ಪಿಡಬ್ಲ್ಯೂಡಿ  ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘದ ಚುನಾವಣೆ :  ಶಿವಕುಮಾರ್, ವೈ.ಪಿ. ರಾಜೇಂದ್ರ ಪ್ರಸಾದ್ ಬಣದ 11 ಮಂದಿ ಆಯ್ಕೆ

ಉತ್ತಮ ಸಂಘವೆಂದು ಸಿಎಂರಿಂದ ಸಹಕಾರ ಪ್ರಶಸ್ತಿ ಪಡೆದಿದೆ ಎರಡು ಅವಧಿಯ ನಮ್ಮ ತಂಡದ ಕಾರ್ಯ ವೈಖರಿ ಗಮನಿಸಿ ಮತ್ತೆ ಅಧಿಕಾರ ನೀಡಿದ ಸದಸ್ಯರು :ಅಯ್ಯನಪುರ ಶಿವಕುಮಾರ್ ಸಂತಸ  

ಚಾಮರಾಜನಗರ: ಚಾಮರಾಜನಗರ ತಾಲೂಕು ಲೋಕೋಪಯೋಗಿ  ಇಲಾಖೆಯ ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘದ ಐದು ವರ್ಷಗಳ ಅವಧಿಯ ಅಡಳಿತ ಮಂಡಲಿಗೆ ನಡೆದ ಚುನಾವಣೆಯಲ್ಲಿ ಹಾಲಿ ಸಂಘದ ಅಧ್ಯಕ್ಷ ಅಯ್ಯನಪುರ ಶಿವಕುಮಾರ್ ,  ವೈ.ಪಿ. ರಾಜೇಂದ್ರ ಪ್ರಸಾದ್ಅವರ  ನೇತೃತ್ವದ 11 ಮಂದಿಗೆ  ಜಯಗಳಿಸುವ ಮೂಲಕ ಮತ್ತೆ ಸಂಘದ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
  ನಗರದ ಪಿಡಬ್ಲ್ಯೂಡಿ
ಕಚೇರಿ ಅವರಣದಲ್ಲಿ ಸಂಘದ ಕಚೇರಿ ಸಭಾಂಗಣದಲ್ಲಿ 12 ಮಂದಿ ನಿರ್ದೇಶಕರ ಸ್ಥಾನಗಳಿಗೆ  ಚುನಾವಣೆ ಮತದಾನ  ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ  ನಡೆಯಿತು. ಬಳಿಕ ನಡೆದ ಮತ ಎಣಿಕೆಯಲ್ಲಿ  11 ಮಂದಿ ಶಿವಕುಮಾರ್ ಬಣದವರು   ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾದರೆ,  ಮತ್ತೊಂದು ಬಣದ ಅಬ್ದುಲ್ ಅಜೀಜ್  ಆಯ್ಕೆಯಾದರು. ಇನ್ನು ಎರಡು ಸ್ಥಾನಗಗಳಿಗೆ ಅವಿರೋಧವಾಗಿ ಆಯ್ಕೆಯಾಗಿತ್ತು.
ನೂತನ ನಿರ್ದೇಶಕರಿವವರು : ಸಂಘ ನೂತನ  ನಿರ್ದೇಶಕರಾಗಿ  ಅಯ್ಯನಪುರ ಶಿವಕುಮಾರ್( 58 ಮತಗಳು) ವೈ.ಪಿ. ರಾಜೇಂದ್ರಪ್ರಸಾದ್ (61 ಮತಗಳು) ಎಂ. ರವಿ ( 62 ಮತಗಳು ) ಬಸಪ್ಪನಪಾಳ್ಯ  ನಟರಾಜು( 58 ಮತಗಳು) ಎಂ. ಶಿವಕುಮಾರ್( 57 ಮತಗಳು) ನಲ್ಲೂರು ಮಹದೇವಸ್ವಾಮಿ ಬಿ (50 ಮತಗಳು), ಶಿವಬಸವಣ್ಣ(49 ಮತಗಳು) ಎಂ.ಸಿ. ಸುರೇಂದ್ರ( 49 ಮತಗಳು) ಮಲೆಯೂರು ಎಂ.ಎ. ನಾಗರಾಜು( 48 ಮತಗಳು) ಅಬ್ದುಲ್ ಅಜೀಜ್(41 ಮತಗಳು) ನಂಜುಂಡಸ್ವಾಮಿ(41 ಮತಗಳು)ಸುಬ್ಬೇಗೌಡ (45 ಮತಗಳು )ಪಡೆದು  ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಮಹಿಳಾ ಮೀಸಲು ಕ್ಷೇತ್ರದಿಂದ ದೇವಾಜಮ್ಮಣಿ,  ಎಸ್ಟಿ ಮೀಸಲು ಕ್ಷೇತ್ರದಿಂದ ದೊರೆಸ್ವಾಮಿ ಅವಿರೋಧವಾಗಿ  ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ  ಅಧಿಕಾರಿ  ನಾಗೇಶ್ ತಿಳಿಸಿದ್ದಾರೆ.  ಸಂಘ ಸಿಇಓ ಬರ್ನಾಲ್ಟ್ ದೀಕ್ಷೀತ್ ಸಿ ಭಾಗವಹಿಸಿದ್ದರು.
ಗುತ್ತಿಗೆದಾರ ಹಿತರಕ್ಷಣೆಗೆ ಬದ್ದ :  ನೂತನ ನಿರ್ದೇಶಕರಾಗಿ ಆಯ್ಕೆಯಾದ ಶಿವಕುಮಾರ್ ಮಾತನಾಡಿ, ಸಂಘದ ಸದಸ್ಯರು ನಮ್ಮ ತಂಡದ ಮೇಲೆ ವಿಶ್ವಾಸವಿಟ್ಟು 11 ಮಂದಿಯನ್ನು  ಗೆಲ್ಲಿಸಿಕೊಡುವಲ್ಲಿ  ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ನಮ್ಮ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ  ಚಿರಋಣಿಯಾಗಿದ್ದೇವೆ.   ಕಳೆದ 2015ರಲ್ಲಿ ಸಂಘ ಸ್ಥಾಪನೆ ಗೊಂಡು  ತಾಲೂಕಿನ  ಗುತ್ತಿಗೆದಾರರನ್ನು ಅರ್ಥಿಕವಾಗಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಸಂಘ ಸಕ್ರಿಯವಾಗಿ ಕೆಲಸ ಮಾಡುತ್ತಿದೆ.   ಸಂಘದ ಸದಸ್ಯರಿಗೆ  2 ಲಕ್ಷ ದ ವರೆಗೂ  ಅರ್ಜಿ ಸಲ್ಲಿಸಿದ ಕೆಲವ  ನಿಮಿಷಗಳಲ್ಲಿ ಅವರ  ಬ್ಯಾಂಕ್ ಖಾತೆಗೆ  ಹಣವನ್ನು ಜಮಾ ಮಾಡಲಾಗುತ್ತದೆ. ಅದೇ ರೀತಿ ಸದಸ್ಯರು ಸಹ ಮರು ಪಾವತಿ ಮಾಡುತ್ತಿದ್ದಾರೆ. ಹೀಗಾಗಿ ನಮ್ಮ ಸಂಘ ಒಟ್ಟು ಷೇರು 20 ಲಕ್ಷ ರೂ. ಆಗಿದ್ದು, ಇದುವರೆಗೆ 45 ಲಕ್ಷ ರೂ.  ನಿವ್ವಳ ಲಾಭ ಬಂದಿದೆ. ಈಗ ಸಂಘದ ಖಾತೆಯಲ್ಲಿ  65 ಲಕ್ಷ ರೂ. ಇದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಯೋಜನೆಗಳು ಹಾಗೂ ಸಂಘ ಸದಸ್ಯರ ಆರ್ಥಿಕ ಸಬಲೀಕರಣಕ್ಕೆ ಕಾರ್ಯಕ್ರಮಗಳನ್ನು ರೂಪಿಸುವುದಾಗಿ ತಿಳಿಸಿದರು.
ಅಲ್ಲದೆ ಚಾಮರಾಜನಗರದಲ್ಲಿ ನಡೆದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಉತ್ತಮ ಸಂಘವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಹಕಾರ ಪ್ರಶಸ್ತಿ ಪಡೆದುಕೊಂಡಿದೆ ಎಂದರು.
ನೂತನ ನಿರ್ದೇಶಕರನ್ನು  ನಗರಸಭಾ ಮಾಜಿ ಸದಸ್ಯ ನಂಜುಂಡಸ್ವಾಮಿ,  ರಾಮಸಮುದ್ರ ಯಜಮಾನ ಪಾಪಣ್ಣ, ಹಿರಿಬೇಗೂರು ಗುರುಸ್ವಾಮಿ ಸೇರಿದಂತೆ ಅನೇಕ ಮುಖಂಡರು ಅಭಿನಂದಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

Leave a Reply

Your email address will not be published. Required fields are marked *