ಆರ್ ಆರ್ ತಂಡ ಜಯಭೇರಿ : ಚಾಮರಾಜನಗರದಲ್ಲಿ ವಿಜಯೋತ್ಸವ

ಚಾಮರಾಜನಗರ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ 2025-30ನೇ ಸಾಲಿನ ಕೇಂದ್ರ ಸಮಿತಿ ಪಂಚವಾರ್ಷಿಕ ಚುನಾವಣೆಯಲ್ಲಿ  ಸಿ.ರಮೇಶ್  ಅವರ ನೇತೃತ್ವದ ಆರ್ ಆರ್ ತಂಡ 2 ಸಾವಿರ ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನಲೆ ಚಾಮರಾಜನಗರ ಜಿಲ್ಲಾ ಸಮಿತಿ ವತಿಯಿಂದ ನಗರದ ಉಪ ವಿಭಾಗೀಯ ಕಚೇರಿ ಮುಂಭಾಗದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.
ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ 2 ಬಾರಿಗೆ ಗೆಲುವು ಸಾಧಿಸಿರುವ ಮಹಮ್ಮದ್ ತಸ್ಕೀನ್,
 ಜಿಲ್ಲಾಧ್ಯಕ್ಷ ಜಿ.ಎಂ.ಸುರೇಶ್  ಮಾತನಾಡಿ, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ 2025-30ನೇ ಸಾಲಿನ ಕೇಂದ್ರ ಸಮಿತಿ ಪಂಚವಾರ್ಷಿಕ ಚುನಾವಣೆಯಲ್ಲಿ ಸಿ.ರಮೇಶ್ ಅವರ ನೇತೃತ್ವದ ಆರ್ ಆರ್ ತಂಡ 2 ಸಾವಿರ ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವದ ಆಚರಣೆ ಮಾಡಲಾಗಿದೆ. ಸಿ.ರಮೇಶ್ ಅವರ ನೇತೃತ್ವದ ಆರ್ ಆರ್ ತಂಡವನ್ನು ಬೆಂಬಲಿಸಿ ಬಹುಮತದೊಂದಿಗೆ ಆಯ್ಕೆ ಮಾಡಿದ ವಿದ್ಯುತ್ ಗುತ್ತಿಗೆದಾರರಿಗೆ ಈ ಮೂಲಕ ಅಭಿನಂದನೆ ಸಲ್ಲಿಸಲಾಗುವುದು ಎಂದರು.
  ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಅನ್ಸರ್ ಅಲಿಖಾನ್ , ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಭಾನುಪ್ರಕಾಶ್ ಎಸ್. ಖಜಾಂಚಿ ಎಂ.ಎನ್.ಸಂಪತ್ ಕುಮಾರ್, ಕೊಳ್ಳೇಗಾಲ ತಾಲ್ಲೂಕು ಸಮಿತಿ ಅಧ್ಯಕ್ಷ  ಕೆ.ಬಿ.ನಾಗರಾಜು, ಎಸ್ ಸಿ/ಎಸ್ ಟಿ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲ್ಲೂಕು ಅಧ್ಯಕ್ಷ ನಾಗರಾಜು, ಚಾಮರಾಜನಗರ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಸಿದ್ದಾರ್ಥ, ರಾಜು, ಲೋಕೇಶ್, ನಾಗೇಂದ್ರ ಗೌಡ, ಜಮೀಲ್, ಪ್ರದೀಪ್, ಲಿಂಗರಾಜ, ಖದೀರ್, ಭರತ್ ಗೌಡ, ಉಡಿಗಾಲ ಮಹೇಶ್, ಶಿವಪ್ರಸಾದ್, ಪುರ್ಖಾನ್, ರಿಯಾಜ್, ಪ್ರದೀಪ್ ಕುಮಾರ್  ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *