ಚಾಮರಾಜನಗರ: ನಗರದ ಸೋಮವಾರಪೇಟೆ – ಕರಿನಂಜನಪುರ ಶ್ರೀ ಸಿದ್ದಯ್ಯನಪುರದ ಮಾರಮ್ಮನ ದೇವಸ್ಥಾನದ ಜೀರ್ಣೋದ್ಧಾರ, ವಿಮಾನಗೋಪುರ ಕಳಶ ಪ್ರತಿಷ್ಠಾಪನೆ ಮತ್ತು ಅಂಕಪ್ರತಿಷ್ಠಾಪನಾ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು.
ಮೊದಲು ಗ್ರಾಮದ ಶನಿಮಹಾತ್ಮ ದೇವಸ್ಥಾನದ ಮುಂಭಾಗದಲ್ಲಿ ಅಂಕಪ್ರತಿಸ್ಥಾಪನಾ ಕಾರ್ಯಕ್ರಮ ನಡೆಯಿತು ನಂತರ ಗ್ರಾಮದ ಹೊರವಲಯದಲ್ಲಿರುವ ಗ್ರಾಮದೇವತೆ ಶ್ರೀಮಾರಮ್ಮನವರ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ರಮ ನಡೆಯಿತು.
ವೃಶ್ಚಿಕ ಲಗ್ನ ಬ್ರಾಹ್ಮ ಮುಹೂರ್ತದಲ್ಲಿ ಮಹಾ ಸಂಕಲ್ಪ, ಶ್ರೀ ಅಂಕದೇವತಾ ಪ್ರತಿಷ್ಠಾಪನಾ ಮತ್ತು ವಾಸ್ತುಶಿಲಾಯಂತ್ರದ ಪ್ರಾಣ ಪ್ರತಿಷ್ಠಾಪನಾ ಮತ್ತು ಗ್ರಾಮದೇವತೆ ಶ್ರೀ ಮಾರಮ್ಮನವರ ವಿಗ್ರಹ ಪ್ರತಿಷ್ಠಾಪನೆ ರುದ್ರಾಭಿಷೇಕ, ಅಲಂಕಾರ, ಅಷ್ಟೋತ್ತರ, ಗಣಹೋಮ, ನವಗ್ರಹಹೋಮ, ಮೃತ್ಯುಂಜಯ ಹೋಮ ಕದಳಿಛೇದನ ಕೂಷ್ಮಾಂಡಬಲಿ, ನೇತ್ರೋಮಿಲನ, ಪೂರ್ಣಾಹುತಿ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು.
ಶ್ರೀ ಕಬ್ಬಳ್ಳಿ ಜಂಗಮ ಮಠದ ಶ್ರೀ ಗುರುಸಿದ್ಧಸ್ವಾಮೀಜಿ,
ಶ್ರೀ ಗುರುಸ್ವಾಮಿಗಳು ಮತ್ತು ವೃಂದದವರು ವಿಮಾನಗೋಪುರ ಕಳಸರೋಹಣ ಪ್ರತಿಷ್ಠಾಪನೆ,
ಗ್ರಾಮದೇವತೆ ಮಾರಮ್ಮ ದೇವಸ್ಥಾನದ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದ ಅಂಗವಾಗಿ ಗ್ರಾಮವನ್ನು ಹಸಿರುತೋರಣ, ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತು. ಅನ್ನ ಸಂತರ್ಪಣೆ ನಡೆಯಿತು.
ಗೌಡಿಕೆ ಲೋಕೇಶ್, ನಾಡದೇಶದ ಗೌಡರು, ಶೆಟ್ಟರು.
ಗ್ರಾಮದ ಎಲ್ಲ ಕೋಮಿನ ಯಜಮಾನರು,ನಗರಸಭಾ ಮಾಜಿ ಸದಸ್ಯ ಮಹದೇವಯ್ಯ, ಮಾರಮ್ಮನ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಎಸ್.ಬಿ.ರಾಜಪ್ಪ,
ಪ್ರಧಾನ ಕಾರ್ಯದರ್ಶಿ ವೃಷಬೇಂದ್ರಪ್ಪ, ಉಪಾಧ್ಯಕ್ಷ ನಂಜುಂಡಸ್ವಾಮಿ, ಖಜಾಂಚಿ ಜಿ.ರಮೇಶ್, ಸಹ
ಕಾರ್ಯದರ್ಶಿ ಮಹದೇವ, ಮಂಜು, ಹಾಗೂ ಪದಾಧಿಕಾರಿಗಳು, ಸದಸ್ಯರು, ಕುಲಸ್ಥರು ಸೋಮವಾರಪೇಟೆ ಸಮಸ್ತ ಗ್ರಾಮಸ್ಥರು ಭಾಗವಹಿಸಿದ್ದರು.