ಪ್ರೊ.ಮಹೇಶ್ ಚಂದ್ರ ಗುರು ಹೇಳಿಕೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

ಚಾಮರಾಜನಗರ: ಪ್ರೊ. ಮಹೇಶ್‍ಚಂದ್ರ ಗುರು ಹೇಳಿಕೆಯನ್ನು ಖಂಡಿಸಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಯುವ ಮೋರ್ಚಾ ಅಧ್ಯಕ್ಷ ಸೂರ್ಯ ಬಾಲರಾಜ್ ನೇತೃತ್ವದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಕಾಂಗ್ರೆಸ್ ಏಜೆಂಟ್ ಮಹೇಶ್ ಚಂದ್ರುಗುರು ವಿರುದ್ದ ದಿಕ್ಕಾರ ಘೋಷಣೆಗಳನ್ನು ಕೂಗಿದರು.

ಭುವನೇಶ್ವರಿ ವೃತ್ತದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ, ಮಹೇಶ್ ಚಂದ್ರ ಗುರು ಭಾವಚಿತ್ರವನ್ನು ಹರಿದು ಹಾಕಿ ಚಪ್ಪಲಿಯಲ್ಲಿ ಹೊಡೆದು ತುಳಿಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸೂರ್ಯ ಬಾಲರಾಜ್ ಮಾತನಾಡಿ, ಪ್ರೊ. ಮಹೇಶ್ ಚಂದ್ರು ಗುರು ಪ್ರೋಸೆಫೆರ್ ಆಗಿರುವುದಕ್ಕೆ ನಾಲಾಯಕ್, ವಿದ್ಯಾರ್ಥಿಗಳಿಗೆ ನೀತಿ ಪಾಠ ಹೇಳುವ ಬಾಯಿಯಲ್ಲಿ ಇಂಥ ಮಾತನಾಡಿರುವುದು ಅವರ ಸಂಸ್ಕøತಿಯನ್ನು ಬಿಂಬಿಸುತ್ತದೆ. ಪ್ರೊಫೆಸರ್ ಬದಲು ಬೇರೆ ಹೆಸರು ಸೇರ್ಪಡೆ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.

ಪ್ರಜಾಪ್ರಭುತ್ವದಲ್ಲಿ ಚುನಾವಣೆ ನಡೆಯುತ್ತದೆ. ಜನರು ಅವರಿಗೆ ಇಷ್ಟ ಬಂದ ಪಕ್ಷ ಹಾಗು ನಾಯಕರನ್ನು ಆಯ್ಕೆ ಮಾಡಿಕೊಂಡು ಅವರ ಪರ ಪ್ರಚಾರ ಮಾಡುವುದು ಮತ್ತು ಮತ ಹಾಕುವುದು ಅವರ ಹಕ್ಕಾಗಿದೆ. ಆದರೆ, ಓರ್ವ ಅನಾಗರಿಕ ವ್ಯಕ್ತಿ ಮಹೇಶ್ ಚಂದ್ರ ಗುರು ತನ್ನ ಘನತೆಯನ್ನು ಮೀರಿ ಇಂಥ ಹೇಳಿಕೆ ನೀಡುರುವುದ ಗುರು ಕುಲಕ್ಕೆ ಅಪಮಾನವಾಗಿದೆ. ಇಂಥವರಿಗೆ ಶಿಷ್ಯವೃಂದವರೇ ತಕ್ಕ ಪಾಠ ಕಲಿಸಬೇಕು.

ಇಂಥ ಕ್ರಿಮಿಗಳು ದೇಶಕ್ಕೆ ಮಾರಕವಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರೇಳುವವರು ಯಾರಿಗೆ ಹುಟ್ಟಿದ್ದಾರೆ ಎಂದು ಪ್ರಶ್ನೆ ಮಾಡುವ ನೀಚ ಬುದ್ದಿ ನಿಮ್ಮದು. ಆದರೆ ನಮ್ಮದು ಭಾರತೀಯ ಸಂಸ್ಕøತಿ ಪರಂಪರೆಯನ್ನು ಬಿಂಬಿಸುವ ದೇಶ. ಭಾರತ ಮಾತಾಕೀ ಜಯ ಎನ್ನುವ ನಮಗೆ ನಮ್ಮ ತಂದೆ ತಾಯಿ ಸಂಸ್ಕಾರ ಕಲಿಸಿ ಕೊಟ್ಟಿದ್ದಾರೆ. ನಮ್ಮ ಪಕ್ಷ ಶಿಸ್ತು ಹಾಗೂ ಸಿದ್ದಾಂತವನ್ನು ಹೇಳಿಕೊಟ್ಟಿದೆ. ಹೀಗಾಗಿ ನಾವು ತಿರುಗಿ ಆ ಪ್ರಶ್ನೆಯನ್ನು ನಿಮಗೆ ಕೇಳುವುದಿಲ್ಲ. ಈ ಕೂಡಲೇ ಮಹೇಶ್ ಚಂದ್ರ ಗುರು ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಸೂರ್ಯ ಬಾಲರಾಜ್ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಪಿ. ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಕಾರ್ಯದರ್ಶಿ ನಟರಾಜು, ನಗರ ಘಟಕದ ಅಧ್ಯಕ್ಷ ಶಿವರಾಜ್, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ್ ಭಗೀರಥ, ಟೌನ್ ಆದ್ಯಕ್ಷ ಪ್ರಥ್ವಿ ಗುರು ಪ್ರಸಾದ್,ಮಹೇಶ್,ನಾಯಕ, ಪ್ರವೀನ್, ರಾಜೇಶ್ ಬೂದಂಬಳ್ಳಿ, ಹರೀಶ್ ಪ್ರಸಾದ್, ಮಣಿಕಂಠ, ಕೂಸಣ್ಣ, ಆನಂದ್, ಮಾರ್ಕೆಟ್, ಕುಮಾರ್, ಬಂಗಾರನಾಯಕ, ಪೋಟೋ ಕೃಷ್ಣ, ಮಹೇಶ್, ಅರಳಿಕಟ್ಟೆ ಮಹೇಂದ್ರ ಮೊದಲಾವರು ಇದ್ದರು.

Leave a Reply

Your email address will not be published. Required fields are marked *