- ದೊಡ್ಡರಾಯಪೇಟೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಚಾಮರಾಜನಗರ : ತಂದೆಯ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿಕೊಂಡು ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಿರುವ ಮಕ್ಕಳು ಇತರರಿಗೆ ಮಾದರಿ ಆಗಿದ್ದಾರೆ ಎಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ತಾಲೂಕಿನ ದೊಡ್ಡರಾಯಪೇಟೆಯ ಸರ್ಕಾರಿ ಪ್ರೌಢಶಾಲಾವರಣದಲ್ಲಿ ಎ.ಆರ್.ಎಸ್.ಟ್ರಸ್ಟ್,
ಕಾವೇರಿ ಡೆಂಟಲ್ ಓರಲ್ ಮೆಡಿಸನ್ ಕ್ಲಿನಿಕ್
ವತಿಯಿಂದ ದಿ.ಎ.ರಂಗಸ್ವಾಮಿ ಮಾಸ್ಟರ್ ರವರ ಐದನೇ ವರ್ಷದ ಪುಣ್ಯಸ್ಮರಣಾರ್ಥ ಅಂಗವಾಗಿ ನಡೆದ ಉಚಿತ ಕಣ್ಣಿನ ಪಾಸಣಾ ಶಿಬಿರ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ದೊಡ್ಡರಾಯಪೇಟೆಯ ದಿ.ಎ.ರಂಗಸ್ವಾಮಿ ಮಾಸ್ಟರ್ ಅವರು ಒಬ್ಬ ಉತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಿದರು. ಜೊತೆಗೆ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದರು. ಅವರು ಕಾಲವಾದ ನಂತರ ಅವರ ಮಕ್ಕಳಾದ ಡಾ.ಆರ್.ಕೃಪಾಶಂಕರ್, ಆರ್.ಅರುಣ್‌ಕುಮಾರ್, ಆರ್.ಅಜಿತ್‌ಕುಮಾರ್ ತಂದೆ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿಕೊಂಡು ಕಳೆದ 5 ವರ್ಷಗಳಿಂದ ತಾಯಿಯ ಸಮ್ಮುಖದಲ್ಲಿ ತಾಲೂಕಿನಲ್ಲಿ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಇಂದು ಕೂಡ ಗ್ರಾಮದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿರುವುದು ಒಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಸರ್ವರಿಗೂ ಮೀಸಲಾತಿ ಕಲ್ಪಿಸಿಕೊಡುವ ಮೂಲಕ ಸಮಾನತೆ ಕೊಟ್ಟಿದ್ದಾರೆ ಎಂದರು.
ಟ್ರಸ್ಟ್ ಕಾರ್ಯದರ್ಶಿ ಆರ್. ಅರುಣ್‌ಕುಮಾರ್ ಮಾತನಾಡಿ, ನಮ್ಮ ತಂದೆಯವರಾದ ದಿ.ಎ.ರಂಗಸ್ವಾಮಿ ಮಾಸ್ಟರ್ ಅವರ ಸ್ಮರಣಾರ್ಥವಾಗಿ
ಸಮಾಜಮುಖಿ ಸೇವೆ ಮಾಡುವ ಸಲುವಾಗಿ ತಂದೆಯ ಹೆಸರಿನಲ್ಲಿ ಎ.ಆರ್.ಎಸ್.ಟ್ರಸ್ಟ್ ಸ್ಥಾಪಿಸಿಕೊಂಡು ಕಳೆದ 4 ವರ್ಷಗಳಿಂದ ಸಮಾಜಮುಖಿ ಸೇವಾ ಕಾರ್ಯಗಳಾದ ಉಚಿತ ಕಣ್ಣಿನ ತಪಾಸಣಾ ಶಿಬಿರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗಿದೆ ಎಂದರು.
ಪ್ರತಿಭಾ ಪುರಸ್ಕಾರ : ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ
ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಾದ ಮನೋಜ್‌ಕುಮಾರ್, ಲೇಖನ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ
ಎ.ಆರ್.ಎಸ್ ಟ್ರಸ್ಟ್ ಅಧ್ಯಕ್ಷ ಡಾ.ಆರ್.ಕೃಪಾಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಎಂ.ಕೆ.ಲೋಹಿತ್‌ಕುಮಾರ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಜಿ.ನಟರಾಜು ಟ್ರಸ್ಟ್‌ನ ಕಿರು ಹೊತ್ತಿಗೆ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಗೌರವಾಧ್ಯಕ್ಷೆ ಹೆಚ್.ಕೆ.ಯಶೋಧಮ್ಮ, ಖಜಾಂಚಿ ಆರ್.ಅಜಿತ್‌ಕುಮಾರ್, ಉಪಾಧ್ಯಕ್ಷ ಮಧುಸುಧಾ, ನಿರ್ದೇಶಕಿ ಮಂಗಳ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಗರತ್ನ, ಎಪಿಎಂಸಿ ನಿರ್ದೇಶಕ ಆಲೂರುಪ್ರದೀಪ್,
ಪಿಆರ್‌ಓ ವಿಜಯಕುಮಾರ್, ಯಜಮಾನರಾದ ಮಹದೇವಯ್ಯ, ಮಹದೇವಸ್ವಾಮಿ, ರಾಜಣ್ಣ ಅಶೋಕ, ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ಪ್ರತಾಪ್, ಮುಖಂಡರಾದ ರವಿಗೌಡ, ನಾಗರಾಜು, ಪವನ್
ಗ್ರಾ.ಪಂ.ಸದಸ್ಯ ಸಿ
ದ್ದರಾಜು, ಶಿಕ್ಷಕ ನಟರಾಜು, ಆಟೋ ರಾಜು, ಶಿವಶಂಕರ,
ಇತರರು ಹಾಜರಿದ್ದರು.