ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಸದನದಲ್ಲಿ ಧ್ವನಿಎತ್ತುಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಚಾಮರಾಜನಗರ ತಾಲೂಕು ಸಮಿತಿ ವತಿಯಿಂದ ನಗರದ ಪ್ರವಾಸಿಮಂದಿರದಲ್ಲಿ ಎಂಎಸ್ಐಎಲ್ ಅಧ್ಯಕ್ಷರು, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.
ವರ್ಷದೊಳಗಿನ ಮಕ್ಕಳು ಐಸಿಡಿಎಸ್ ನಡಿಯಲ್ಲಿರುವುದನ್ನು ಖಾತರಿಪಡಿಸಿ, ಎಲ್ಲ ಅಂಗನವಾಡಿ ನೌಕರರನ್ನು ಕನಿಷ್ಠಕೂಲಿಯ ಕಾಯ್ದೆಯ ವ್ಯಾಪ್ತಿಗೆ ತಂದು ಇಎಸ್ ಐ, ಪಿಎಫ್ ನ್ನು ಕೊಡಬೇಕು.
ಅಂಗನವಾಡಿ ಕೇಂದ್ರಕ್ಕೆ ಸರಬರಾಜು ಮಾಡುವ ಆಹಾರ ಪದಾರ್ಥಗಳು ಗುಣಮಟ್ಟ ಸರಿ ಇಲ್ಲದ ಕಾರಣ ಬಿಎಸ್ ಪರವಾನಿಗೆ ರದ್ದು ಮಾಡಿ ಸ್ಥಳೀಯವಾಗಿ ಸಿಗುವ ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ಥಳೀಯ ಆಹಾರ ಸರಬರಾಜು ಮಾಡಬೇಕು.
ಶಿಶು ಅಭಿವೃದ್ಧಿ ಯೋಜನೆಗಾಗಿ ದುಡಿದು ಬರಿಗೈಯಲ್ಲಿ 2011 ರಿಂದ 2023 ಮಾರ್ಚ್ ತನಕ ನಿವೃತ್ತರಾದ ಕಾರ್ಯಕರ್ತೆ ಸಹಾಯಕಿಯರಿಗೂ ಕೂಡಲೇ ಗ್ರಾಚ್ಯುಟಿ ಹಣ 183 ಕೋಟಿ ಕೂಡಲೇ ಬಿಡುಗಡೆ ಮಾಡಬೇಕು, ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ ತುಂಬಬೇಕು ಮತ್ತು ಇಲಾಖೆಯಲ್ಲಿ ಖಾಲಿ ಇರುವ ಮೇಲ್ವಿಚಾರಕಿ, CDPO ಹುದ್ದೆ ತುಂಬಬೇಕು.ಚುನಾವಣೆ ಕೆಲಸಗಳಿಂದ ಅಂಗನವಾಡಿ ನೌಕರರನ್ನು ಬಿಡುಗಡೆ
ಮತ್ತು ನಗರ ಪ್ರದೇಶಗಳಲ್ಲಿ BLO ಕಾರಣಗಳಿಂದ ವಜಾಗೊಳಿಸಿರುವ ಕಾರ್ಯಕರ್ತೆಯರ ವಜಾ ಅಮಾನತ್ತು ತೆರವು ಗೊಳಿಸಬೇಕು.
ನಗರ ಪ್ರದೇಶಗಳಲ್ಲಿ ಸಹಾಯಕಿ ಆಯ್ಕೆಗೆ ಇರುವ ಮಾನದಂಡ ಬದಲಾಯಿಸಬೇಕು ಇರುವ ಖಾಲಿ ಹುದ್ದೆ ಬೇಗ ತುಂಬಬೇಕು. ಮುಂಗಡವಾಗಿ ಮೊಟ್ಟೆ, ಬಾಡಿಗೆ, ಗ್ಯಾಸ್, ಕರೆಸಿ ಹಣ, ತರಕಾರಿ, ಆಡಳಿತ ವೆಚ್ಚ. ಸಾದಿಲ್ವಾರು ಹಾಕದೇ ಫಲಿತಾಂಶ ಕೇಳಬಾರದು. ಇಲಾಖೆ ಸಚಿವರು ಒಪ್ಪಿಕೊಂಡಂತೆ ಸಾಮೂಹಿಕ ಆರೋಗ್ಯ ವಿಮೆ ಜಾರಿ ಮಾಡಬೇಕು. ಅಂಗನವಾಡಿ ನೌಕರರಿಗೆ ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ವೇತನ ಕೊಡಬೇಕು.
- FRS ಕೈಬಿಡಬೇಕು ಅಂಗನವಾಡಿ ಕೇಂದ್ರಕ್ಕೆ ಗುಣಮಟ್ಟದ ಮೊಬೈಲ್ ನೀಡಬೇಕು ಮತ್ತು WI-FI ನೀಡಬೇಕು. 12. ರಾಜ್ಯ ಸರ್ಕಾರ ಮತ್ತು ಖಾಸಗೀ ವಲಯಗಳಲ್ಲಿ ದುಡಿಯುವ ಮಹಿಳೆಯರಿಗೆ ನೀಡಿರುವ ಮುಟ್ಟಿನ ರಜೆ
ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಗೂ ಜಾರಿ ಆಗಬೇಕು.. ಅಂಗನವಾಡಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಅನ್ವಯ ಮಾಡಿ ಜಾರಿ ಮಾಡಬೇಕು. ನಿವೃತ್ತರಾದವರಿಗೆ ಇಡಿಗಂಟು ಹೆಚ್ಚಳ ಮಾಡಬೇಕು ಹಾಗೂ ಮಾಸಿಕ 10 ಸಾವಿರ ಪಿಂಚಣಿ ನೀಡಬೇಕು.. ICDS ಪ್ರತ್ಯೇಕ ನಿರ್ದೇಶನಾಲಯ ಮಾಡಬೇಕು.
ಮೊಟ್ಟೆ ನೀಡುವ ಬದಲಿಗೆ ನೇರ ನಗದು ಜಮಾವಣೆ ಡಿಬಿಟಿ ತರುತ್ತಿರುವುದನ್ನು ಕೈಬಿಡಬೇಕು.. ಬಜೆಟ್‌ನಲ್ಲಿ ಅಂಗನವಾಡಿ ನೌಕರರಿಗೆ ಗೌರವಧನ ಹೆಚ್ಚಳ ಮಾಡಿಲ್ಲ. ಚುನಾವಣಾ ಸಂದರ್ಭದಲ್ಲಿಯ ಭರವಸೆ ನೀಡದಂತೆ ತಕ್ಷಣ ವೇತನ ಹೆಚ್ಚಳ ಮಾಡಬೇಕು. ಈ ಎಲ್ಲ ಬೇಡಿಕೆಗಳ ಈಡೇರಿಸುವಂತೆ ಸದನದಲ್ಲಿ ನಮ್ಮ ಪರ ಧ್ವನಿಎತ್ತಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ತಾಲೂಕು ಸಮಿತಿ ಅಧ್ಯಕ್ಷೆ ಎ.ನಾಗಮಣಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಶಾಹಿದಾಬಾನು, ಖಜಾಂಚಿ ಎನ್.ಎಸ್. ಗುರುಲಿಂಗಮ್ಮ,ಕಾರ್ಯಕರ್ತೆ ನೀಲಮ್ಮ ಹಾಜರಿದ್ದರು.