ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡಲು ಬಿಜೆಪಿಗೆ ಮತ ನೀಡಿ; ಮುಖಂಡರ ಮನವಿ
ಚಾಮರಾಜನಗರ: ನಗರದ ವಿವಿಧ ಬಡಾವಣೆಗಳಲ್ಲಿ ಬಿಜೆಪಿ ನಗರ ಮಂಡಲದ ಕಾರ್ಯಕರ್ತರು, ಮುಖಂಡರು ನಗರಸಭಾ ಸದಸ್ಯರು ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಪರವಾಗಿ ಮತಯಾಚನೆ ಮಾಡಿದರು.
ನಗರದ 17,18 ಹಾಗೂ 19 ನೇ ವಾರ್ಡುಗಳ ವಿವಿಧ ಬಡಾವಣೆಗಳಿಗೆ ಬಿಜೆಪಿ ಮುಖಂಡರಾದ ನಿಜಗುಣರಾಜು, ಜಿ. ನಾಗಶ್ರೀ ಪ್ರತಾಪ್, ನಗರಸಭಾ ಮಾಜಿ ಅಧ್ಯಕ್ಷೆ ಆಶಾನಟರಾಜು, ನಗರ ಮಂಡಲದ ಅಧ್ಯಕ್ಷ ಶಿವರಾಜ್ ನೇತೃತ್ವದಲ್ಲಿ ನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ಅಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಿಂದ ಚಾಲನೆ ನೀಡಿ, ರೈಲ್ವೆ ಬಡಾವಣೆ, ನಾಯಕರ ಬೀದಿ, ಉಪ್ಪಾರರ ಬೀದಿ ಸೇರಿದಂತೆ ಅನೇಕ ಬಡಾವಣೆಗಳಿಗೆ ಬೆಳ್ಳಂಬಳಿಗ್ಗೆಯೇ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ವರ್ಷಗಳ ಕಾಲ ಉತ್ತಮ ಆಡಳಿತ ಹಾಗು ದೇಶದ ಅಭಿವೃದ್ದಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ವಿಶ್ವ ಮಟ್ಟದಲ್ಲಿ ಭಾರತವನ್ನು ಅತಿ ಎತ್ತರಕ್ಕೆ ಕೊಂಡೊಯ್ಯುವ ಜೊತೆಗೆ ಮಹಿಳೆಯರು, ಬಡವರು ಹಾಗು ಎಲ್ಲಾ ವರ್ಗದ ಜನರಿಗೂ 300ಕ್ಕೂ ಹೆಚ್ಚು ಯೋಜನೆಗಳನ್ನು ಜಾರಿ ಮಾಡಿ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದೇಶದ ಭದ್ರತೆ ಹಾಗೂ ಸಮಗ್ರ ಅಭಿವೃದ್ದಿ ದೃಷ್ಟಿಯಿಂದ ವಿಶೇಷವಾದ ಕಾಯ್ದೆಗಳನ್ನು ಜಾರಿ ಮಾಡಿ, ಎಲ್ಲರು ಒಂದೇ ಎಂಬ ರೀತಿಯಲ್ಲಿ ನಾವೆಲ್ಲರು ಹಿಂದೂಗಳು ಎಂಬ ಏಕತೆಯನ್ನು ಮೂಡಿಸುವ ಮೂಲಕ ವಿಶ್ವಮಾನವನಾಗುವ ನಿಟ್ಟಿನಲ್ಲಿ ಮೋದಿ ಇದ್ದಾರೆ. ಇದನ್ನು ಸಕಾರಗೊಳಿಸಲು ಮತ್ತೊಮ್ಮೆ ಮೋದಿ ಸರ್ಕಾರವನ್ನು ತಾವೆಲ್ಲರು ತರಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷೆ ಸುಧಾ, ಸದಸ್ಯರಾದ ಲೋಕೇಶ್ವರಿ, ರಾಘವೇಂದ್ರ, ಕುಮುದಾ ಕೇಶವಮೂರ್ತಿ, ಜಿಲ್ಲಾ ಕಾರ್ಯದರ್ಶಿ ನಟರಾಜು, ಯುವ ಮೋರ್ಚಾ ಅಧ್ಯಕ್ಷ ಸೂರ್ಯಬಾಲರಾಜು, ಎಸ್ಟಿ ಮೋರ್ಚಾದ ರಾಜ್ಯ ಕಾರ್ಯಕಾರಣಿ ಸದಸ್ಯ ಜಯಸುಂದರ್, ಎಸ್ಟಿ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಉಪಾಧ್ಯಕ್ಷ ವಿರಾಟ್ ಶಿವು, ಮಾಜಿ ನಗರಸಭಾ ಸದಸ್ಯೆ ವನಾಜಾಕ್ಷಿ, ರಾಜೇಶ್ವರಿ, ಮುಖಂಡರಾದ ಕಿಲಗೆರೆ ಬಸವರಾಜು, ಕೂಸಣ್ಣ, ಪೆÇೀಟೋ ಕೃಷ್ಣ , ಬುಲೆಟ್ ಚಂದ್ರು, ಮಧ್ಯಮ ಸಹ ವಕ್ತಾರ ಎನ್. ಮಂಜುನಾಥ್, ಶಿವು ರಾಮಸಮುದ್ರ, ಎಸ್ಸಿ ಘಟಕದ ಅಧ್ಯಕ್ಷ ರಾಮಸಮುದ್ರ ಪರಶಿವಯ್ಯ, ಕೇಬಲ್ ರಂಗಸ್ವಾಮಿ, ಮಹೇಶ್, ಸಹ ಪ್ರಮುಖ್ ಆಶ್ವಿನ್, ಮೊದಲಾದವರು ಇದ್ದರು.