ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಗುಲಾಬಿ ಹೂ, ಪೆನ್ನು, ಚಾಕೊಲೇಟ್ ನೀಡಿ ಶುಭ ಕೋರಿದ ರೋಟರಿ ಸಂಸ್ಥೆ

ಚಾಮರಾಜನಗರ:   ಇಂದಿನಿಂದ ಆರಂಭವಾದ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿ ಬಂದ ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆ ವತಿಯಿಂದ ಗುಲಾಬಿ ಹೂ, ಪೆನ್ನು , ಚಾಕೊಲೇಟ್ ನೀಡಿ ಶುಭ ಕೋರಲಾಯಿತು.
  ಜಿ.ಪಂ.ಮಾಜಿ ಸದಸ್ಯ ರೋಟರಿ ರತ್ನಮ್ಮ ಬಸವರಾಜು ಮಾತನಾಡಿ,    ವಿದ್ಯಾರ್ಥಿ ಜೀವನದಲ್ಲಿ ಎಸ್ ಎಸ್ ಎಲ್ ಸಿ ಪ್ರಮುಖ ಘಟ್ಟವಾಗಿದೆ. ಆಗಾಗಿ ವಿದ್ಯಾರ್ಥಿಗಳು ಧೈರ್ಯದಿಂದ ಚೆನ್ನಾಗಿ ಪರೀಕ್ಷೆ ಬರೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ರಾಜ್ಯದಲ್ಲೇ ಚಾಮರಾಜನಗರ ಜಿಲ್ಲೆಯು ಫಲಿತಾಂಶ ದಲ್ಲಿ ಪ್ರಥಮಸ್ಥಾನಕ್ಕೆ ಬರುವಂತಾಗಲಿ ಎಂದು ಆಶಿಸಿದರು.
ರೋಟರಿ ಮಾಜಿ ಅಧ್ಯಕ್ಷ ನಾರಾಯಣ್ ಮಾತನಾಡಿ, ಕಳೆದ 20 ದಿನಗಳಿಂದಲೂ ನಗರದ ಬಾಲಕ ಮತ್ತು ಬಾಲಕಿಯರ  ಪದವಿಪೂರ್ವ ಕಾಲೇಜಿನಲ್ಲಿ ವಿಶೇಷ ತರಗತಿ ಮಕ್ಕಳಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿದ್ದು. ಇಂದು ನಗರದ 5 ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆ ಬರೆದ ಬಂದ ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆ ವತಿಯಿಂದ ಗುಲಾಬಿ ಹೂ, ಚಾಕೊಲೇಟ್, ಪೆನ್ನು ನೀಡಿ ಸ್ವಾಗತಿಸಲಾಯಿತು ಎಂದರು.
    ಈ ಸಂದರ್ಭದಲ್ಲಿ ಯೋಗರಾಜ್, ಸಹ ಕಾರ್ಯದರ್ಶಿ ಜಿ.ಅಂಕಶೆಟ್ಟಿ,  ನೇಮಿರಾಜ್, ಮಹಾದೇವಸ್ವಾಮಿ, ಮಹದೇವಪ್ರಸಾದ್, ಸಿದ್ದಮಲ್ಲಪ್ಪ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *