- ನಗರದ ಮರ್ಸಿ ಪಬ್ಲಿಕ್ ಸ್ಕೂಲ್‌ನಲ್ಲಿ .ಇಫ್ತಿಯಾರ್ ಕೂಟ
ಚಾಮರಾಜನಗರ : ಮುಸ್ಲಿಮರ ಪವಿತ್ರ ಹಬ್ಬಗಳ ಪೈಕಿ ಒಂದಾದ ರಂಜಾನ್ ಹಬ್ಬವು ಶಾಂತಿ, ಸಹೋದರತ್ವ, ದೈವಭಕ್ತಿಯ ಸಂದೇಶವನ್ನು ಸಾರುತ್ತದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಹೇಳಿದರು.
ನಗರದ ಗಾಳೀಪುರ ಬಡಾವಣೆಯಲ್ಲಿರುವ ಮರ್ಸಿ ಪಬ್ಲಿಕ್ ಸ್ಕೂಲ್‌ನಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು.
ಮುಂಜಾನೆಯಿಂದ ಸೂರ್ಯಾಸ್ತದವರೆಗೆ ಉಪಾವಾಸವಿರುತ್ತಾರೆ. ಇಸ್ತಾಂ ಐದು ಕಂಬಗಳಲ್ಲಿ ಒಂದಾದ ಉಪವಾಸವು ದೇಹ, ಮನಸ್ಸಿನ ನಿಯಂತ್ರಣವನ್ನು ಕಲಿಸುತ್ತದೆ. ದೇವನೊಬ್ಬ ನಾಮಹಲವು ಎಂಬಂತೆ ಎಲ್ಲ ಧರ್ಮಗಳು, ಜಾತಿಗಳು ಒಗ್ಗೂಡಿ. ಬಾಳಿದರೆ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಮರ್ಸಿ ಪಬ್ಲಿಕ್ ಶಿಕ್ಷಣ ಸಂಸ್ಥೆಯವರು ರಂಜಾನ್ ಪ್ರಯುಕ್ತ ಶಾಲೆಯಲ್ಲಿ ಇಫ್ತಿಯಾರ್ ಕೂಟ ಅಯೋಜಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪ್ರಮುಖರನ್ನು ಆಹ್ವಾನಿಸಿ ಆಚರಣೆ ಮಾಡುತ್ತಿರುವುದು ಒಂದು ವಿಶೇಷ, ಅರ್ಥಪೂರ್ಣ ಕಾರ್ಯಕ್ರಮ ಇದಾಗಿದೆ. ಎಲ್ಲ ಹಬ್ಬವನ್ನು ಎಲ್ಲರೂ ಸೇರಿ ಆಚರಣೆ ಮಾಡುವುದರಿಂದ ತುಂಬಾ ಸಂಭ್ರಮ ಇರುತ್ತದೆ. ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶದಲ್ಲಿ ನಾವೆಲ್ಲರೂ ಭಾರತೀಯರು, ಎಲ್ಲ ಧರ್ಮಿಯರು ಅಣ್ಣತಮ್ಮಂದಿರಂತೆ ಬಾಳಿದರೆ ದೇಶ ಕೂಡ ಅಭಿವೃದ್ಧಿ ಹೊಂದುತ್ತದೆ ಎಂದರು.
ಇಫ್ತಿಯಾರ್ ಕೂಟ ಅಯೋಜಿಸಿರುವ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಹಾಗೂ ಮುಸ್ಲಿಂ ಭಾಂದವರಿಗೆ ಈ ಮೂಲಕ ರಂಜಾನ್ ಹಬ್ಬ ಶುಭಾಶಯ ಕೋರುವೆ ಎಂದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು, ಜಿ.ಪಂ.ಸಿಇಓ ಮೋನಾರೋತ್ ಮಾತನಾಡಿ ರಂಜಾನ್ ಹಬ್ಬದ ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮದ ಗುರುಗಳಾದ ಮುಪ್ತಾಹ ಮದನಿ, ಡಾ.ರಾಹಿಪಿದಾಯಿ,ಚೂಡಾಧ್ಯಕ್ಷ ಮಹಮ್ಮದ್ ಅಸ್ಗರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಪಾಟೀಲ್, ಎಪಿಪಿ ವಸೀಂ, ಅನ್ಸರ್ ಖಾನ್, ನಗರಸಭಾ ಮಾಜಿ ಸದಸ್ಯರಾದ ಎಂ.ಮಹೇಶ್, ಅಬ್ರಾರ್ ಅಹಮದ್, ಕಲೀಲ್ ಉಲ್ಲಾ, ಮೊಹಮ್ಮದ್ ಅಮೀಕ್, ಎಂವೈಎಫ್ ಶಾಲೆಯ ಆಡಳಿತಾಧಿಕಾರಿ ಮೊಹಮ್ಮದ್ ಸಾಬೀರ್, ಹುದಾ ಪಬ್ಲಿಕ್ ಶಾಲೆ ಅಧ್ಯಕ್ಷ ಇಸಾನ್ ಜಾವಿದ್, ಬ್ರೈಟ್ ಚೇನ್ ಸ್ಕೂಲ್ ಅಧ್ಯಕ್ಷೆ ನಾಜೀಯಾ, ಎಂಇಟಿ ಶಾಲೆ ಅಧ್ಯಕ್ಷ ಮೊಹಮ್ಮದ್ ಅಜೀಂ, ಮರ್ಸಿ ಶಾಲೆಯ ಅಧ್ಯಕ್ಷ ಮುಜಾಯಿದ್, ಕಾರ್ಯದರ್ಶಿ ಸಿದ್ದಿಕ್, ಟಿಪ್ಪು ಸುಲ್ತಾನ್ ಅಸೋಸಿಯೇಷನ್ ಅಧ್ಯಕ್ಷ ಮಹಮ್ಮದ್ ಜಾವೀದ್, ವಕೀಲರಾದ ರಾಜೇಂದ್ರ, ಫೈಸಾಲ್ ಮುಸ್ಲಿಂ ಮುಖಂಡರು, ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.
ಚಾಮರಾಜನಗರದ ಗಾಳೀಪುರ ಬಡಾವಣೆಯಲ್ಲಿರುವ ಮರ್ಸಿ ಪಬ್ಲಿಕ್ ಸ್ಕೂಲ್‌ನಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಇಫ್ತಿಯಾರ್
ಕೂಟದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ, ಜಿ.ಪಂ.ಸಿಇಓ ಮೋನಾರೋತ್, ಎಸ್ಪಿ ಎಂ.ಮುತ್ತುರಾಜು ಇತರರು ಭಾಗವಹಿಸಿದ್ದರು.