- ರೋಟರಿ ಸಂಸ್ಥೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ
- 290 ಮಂದಿ ತಪಾಸಣೆ, 145 ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆ
ಚಾಮರಾಜನಗರ: ರೋಟರಿ ಸಂಸ್ಥೆ ಕೈಗೊಳ್ಳುವ ಪ್ರತಿಯೊಂದು ಕಾರ್ಯಕ್ರಮಗಳು ಸಹ ಸಾಮಾನ್ಯ ಜನರ ರಕ್ಷಣೆ ಹಾಗೂ ಉತ್ತಮ ಆರೋಗ್ಯ ವಂತ ಸಮಾಜ ನಿರ್ಮಾಣ ಮಾಡುವಲ್ಲಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ರೋಟರಿ ಸಂಸ್ಥೆಯ ಅಧ್ಯಕ್ಷ ಕಾಗಲವಾಡಿ ಚಂದ್ರು ತಿಳಿಸಿದರು.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ, ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ, ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿ ತಿಂಗಳ ಮೊದಲ ಭಾನುವಾರ ರೋಟರಿ ಯಿಂದ ನಡೆಯುವ ಕಣ್ಣಿನ ಉಚಿತ ತಪಾಸಣೆ ಶಿಬಿರ ಬಹಳ ಯಶಸ್ವಿಯಾಗುತ್ತಿದೆ. ಇದುವರೆಗೆ ಲಕ್ಷಾಂತರ ಮಂದಿ ಕಣ್ಣಿನ ದೃಷ್ಟಿಯನ್ನು ಮರು ಪಡೆದುಕೊಂಡಿದ್ದಾರೆ. ಪ್ರತಿ ತಿಂಗಳು ನೂರಾರು ಮಂದಿ ಕಣ್ಣಿನ ತೊಂದರೆಯುಳ್ಳವರು ಬರುತ್ತಿದ್ದಾರೆ. ಸಾಕಷ್ಟು ಮಂದಿಯನ್ನು ಅರವಿಂದ ಕಣ್ಣಾಸ್ಪತ್ರೆಗೆ ಕಳುಹಿಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡುತ್ತಿದ್ದೇವೆ. ಜೊತೆಗೆ ನಿರಂತರವಾಗಿ ಅವರ ಕಣ್ಣಿನ ಆರೋಗ್ಯ ಬಗ್ಗೆ ನಿಗಾ ವಹಿಸಲಾಗುತ್ತದೆ. ಪ್ರತಿ ತಿಂಗಳು ಮೊದಲ ಭಾನುವರ ನಡೆಯುವ ಶಿಬಿರಕ್ಕೆ ಬಂದು ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚನೆ ಕೊಡುತ್ತಿದ್ದೇವೆ. ಇದೊಂದು ರೋಟರಿ ಸಾರ್ಥಕ ಸೇವೆಯಾಗಿದೆ. ಉತ್ತಮ ಪರಿಸರ, ಆರೋಗ್ಯ ಹಾಗೂ ಪ್ರತಿಭಾಪುರಸ್ಕಾರ ಸೇರಿದಂತೆ ಉತ್ತಮ ಸಮಾಜ ನಿರ್ಮಾಣ ಮಾಡಲು ರೋಟರಿ ಸೇವಾ ಕಾರ್ಯಗಳು ಮುಂಚೂಣಿಯಲ್ಲಿವೆ ಎಂದರು.
ನಂತರ ನಡೆದ ಶಿಬಿರದಲ್ಲಿ 290 ಮಂದಿ ಕಣ್ಣಿನ ತೊಂದರೆಯುಳ್ಳವರು ತಪಾಸಣೆ ಮಾಡಿಕೊಂಡಿರು. ಕಣ್ಣಿನ ಪೊರೆಯುಳ್ಳ 145 ಮಂದಿಯನ್ನು ಎರಡು ಬ್ಯಾಚ್‍ಗಳಲ್ಲಿ ಕೊಯಮತ್ತೂರಿನಅರವಿಂದ ಕಣ್ಣಾಸ್ಪತ್ರೆಗೆ ಕಳುಹಿಸಿಕೊಡಲಾಯಿತು. 195 ಮಂದಿ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದವರ ಆರೋಗ್ಯ ಹಾಗು ಕಣ್ಣಿನ ಸಮಸ್ಯೆ ಪರೀಕ್ಷೆ ಮಾಡಿ ಸಲಹೆ ಸೂಚನೆಗಳನ್ನು ನೀಡಲಾಯಿತು.
ಶಿಬಿರದಲ್ಲಿ ರೋಟರಿ ಸಂಸ್ಥಾಪಕ ಸದಸ್ಯರಾದ ಶ್ರೀನಿವಾಸಶೆಟ್ಟಿ, ಕಾರ್ಯದರ್ಶಿ ಕೆಂಪನಪುರ ಸಿದ್ದರಾಜು, ಅಬ್ದುಲ್ ಅಜೀಜ್ ದೀನಾ, ವೆಂಕಟೇಶ್, ಅಂಕಪ್ಪ, ಚಂದ್ರಪ್ರಭ ಜೈನ್, ಎಲ್.ನಾಗರಾಜು, ,ರಾಜುವರ್ಗೀಸ್, ಶ್ರೀನಿವಾಸ, ಶ್ರೀನಿವಾಸನ್, ಅಂಕಶೆಟ್ಟಿ, ಯೋಗರಾಜ್, ಪ್ರಭಕರ್, ಮೋಹನ್, ಸಿದ್ದಮಲ್ಲಪ್ಪ, ನಾರಾಯಣ್, ಮಹದೇವಸ್ವಾಮಿ, ಭವಾನಿದೇವಿ, ನೇಮಿರಾಜ್, ಪಿಆರ್ ಓ ವಿಜಯಕಾಂತ್ ಮೊದಲಾದವರು ಇದ್ದರು.