ಇತ್ತೀಚಿಗೆ ಎರಡು ದಿನಗಳ ಕಾಲ ಸರ್ಕಾರಿ ಪ್ರೌಢ ಶಾಲೆ ಹೂಟಗಳ್ಳಿ, ಮೈಸೂರು ಇಲ್ಲಿ ಜಿಲ್ಲಾ ಮಟ್ಟದ ಮೈಸೂರು ನೆಟ್ಬಾಲ್ ಪ್ರೊ ಸೀಸನ್ -5 ಕ್ರೀಡಾಕೂಟವು ಜರುಗಿತು, ರಾಷ್ಟ್ರಮಟ್ಟದ ಹಲವಾರು ಕ್ರೀಡಾಪಟುಗಳು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ನೆಟ್ಬಾಲ್ ಉಪಾಧ್ಯಕ್ಷರಾದ ಶ್ರೀ ರವಿಕುಮಾರ್, ಕಾರ್ಯದರ್ಶಿ ಎಚ್.ಎಸ್. ಲೋಕೇಶ್, ಖಜಾಂಚಿ ಶ್ರೀ ಪುಟ್ಟಣ್ಣಯ್ಯ. ಎಲ್.ಎಸ್, ಹಾಗೂ ನಿರ್ದೇಶಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಹೂಟಗಳ್ಳಿ ಶಾಲೆಯ ಶ್ರೀ ಶಿವಕುಮಾರ್ .ಎಂ. ಎಸ್ ರವರು ಭಾಗವಹಿಸಿದ್ದರು.
ಇದೇ ವೇದಿಕೆಯಲ್ಲಿ ಭಗೀರಥ ಚಲನಚಿತ್ರದ ನಾಯಕ ನಟರಾದ ಶ್ರೀ ಜಯಪ್ರಕಾಶ್ .ಜೆ.ಪಿ. ರವರು ಹಾಗೂ ಎಸ್. ಕೆ. ಫೈನಾನ್ಸ್ ನ ಸುಪ್ರೀತ್ ಕುಮಾರ್ ರವರು ಭಾಗವಹಿಸಿದ್ದರು. ರಾಷ್ಟ್ರಮಟ್ಟದ ಆಟಗಾರರಾದ ಸ್ವಾತಿ. ಜಿ, ಐಶ್ವರ್ಯ.ಎಸ್.ಎಂ, ಯಶಸ್ವಿನಿ ಎಂ,ಪವಿತ್ರ ಕೆ ಮೋಹನ್ ರಾಜ್ ಜಿ, ಪವನ್, ಸುಜನ್, ಇತರರು ಭಾಗವಹಿಸಿದ್ದರು. ಅಂತಿಮ ಪಂದ್ಯದಲ್ಲಿ ಹರೀಶ್ ಗೌಡರು ತಂಡ ಹಾಗೂ ರಾಯಲ್ ಚಾಲೆಂಜರ್ಸ್ ಮೈಸೂರು ತಂಡದ ನಡುವೆ ಫೈನಲ್ಸ್ ಜರುಗಿತು. 26- 25 ಅಂಕಗಳಿಂದ ರಾಯಲ್ ಚಾಲೆಂಜರ್ಸ್ ಮೈಸೂರು ತಂಡವು ಪ್ರಥಮ ಸ್ಥಾನವನ್ನು ಗಳಿಸಿದರು. ಆರು ತಂಡಗಳ ನಡುವೆ ನಡೆದ ಲೀಗ್ ಪಂದ್ಯದಲ್ಲಿ ಅತ್ಯುತ್ತಮ ಶೂಟರ್ ಆಗಿ ಗೌತಮ್ ಗೌಡ ಎಚ್ ಎಸ್, ಆಲೌಂಡರ್ ಆಗಿ ಶಿವಲೀಲಾ ಎಸ್, ಹಾಗೂ ಉತ್ತಮ ಡಿಫೆಂಡರ್ ಆಗಿ ಭರತ್ ರವರು ಸಾಧನೆ ತೋರಿದರು.
ಇಡೀ ಕ್ರೀಡಾಕೂಟಕ್ಕೆ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಶ್ರೀಮತಿ ಸಂಗೀತ ಪಿ ವಿ ರವರು ಕ್ರೀಡಾಕೂಟದ ಯಶಸ್ಸಿಗೆ ಕಾರಣರಾದರು.
ಮೈಸೂರು ಜಿಲ್ಲಾ ಹಿರಿಯ ಮಹಿಳಾ ನೆಟ್ಬಾಲ್ ಕ್ರೀಡಾಪಟುಗಳು ಕ್ರೀಡಾಕೂಟವನ್ನು ಉತ್ತಮವಾಗಿ ಸಂಘಟಿಸಿದರು.