ಚಾಮರಾಜನಗರ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರ ಮುಂದುವರೆಸಲು ಕೇಂದ್ರದಿಂದ ಸ್ಪಂದನೆ

ಲೋಕ ಸಭಾ ಸದಸ್ಯರಾದ ಸುನೀಲ್ ಬೋಸ್ ಮಾಡಿದ ಮನವಿಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ

ಚಾಮರಾಜನಗರ: ಚಾಮರಾಜನಗರದಲ್ಲಿರುವ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರವನ್ನು ಚಾಮರಾಜನಗರದಲ್ಲಿಯೇ ಮುಂದುವರೆಸಲು ಹಾಗೂ ಈ ಸಂಶೋಧನಾ ಸಂಸ್ಥೆಗೆ ಅಗತ್ಯ ಮಾನವ ಸಂಪನ್ಮೂಲ ಮತ್ತು ಅನುದಾನ ನೆರವು ಒದಗಿಸಲು ಕೋರಿ ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ಮಾಡಿದ್ದ ಮನವಿಗೆ ಕೇಂದ್ರ ಜವಳಿ ಸಚಿವರಾದ ಗಿರಿರಾಜ್ ಸಿಂಗ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರಿಗೆ ಕೇಂದ್ರ ಜವಳಿ ಸಚಿವರಾದ ಗಿರಿರಾಜ್ ಸಿಂಗ್ ಅವರು ಪತ್ರ ಬರೆದಿದ್ದಾರೆ.

ಚಾಮರಾಜನಗರದಲ್ಲಿರುವ ರೇಷ್ಮೆ ಪ್ರಾದೇಶಿಕ ಸಂಶೋಧನಾ ಕೇಂದ್ರವನ್ನು ಚಾಮರಾಜನಗರದಲ್ಲಿಯೇ ಮುಂದುವರೆಸಲು ಮತ್ತು ರೇಷ್ಮೆ ಕ್ಷೇತ್ರ ಹಾಗೂ ಗ್ರಾಮೀಣ ಭಾಗದ ಆರ್ಥಿಕತೆ ಹಿತಾಸಕ್ತಿಯಿಂದ ರೇಷ್ಮೆ ಸಂಶೋಧನಾ ಸಂಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಅಗತ್ಯವಿರುವ ಮಾನವ ಸಂಪನ್ಮೂಲ ಹಾಗೂ ಹಣಕಾಸು ನೆರವು ಕೋರಿ ಕಳೆದ ಜುಲೈ 24 ರಂದು ತಾವು ಕಳುಹಿಸಿರುವ ಪತ್ರವನ್ನು ಸ್ವೀಕರಿಸಲಾಗಿದೆ.ತಮ್ಮ ಮನವಿ ಕುರಿತು ಅಗತ್ಯ ಕ್ರಮವಹಿಸಲು ಸಂಬಂಧಿಸಿದ ವಿಭಾಗಕ್ಕೆ ತಮ್ಮ ಪತ್ರವನ್ನು ಕಳುಹಿಸಲಾಗಿದೆ ಎಂದು ಕೇಂದ್ರ ಜವಳಿ ಸಚಿವರು ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *