ್ಎಸ್ ಮಹಿಳಾಕಾಲೇಜಿನ ಯುವರೆಡ್ ಕ್ರಾಸ್ ಘಟಕದ ವತಿಯಿಂದ ಜಿಲ್ಲೆಯ ಪ್ರಸಿದ್ದ ಜಲಾಶಯಗಳಲ್ಲಿ ಒಂದಾದ ಸುವರ್ಣಾವತಿ ಜಲಾಶಯದ ಬಳಿಯಿಂದ ತಾಳವಾಡಿ ಕ್ರಾಸ್ ವರಗೆ ರಸ್ತೆ ಬದಿಯಲ್ಲಿ ಜನರು ಬಿಸಾಡಿದ್ದ ಪ್ಲಾಸ್ಟಿಕ್ ಹಾದು ಸಂಗ್ರಹಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ಬಸವರಾಜೇಂದ್ರ ನರ್ಸಿಂಗ್ ಶಾಲೆ, ಜೆಎಸ್ಎಸ್ ಮಹಿಳಾಕಾಲೇಜಿನ ಯುವರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳು, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಪದಾಧಿಕಾರಿಗಳು 3 ಕಿಲೋಮೀಟರ್ ವರೆಗೂ ನಡೆದುಕೊಂಡು ರಸ್ತೆಬದಿಯಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಚೀಲದಲ್ಲಿ ತುಂಬಿ,ಲಾರಿಯೊಳಗಡೆ ಹಾಕಿದರು. 3ಕಿಮೀದೂರದವರಗೆ ಸಂಗ್ರಹವಾದ ಪ್ಲಾಸ್ಟಿಕ್ ಒಂದುಲಾರಿಭರ್ತಿಯಾಯಿತು.
ಇದೇವೇಳೆ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಜಿಲ್ಲಾಶಾಖೆ ಉಪಸಭಾಪತಿ, ಜಿಲ್ಲಾಸ್ಪತ್ರೆ ಅರವಳಿಕೆ ತಜ್ಞ ರಾದ ಡಾ.ಮಹೇಶ್ ಮಾತನಾಡಿ, ಕಾಡಂಚಿನಲ್ಲಿ ಪ್ಲಾಸ್ಟಿಕ್ ಬಿಸಾಡುವುದರಿಂದ ಕಾಡು ಪ್ರಾಣಿಗಳು ಅದಕ್ಕೆ ಬಾಯಿಹಾಕುವ ಸಂಭವವಿರುತ್ತದೆ. ಇದು ಕೊಳೆಯದ ಪದಾರ್ಥವಾಗಿರುವುದರಿಂದ ಪ್ರಾಣಿಗಳು ಮರಣಹೊಂದಲಿದ್ದು, ವನ್ಯಸಂಕುಲ ನಾಶವಾಗಲಿದೆ.
ವನ್ಯಜೀವಿಗಳ ಉಳಿವಿನ ದೃಷ್ಟಿಯಿಂದ ಕಾಡಂಚಿನ ಈ ಭಾಗದ ಗ್ರಾಮಸ್ಥರು. ವಾಹನಸವಾರರು. ಪ್ಲಾಸ್ಟಿಕ್ ಬಿಸಾಡಬಾರದು. ಪರಿಸರಸ್ನೇಹಿ ಬ್ಯಾಗ್ ಬಳಸಬೇಕು. ಇದರಿಂದ ನಾವು ಆರೋಗ್ಯವಂತರಾಗಬಹುದು, ಪರಿಸರವು ಉಳಿಯುತ್ತದೆ ಎಂದರು.
ನಾವು ಹಮ್ಮಿಕೊಂಡಿರುವ ಪ್ಲಾಸ್ಟಿಕ್ ಸಂಗ್ರಹ ಅಭಿಯಾನವನ್ನು ಮೂರುದಿನಗಳ ಹಿಂದೆ ಆರಂಭಿಸಲಾಗಿದ್ದು. ಮುಂದಿನದಿನಗಳಲ್ಲೂ ಇದು ಮುಂದುವರೆಯಲಿದೆ ಎಂದರು.
ಬಸವರಾಜೇಂದ್ರ ಆಸ್ಪತ್ರೆಯ ಪ್ರಸೂತಿ ಮತ್ತು ಸ್ರ್ತಿ ರೋಗ ತಜ್ಞೆ ಡಾ.ಶ್ವೇತಾಶಶಿಧರ್ ಸೇರಿದಂತೆ ನರ್ಸಿಂಗ್ ವಿದ್ಯಾರ್ಥಿಗಳು, ಬಿಆರ್ಟಿ ಹುಲಿಸಂರಕ್ಷಿತಾರಣ್ಯ ಪ್ರದೇಶದ ಅರಣ್ಯಾಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.