ಟಿಪ್ಪು ಸುಲ್ತಾನ್ ರವರ ಭಾವಚಿತ್ರಕ್ಕೆ ಅಪಮಾನ ಮಾಡಿರುವವರನ್ನು ಬಂಧಿಸುವಂತೆ ಆಗ್ರಹಿಸಿ ಇಂದು ನಗರದ ಟಿಪ್ಪು ಸುಲ್ತಾನ್ ಅಸೋಸಿಯೇಷನ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಬಳಿಕಾ ಮೌಲಾನ ಅಬ್ದುಲ್ ಹಸೀಬ್ ರವರು ಮಾತನಾಡಿ, ಇತ್ತೀಚೆಗೆ ರಾಯಚೂರು ಜಿಲ್ಲೆಯ ಸಿರಿವಾರ ಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕುವ ಮೂಲಕ ಅಪಮಾನ ಮಾಡಿರುವುದು ಖಂಡನಿಯ.
ಜಾತ್ಯತೀತ ರಾಜ್ಯವಾದ ಕರ್ನಾಟಕದಲ್ಲಿ ಈರೀತಿ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವುದು ವಿಷಾದನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಲವು ದೇಶದ್ರೋಹಿ ಸಂಘಟನೆಗಳು ರಾಜ್ಯದಲ್ಲಿ ಅಶಾಂತಿಯನ್ನು ಉಂಟುಮಾಡುವ ಉದ್ದೇಶದಿಂದ ಈ ಕೃತ್ಯವನ್ನು ಮಾಡಿರೋದು ಮೇಲ್ನೋಟಕ್ಕೆ ಕಾಣುತ್ತದೆ ಹಾಗಾಗಿ ತಾವು ಈ ಕಿಡಿಗೇಡಿಗಳನ್ನು ಬಂಧಿಸಿ ಇಂತಹ ಘಟನೆಗಳನ್ನು ನಿಷೇಧ ಪಡಿಸಬೇಕು ಎಂದು ಮರುಕಳಿಸದಂತೆ ಇವರಮೇಲೆ ಕಾನೂನು ಕ್ರಮವನ್ನು ಜರುಗಿಸಿ ಇಂತಹ ಕಿಡಿಗೇಡಿಗಳನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಟಿಪ್ಪು ಸುಲ್ತಾನ್ ಸಂಘಟನೆಯ ಅಧ್ಯಕ್ಷ ಮಹಮ್ಮದ್ ಜಾವೀದ್.ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆರೀಫ್. ಕಾರ್ಯದರ್ಶಿ ಇರ್ಷಾದ್ ಅಹ್ಮದ್. ಉಪಾಧ್ಯಕ್ಷ ಶುಯೇಬ್. ಮೌಲಾನ ಸಮೀವುಲ್ಲಾ. ಅಫ್ಸರ್ ಅಹ್ಮದ್. ಅಲಿ ಸಾಬ್. ಮಹಮ್ಮದ್ ರೇಹಾನ್. ಅಬ್ದುಲ್ಲಾ ಸೇರಿದಂತೆ ಇನ್ನೀತರರು ಭಾಗಿಯಾಗಿದ್ದರು.