ಮನೆ ಮನೆಗೆ ನಲ್ಲಿ ಮೂಲಕ ಶುದ್ದ ನೀರು ನೀಡಿದ್ದು ಪ್ರಧಾನಿ ಮೋದಿ : ಎಂ. ರುದ್ರೇಶ್

ಅಮಚವಾಡಿಯಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ
ಚಾಮರಾಜನಗರ: ದೇಶದ ಪ್ರತಿ ಹಳ್ಳಿಗಳಲ್ಲಿರುವ ಮನೆ ಮನೆಗೆ ನಲ್ಲಿ ಮೂಲÀಕ ಶುದ್ದ ಕುಡಿಯುವ ನೀರು ಕಲ್ಪಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹಾಗೂ ಕೆಆರ್‍ಡಿಎಲ್ ಮಾಜಿ ಅಧ್ಯಕ್ಷ ಎಂ. ರುದ್ರೇಶ್ ತಿಳಿಸಿದರು.
ತಾಲೂಕಿನ ಅಮಚವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಭಾಗ ಮಾಜಿ ಮುಖ್ಯಮಂತ್ರಿ ರೈತ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟು ಹಬ್ಬದ ಅಂಗವಾಗಿ ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಗಾಟಿಸಿ ಅವರು ಮಾತನಾಡಿದರು.

ಕಳೆದ 10 ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೈತರು, ರೈತ ಮಹಿಳೆಯರು ಹಾಗೂ ಕುಗ್ರಾಮಗಳ ಅಭಿವೃದ್ದಿಗೆ ವಿಶೇಷ ಯೋಜನೆಯನ್ನು ಜಾರಿ ಮಾಡಿದರು. ಅನುಷ್ಟಾನ ಮಾಡುವುದು ಮುಖ್ಯವಲ್ಲ. ಆ ಯೋಜನೆ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ರೈತರಿಗೆ ತಲುಪಬೇಕೆಂಬ ಮಹಾದಾಸೆಯನ್ನು ನಮ್ಮ ಪ್ರಧಾನಿಗಳು ಹೊಂದಿದ್ದರು. ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಕಲ್ಪಿಸಬೇಕು. ನಮ್ಮ ಹೆಣ್ಣು ಮಕ್ಕಳು ಬಿಂದಿಗೆ ಹಿಡಿದು ಬೀದಿ ಬೀದಿಯಲ್ಲಿ ನೀರಿಗಾಗಿ ಅಲೆಯುವುದು ತಪ್ಪಾಬೇಕು ಎಂಬ ಉದ್ದೇಶದಿಂದ ನಲ್ಲಿಗಳ ಮೂಲಕ ಮನೆಗೆ ಬಾಗಿಲು ಶುದ್ದ ನೀರು ತಲುಪುವಂತೆ ಮಾಡಿದ್ದಾರೆ ಎಂದರು.

ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುವುದು ನಿಶ್ಚಿತ. ಅದೇ ರೀತಿ ರಾಜ್ಯದಲ್ಲಿ ರೈತ ನಾಯಕರಾದ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನೇತೃತ್ವದಲ್ಲಿ 28ಕ್ಷೇತ್ರದಲ್ಲಿಯು ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಮೋದಿ ಅವರಿಗೆ ರಾಜ್ಯದಿಂದ ಹೆಚ್ಚಿನ ಬೆಂಬಲವನ್ನು ನೀಡಬೇಕಾಗಿದೆ. ತಾವೆಲ್ಲರು ಪ್ರಧಾನಿ ಮೋದಿ ಅವರ ಸಾಧನೆಯನ್ನು ನೋಡಿ ಬಿಜೆಪಿಗೆ ಮತ ನೀಡಬೇಕು ಎಂದು ರುದ್ರೇಶ್ ಮನವಿ ಮಾಡಿದರು.

ಅಮಚವಾಡಿ ಗ್ರಾಮದ ಬಹಳ ದೊಡ್ಡ ಗ್ರಾಮವಾಗಿದ್ದು, ನಮ್ಮ ಸರ್ಕಾರ ಅವಧಿಯಲ್ಲಿ ಬಹಳಷ್ಟು ಅಭಿವೃದ್ದಿ ಕೆಲಸ ಮಾಡಿದ್ದೇವೆ. ಈ ಹಿಂದೆ ಹೇಳಿದಂತೆ ಅಸ್ಪತ್ರೆಗೆ ಬರುವ ರೋಗಿಗಳು ಹಾಗು ಅವರ ಸಹಾಯಕರಿಗೆ ಶುದ್ದ ಕುಡಿಯುವ ನೀರು ಕಲ್ಪಿಸಲು ಘಟಕವನ್ನು ನಿರ್ಮಿಸಲಾಗಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.

ಇದಕ್ಕೂ ಮುನ್ನಾ ಗ್ರಾಮದ ಮುಖ್ಯ ರಸ್ತೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರವರೆಗೆ ರುದ್ರೇಶ್ ಅವರಿಗೆ ಗ್ರಾಮಸ್ಥರು ಹಾಗೂ ಅವರ ಅಭಿಮಾನಿಗಳು ಭಾರಿ ಗಾತ್ರ ಹಾರ ಹಾಕಿ ಸ್ವಾಗತಿಸುವ ಜೊತೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದರು.

ಕಾರ್ಯಕ್ರಮದಲ್ಲಿ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ಮೂಡ್ಲುಪುರ ನಂದೀಶ್, ಕನಕಪುರ ಜಗದೀಶ್, ಅಮಚವಾಡಿ ಗ್ರಾ.ಪಂ. ಉಪಾಧ್ಯಕ್ಷ ಪುಟ್ಟಸ್ವಾಮಿ, ಸದಸ್ಯರಾಧ ಪುಟ್ಟಸ್ವಾಮಿ, ಕೋಮುವಾರು ಅಧ್ಯಕ್ಷ ಶ್ರೀಕಾಂತ್ ಅರಸು, ಉಪಾಧ್ಯಕ್ಷ ಮಹದೇವಸ್ವಾಮಿ, ಮಾಜಿ ಗ್ರಾ.ಪಂ. ಅಧ್ಯಕ್ಷ ಮಹೇಂದ್ರ, ಬಿಜೆಪಿ ಮಂಡಲದ ಅಧ್ಯಕ್ಷ ಅಕರಲವಾಡಿ ಮಹೇಶ್, ಉಡಿಗಾಲ ಚಂದ್ರಶೇಖರ್, ಅಯ್ಯನಪುರ ವಿಜಯೇಂದ್ರ, ಅಭಿನಂದನ್, ಕೆÀಸ್ತೂರು ಬಸವಣ್ಣ, ಮರಿಯಾಲ ಶಿವರುದ್ರಪ್ಪ, ಅಮಚವಾಡಿ ವೀರಭದ್ರನಾಯಕ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *