ಚಾಮರಾಜನಗರ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಸೋಮವಾರ ನಡೆದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು.
ಮಹಾತ್ಮ ಗಾಂದಿ,ü ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಮಾತನಾಡಿದ ಅವರು ಮಹಾತ್ಮ ಗಾಂದಿ,ü ಅಂಬೇಡ್ಕರ್ ಅವರ ಅಶಯದಂತೆ ದೇಶದ ಸಮಗ್ರ ಅಭಿವೃದ್ದಿಗಾಗಿ ಕಾಂಗ್ರೆಸ್ ಪಕ್ಷ ದುಡಿಯುತ್ತಿದೆ. ರೈತರು, ಕೂಲಿ ಕಾರ್ಮಿಕರು ಮತ್ತು ದುಡಿಯುವ ವರ್ಗದವರಿಗೆ ವಿಶೇಷವಾದ ಕಾಯ್ದೆಗಳನ್ನು ನೀಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಎಲ್ಲರು ಸಮಾನವಾಗಿ ಬದುಕು ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅಂಬೇಡ್ಕರ್ ಅವರು ಅನೇಕ ರಾಷ್ಟçಗಳ ಸಂವಿಧಾನವನ್ನು ಅಧ್ಯಯನ ಮಾಡಿ, ಭಾರತಕ್ಕೆ ಒಪ್ಪುವಂತಹ ಸಂವಿಧಾನವನ್ನು ನೀಡಿದ್ದಾರೆ ಎಂದು ಬಣ್ಣಿಸಿದರು.
ಮಹಾತ್ಮ ಗಾಂದಿ,ü ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪಕ್ಷದ ಕಾರ್ಯಕರ್ತರು ಮುಖಂಡರು ಪುಷ್ಪಾರ್ಚನೆ ಮಾಡಿದರು.
ನಗರರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್,ಮುನ್ನಾ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ,ಕೆ ರವಿಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿಕ್ಕ ಮಹದೇವ್,ಆರ್,ಮಹದೇವ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಎಸ್,ಗುರುಸ್ವಾಮಿ, ಕೆಪಿಸಿಸಿ ಕಾನೂನು ವಿಭಾಗದ ರಾಜ್ಯ ಕಾರ್ಯದರ್ಶಿ ವಕೀಲ ಎಂ. ಚಿನ್ನಸ್ವಾಮಿ, ಕೆ,ಪಿ,ಸಿ,ಸಿ ಸದಸ್ಯ ಸೈಯದ್ ರಫೀ, ನಗರಸಭಾ ನಾಮನಿರ್ದೇಕ ಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನಸಮಿತಿ ಸದಸ್ಯರಾದ ಕುಮಾರ್‌ಮರಿಯದ ಹುಂಡಿ, ಕುಮಾರಸ್ವಾಮಿ,ನಗರಾಭಿವೃದ್ಧಿಪ್ರಾಧಿಕಾರದ ಸದಸ್ಯ ರಾಜು, ಪುಟ್ಟಸ್ವಾಮಿ, ದೂರಕಿ,ಕೆ,ಡಿ,ಪಿ ಸದಸ್ಯ ಶ್ರೀನಿವಾಸ್, ಮಾಜಿ ನಗರಸಭಾ ಅಧ್ಯಕ್ಚೆ ಚಿನ್ನಮ್ಮ, ಬ್ಲಾಕ್ ಕಾಂಗ್ರಸ್ ಮಹಿಳಾ ಅಧ್ಯಕ್ಷೆ ನಾಗಶ್ರೀ, ಜಿ,ಡಿ,ಪ್ರಕಾಶ್, ಕಾಂಗ್ರೆಸ್ ಪಕ್ಷದ ಕಚೇರಿಕಾರ್ಯದರ್ಶಿಎ,ಎಚ್, ನಸ್ರುಲ್‌ಖಾನ್, ನಾಗಾರ್ಜುನ್ ಪೃಥ್ವಿ, ಚೂಡಾ ಮಾಜಿ ಸದಸ್ಯ ಸುಹೇಲ್‌ಖಾನ್, ಪ್ರಚಾರ ಸಮಿತಿಬ್ಲಾಕ್ ಅಧ್ಯಕ್ಷ ಅಪ್ಸರ್‌ಅಹಮದ,ರಾಮಸಮುದ್ರ ಶಿವಮೂರ್ತಿ, ಬಸವರಾಜು, ರವಿಗೌಡ, ಮಹೇಶ್,ಪಕ್ಷದ ಕಾರ್ಯಕರ್ತರು ಇದ್ದರು.