ಚಾಮರಾಜನಗರ: ಸಚಿವ ಸಂಪುಟದ ತೀರ್ಮಾನದಂತೆ 56342 ಖಾಲಿ ಹುದ್ದೆ ತುಂಬುವಾಗ ಒಳಮೀಸಲಾತಿ ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಡಾ.ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟ ದವತಿಯಿಂದ ನಗರದ ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು
ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಅಳವಡಿಸಿರುವ ಶೇ.15% ರ ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸಿಕೊಡಬೇಕೆಂದು ಕಳೆದ ಮೂವತ್ತೈದು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದು,
ಸರ್ವೋಚ್ಚ ನ್ಯಾಯಾಲಯದ 2024 ಆಗಸ್ಟ್ 1 ರ ತೀರ್ಪಿನಂತೆ ರಾಜ್ಯ ಸರ್ಕಾರವು ನಿವೃತ್ತ ನ್ಯಾಯ ಮೂರ್ತಿ ಹೆಚ್.ಎನ್ .ನಾಗಮೋಹನ್ ದಾಸ್ ಅವರ ನೇತೃತ್ವದ ಆಯೋಗ ರಚಿಸಿ ಸದರಿ ಆಯೋಗ ನೀಡಿದ ಶಿಫಾರಸ್ಸನ್ನು ಪರಿಶೀಲಿಸಿದ ಸರ್ಕಾರ ತನ್ನ ವಿವೇಚನೆ ಮೇಲೆ ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಪರಿಶಿಷ್ಟರ ಮಾದಿಗ ಜನಾಂಗಕ್ಕೆ ಶೇ.6% ಹೊಲೆಯ ಸಂಬಂಧಿಸಿದ ಶೇ.6% ಮತ್ತು ಕೊಲಂಬೋ ಜಾತಿಗಳಿಗೆ ಶೇ.5% ರ ಹಂಚಿಕೆ ಮಾಡಿ ಉಭಯ ಸದನಗಳಲ್ಲಿ ಅಂಗೀಕರಿಸಿ ರಾಜ್ಯ ಪಾಲರ ಅಂಕಿತ ಪಡೆದು ಅನುಮೋದನೆಯಾಗಿರುತ್ತದೆ.
ಈ ಮೇಲಿನ ವಾಸ್ತವ ಅಂಶದ ಹಿನ್ನೆಲೆಯಲ್ಲಿ
ರಾಜ್ಯ ಸರ್ಕಾರ 2026 ಫೆಬ್ರವರಿ 26ರ ಸಚಿವ ಸಂಪುಟ ಸಭೆಯಲ್ಲಿ 56,342 ಹುದ್ದೆಗಳನ್ನು ಒಳಮೀಸಲಾತಿ ರಹಿತವಾಗಿ ತುಂಬಲು ತೀರ್ಮಾನಿಸಿರುವುದು ಮಾದಿಗ ಜನಾಂಗಕ್ಕೆ ತೀರ ಆಘಾತವಾಗಿರುವುದರಿಂದ ರಾಜ್ಯಾದ್ಯಂತ ನಮ್ಮ ಸಮುದಾಯ ಒಕ್ಕೊರನಿಂದ ಒತ್ತಾಯಿಸಿ ಪ್ರತಿಭಟನೆ ಹಾದಿ ತುಳಿಯಲು ಸರ್ಕಾರವೆ ಅವಕಾಶಮಾಡಿ ಕೊಟ್ಟಂತಾಗಿದೆ. ಪರಿಣಾಮವಾಗಿ ಸರ್ಕಾರ
2026 ಮಾ.5 ರ ಸಚಿವ ಸಂಪುಟದಲ್ಲಿ 56,342 ಹುದ್ದೆ ತುಂಬಲು ಹಳೆ ಮೀಸಲಾತಿಯಲ್ಲಿ ಒಳ ಮೀಸಲಾತಿ ಅಳವಡಿಸಿಕೊಂಡು ಮಾದಿಗ ಸಮುದಾಯಕ್ಕೆ ಅನ್ಯಾಯವಾಗದಂತೆ ಒಳ ಮೀಸಲಾತಿ ಅಳವಡಿಸಿಕೊಂಡು ಹುದ್ದೆ ತುಂಬಲು ಕ್ರಮವಹಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಡಾ.ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ಡಾ. ಬಾಬು ಜಗಜೀವನರು ಸಂಘಟನೆಗಳ ಒಕ್ಕೂಟದ ಗೌರವ ಅಧ್ಯಕ್ಷ ಬಸವನಪುರ ರಾಜಶೇಖರ್, ಜಿಲ್ಲಾಧ್ಯಕ್ಷ ಹೆಚ್.ಹೆಚ್. ನಾಗರಾಜು, ಜಿಲ್ಲಾ ಗೌರವ ಸಲಹೆಗಾರ ಜವರಯ್ಯ, ಜಿಲ್ಲಾ ಉಪಾಧ್ಯಕ್ಷರಾದ ಬ್ಯಾಂಕ್ ಬಸವರಾಜು, ವಕೀಲ ಬೂದಿತಿಟ್ಟು ರಾಜೇಂದ್ರ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಹಸಗೂಲಿಸಿದ್ದಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಶಿವಕುಮಾರ್, ಸಹ ಕಾರ್ಯದರ್ಶಿ ರಾಮಸಮುದ್ರ ಶಿವಕುಮಾರ್, ವಕೀಲರಾದ ಬೂದಿತಿಟ್ಟು ರಾಜೇಂದ್ರ, ಸಿದ್ದಯ್ಯ, ಸಿದ್ದೇಶ್, ಖಜಾಂಚಿ ದ್ವಾರ್ಕಿ ಬಸವರಾಜು,ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಗೋಪಿ, ಗೌರವ ಅಧ್ಯಕ್ಷ ಶಿವವಲ್ಲು, ಪ್ರಧಾನ ಕಾರ್ಯದರ್ಶಿ ಮಧು, ಯಳಂದೂರು ತಾಲೂಕು ಅಧ್ಯಕ್ಷ ಕೆಸ್ತೂರುಮರಪ್ಪ, ಎಲ್‌ಐಸಿ ಸಿದ್ದರಾಜು, ಸಿ. ಎಚ್.ರಂಗಸ್ವಾಮಿ, ಹನೂರು ಗುರುಸ್ವಾಮಿ, ಕಾಮಗೆರೆ ಮಹದೇವು, ಗಣೇಶ್, ಗುಂಡ್ಲುಪೇಟೆ ಶಂಕರ್, ನಾಗಮಲ್ಲು, ಬೆಳ್ಳಿಯಪ್ಪ, ವೆಲ್ಡಿಂಗ್ ಲಿಂಗರಾಜು, ಸುಂದರ್, ಮೂಡಹಳ್ಳಿ ಮೂರ್ತಿ, ಚನ್ನಬಸವಯ್ಯ, ರೇವಣ್ಣ, ಮುಳ್ಳೂರು ಮಾದೇಶ್, ಸುನೀಲ್, ಸುಂದರ್, ನಾಗಮಲ್ಲು, ಗುರುಲಿಂಗಯ್ಯ, ಅರಕಲವಾಡಿ ಮಹದೇವಯ್ಯ, ವೈ.ಎಸ್.ನಾಗರಾಜು, ಪಾಪಣ್ಣ, ರಾಜು, ಶಿವಕುಮಾರ್ ಇತರರು ಹಾಜರಿದ್ದರು.