ರಾಜೇಂದ್ರ ಶ್ರೀಗಳ ಜಯಂತಿ : ಆರೋಗ್ಯ ತಪಾಸಣೆ ಶಿಬಿರ ಯಶಸ್ವಿ

  • 500ಕ್ಕು ಹೆಚ್ಚು ಮಂದಿ ಆರೋಗ್ಯ ತಪಾಸಣೆ : 46 ಮಂದಿಯಿಂದ ರಕ್ತದಾನ

ಚಾಮರಾಜನಗರ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ, ಯುವ ಘಟಕ ಹಾಗೂ ತಾಲೂಕು ಘಟಕ ಮತ್ತು ಜೆಎಸ್‍ಎಸ್ ಅಸ್ಪತ್ರೆ ಮೈಸೂರು ಇವರ ಸಹಯೋಗದಲ್ಲಿ ಶ್ರೀ ರಾಜೇಂದ್ರಶ್ರೀಗಳ 110ನೇ ಜಯಂತಿ ಅಂಗವಾಗಿ ನಡೆದ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಯಶಸ್ವಿಯಾಗಿ ನಡೆಯಿತು.

ನಗರದ ಸಿದ್ದಬಸವರಾಜ ಸ್ವಾಮಿ ಅನುಭವ ಮಂಟಪದಲ್ಲಿ ಬೆಳಗ್ಗೆ ಯಿಂದ ಮಧ್ಯಾಹ್ನದ ವರೆಗೆ ನಡೆದ ಆರೋಗ್ಯ ತಪಾಸಣೆ ಮತ್ತು ಯುವ ಘಟಕ ಆಯೋಜನೆ ಮಾಡಿದ್ದ ರಕ್ತದಾನ ಶಿಬಿರವನ್ನು ಪೂಜ್ಯರು ಚಾಲನೆ ನೀಡಿ ಶುಭ ಕೋರಿದರು.

ಬಳಿಕ ವೀರಶೈವ ಲಿಂಗಾಯತ ಮಹಾಸಭಾದ ಯುವ ಘಟಕದ ಸೋಮವಾರಪೇಟೆ ವಿ. ಗುರುಪ್ರಸಾದ್ ನೇತೃತ್ವದಲ್ಲಿ ಆರಂಭಗೊಂಡು ರಕ್ತದಾನ ಶಿಬಿರದಲ್ಲಿ 46 ಮಂದಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು. ಆರೋಗ್ಯ ತಪಾಸಣೆ ಶಿಬಿರದಲ್ಲಿ 500ಕ್ಕು ಹೆಚ್ಚು ಮಂದಿ ವಿವಿಧ ತೊಂದರೆವುಳ್ಳವರು ಜೆಎಸ್‍ಎಸ್ ಅಸ್ಪತ್ರೆಯ ತಜ್ಞ ವೈದ್ಯರಿಂದ ಸಲಹೆ ಸೂಚನೆಗಳನ್ನು ಪಡೆದು ಉಚಿತವಾಗಿ ಔಷಧಿಯನ್ನು ಪಡೆದುಕೊಂಡರು. ಶಿಬಿರದಲ್ಲಿಯೇ ಬಿಪಿ, ಶುಗುರ್ ಪರೀಕ್ಷೆ, ಇಸಿಜಿ, ಯಕೋ ಪರೀಕ್ಷೆ, ಕ್ಯಾನ್ಸರ್ ಪರೀಕ್ಷೆಗಳನ್ನು ಮಾಡಲಾಯಿತು.

ಶಿಬಿರದಲ್ಲಿ ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ನಗರ ಮಠದ ಶ್ರೀ ಚೆನ್ನಬಸವಸ್ವಾಮೀಜಿ, ಹರವೆ ಮಠದ ಶ್ರೀ ಸರ್ಪಭೂಷಣಸ್ವಾಮೀಜಿ, ಮೂಡುಗೂರು ಮಠದ ಶ್ರೀ ಉದ್ದನಾಸ್ವಾಮೀಜಿ, ಕಬ್ಬಳ್ಳಿ ಶ್ರೀಗಳು ಸೇರಿದಂತೆ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮೊದಲಾದ ಗಣ್ಯರು ಭಾಗವಹಿಸಿದ್ದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ತಾಲೂಕು ಅಧ್ಯಕ್ಷ ಉಗನೇದಹುಂಡಿ ಬಾಲಚಂದ್ರಮುರ್ತಿ, ಜೆಎಸ್‍ಎಸ್ ಪಿಆರ್‍ಓ ಆರ್.ಎಂ.ಸ್ವಾಮಿ, ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ಕೆ. ರವಿಕುಮಾರ್, ನಿರ್ದೇಶಕರಾದ ಬಿಸಲವಾಡಿ ಉಮೇಶ್, ಪ್ರಭುಸ್ವಾಮಿ, ರತ್ನಮ್ಮಬಸವರಾಜು, ಮುರುಡೇಶ್ವರ, ಡಿ.ಪಿ. ಜಗದೀಶ್, ನಿರಂಜನಮುರ್ತಿ, ರವಿ ಗೌಡಹಳ್ಳಿ, ಗಾಯಿತ್ರಿ ಚನ್ನಬಸಪ್ಪ, ಕಾವುದವಾಡಿ ಗುರು, ಜಿ. ಅನಿಲ್‍ಕುಮಾರ್,ಚನ್ನಪ್ಪನಪುರ ಮಲ್ಲಿಕಾರ್ಜುನಪ್ಪ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *