- 1.50 ಕೋಟಿ ವೆಚ್ಚ ದ ರಸ್ತೆ ಅಭಿವೃದ್ಧಿ ಕಾಮಗಾರಿ ಚಾಲನೆ
ಚಾಮರಾಜನಗರ: ತಾಲೂಕಿನ ಹರವೆ ಭಾಗದ ಗ್ರಾಮ ಸಂಪರ್ಕ ಗಳ ರಸ್ತೆಯ ಅಭಿವೃದ್ಧಿ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಹೆಚ್.ಎಂ.ಗಣೇಶಪ್ರಸಾದ್ ಹೇಳಿದರು.
ಕ್ಷೇತ್ರದ ಮಲೆಯೂರು ಗ್ರಾಮದ ಸೋಮೇಶ್ವರ ದೇವಸ್ಥಾನದ ರಸ್ತೆಯಿಂದ ಹರವೆ ಮಾರ್ಗದ 1 ಕಿ.ಮಿ ರಸ್ತೆ ಅಭಿವೃದ್ಧಿ 1.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಗುಂಡ್ಲುಪೇಟೆ ಕ್ಷೇತ್ರವ್ಯಾಪ್ತಿಗೆ ಹರವೆ ಹೋಬಳಿ 5 ಪಂಚಾಯತಿ ಗಳು ಸೇರ್ಪಡೆ ಯಾದ ಬಳಿಕ ನಮ್ಮ ತಂದೆ ಮಾಜಿ ಸಚಿವರಾದ ದಿವಂಗತ ಹೆಚ್.ಎಸ್.ಮಹದೇವಪ್ರಸಾದ್ ಅವರು ವಿಶೇಷ ಆಶಕ್ತಿ ವಹಿಸಿ ಈ ಭಾಗದ ಮೂಲಭೂತ ಸೌಲಭ್ಯಗಳಾದ ರಸ್ತೆ, ಕುಡಿಯುವ ನೀರು, ಶಾಲಾ-ಕಾಲೇಜು ಅಭಿವೃದ್ಧಿ, ಸಮುದಾಯ ಭವನಗಳ ನಿರ್ಮಾಣ, ಸನುಧಾಯ ಆಧರಿತ ಕಾರ್ಯಕ್ರಮಗಳ ಹೆಚ್ಚು ಒತ್ತು ನೀಡಿದರು ನಂತರ ನಮ್ಮ ತಾಯಿ ಮಾಜಿ ಸಚಿವರಾದ ಗೀತಾಮಹದೇವಪ್ರಸಾದ್ ಈಗ ನಾನು ಶಾಸಕನಾಗಿ ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ.ಕಳೆದ ಎರಡು ವರ್ಷಗಳ ಅವಧಿಯಲ್ಲಿ ಈ ಭಾಗದ ರಸ್ತೆಗಳ ಅಭಿವೃದ್ಧಿ 10 ಕೋಟಿ ವೆಚ್ವ ಮಾಡಲಾಗಿದೆ.
ಎಂದರು.
ಮಲೆಯೂರಿನಿಂದ ಹರವೆ ಮಾರ್ಗದ ರಸ್ತೆ ಯು ಶಿಥಿಲಗೊಂಡಿದ್ದು, ಪಿಡಬ್ಲೂಡಿ ಇಲಾಖೆ ಯಿಂದ ಮೊದಲ ಹಂತ ಮರೆಯೂರಿನಿಂದ 1 ಕಿ.ಮೀ.ರಸ್ತೆ ಅಭಿವೃದ್ಧಿ ಹಾಗೂ ಎರಡನೇಯ ಹಂತದಲ್ಲಿ 1 ಕೋಟಿ ವೆಚ್ಚದಲ್ಲಿ ಹರವೆ ಗುಂಡ್ಲರಸ್ತೆ ಅಭಿವೃದ್ಧಿ ಗೆ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿಜಿ.ಪಂ.ಮಾಜಿ ಸದಸ್ಯ ನವೀನ್ ಕೆರೆಹಳ್ಳಿ, ಮುಖಂಡರಾದ ಮೂಡ್ನಾಕೂಡು ಕುಮಾರ್, ಮಲೆಯೂರು ಅನಂದ್, ರಾಜಪ್ಪ, ನಾಗಪ್ಪ, ಎಂ.ಬಿ.ರೇವಣ್ಣ, ಹರವೆ ರಂಗಸ್ವಾಮಿ, ನಾಗೇಶ್, ಮಹಾದೇವಸ್ವಾಮಿ, ಸಿ.ಸಿದ್ದರಾಜು, ಕೆರೆಹಳ್ಳಿ ರೇವಣ್ಣ, ಮಲೆಯೂರು ಗಿರೀಶ್, ಗುರುಸಿದ್ದೇಗೌಡ, ಕೆಬ್ಬೇಪುರ ಹರೀಶ್, ಗುತ್ತಿಗೆದಾರ ಮಂಜುನಾಥ್ಇತರರು ಹಾಜರಿದ್ದರು.