ಚಾಮರಾಜನಗರ: ನಗರದ ಹೊರವಲಯದಲ್ಲಿ ಮಾಲಗೆರೆ ಕೆರೆಯಿಂದ ನಗರದ ದೊಡ್ಡರಸನ ಕೊಳಕ್ಕೆ ನೀರು ತುಂಬಿಸಿ ನಗರದಲ್ಲಿ ಅಂತರ್ಜಲ ವೃದ್ದಿಸುವಂತೆ ಕೆಪಿಸಿಸಿ ಸದಸ್ಯರು, ಮಾಜಿ ಚೂಡಾಧ್ಯಕ್ಷರಾದ ಸೈಯದ್ ರಫೀ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.
ಇಂದು ಸಂಜೆ ನಗರದ ಜಿಲ್ಲಾಡಳಿತ ಭವನಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.
ಮಳೆಯ ಅಭಾವದಿಂದ ಈಗಾಗಲೇ ನಗರದಲ್ಲಿ ಅಂತರ್ಜಲ ಕ್ಷೀಣಿಸುತ್ತಿದ್ದು, ಅನೇಕ ಬೋರ್ವೆಲ್ ಗಳಲ್ಲಿ ನೀರು ಇಲ್ಲದೆ ನಗರದ ಜನತೆ ಪರಿತಪಿಸುವಂತಾಗಿದೆ. ಸದ್ಯದಲ್ಲೇ ಮಳೆಯಾಗದಿದ್ದರೆ ಜನತೆ ಕುಡಿಯುವ ನೀರಿಗಾಗಿ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ಆಗಾಗಿ ತಕ್ಷಣವೇ ತಮ್ಮ ಅನುದಾನದಲ್ಲಿ ನಗರದ ಸಮೀಪದಲ್ಲಿರುವ ಮಾಲಗೆರೆ ಕೆರೆಯಿಂದ ನಗರದ ದೊಡ್ಡರಸನ ಕೊಳಕ್ಕೆ ನೀರು ತುಂಬಿಸುವ ಮೂಲಕ ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಬೇಕು ಅಲ್ಲದೆ ಪ್ರತಿ ವರ್ಷವೂ ಗಣಪತಿ ವಿಸರ್ಜನೆ ಗೆ ಅನುಕೂಲವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿಕೊಂಡರು.
ಸೈಯದ್ ರಫೀ ಅವರ ಮನವಿಗೆ ಸ್ಪಂದಿಸಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.