ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯ ರಸ್ತೆಗಳ ಅಭಿವೃದ್ದಿಗಾಗಿ 56 ಕೊಟಿ ರೂ. ವಿನಿಯೋಗ: ಎ.ಆರ್.ಕೃಷ್ಣಮೂರ್ತಿ

ಚಾಮರಾಜನಗರ: ಕೊಳ್ಳೇಗಾಲ ಕ್ಷೇತ್ರದ ವ್ಯಾಪ್ತಿಯಲ್ಲಿರುವ ರಸ್ತೆಗಳ ಅಭಿವೃದ್ದಿಗಾಗಿ ಎರಡುವರೆ ವರ್ಷಗಳ  ಅವಧಿಯಲ್ಲಿಯೇ ರಾಜ್ಯ ಸರ್ಕಾರ 56 ಕೋಟಿ ರೂ.ಗಳ ಅನುದಾನವನ್ನು ನೀಡಿದ್ದು,   ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ಒಂದಲ್ಲ ಒಂದು ಕಾಮಗಾರಿ ನಡೆಯುತ್ತಿದೆ ಎಂದು  ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
  ತಾಲೂಕಿನ ಆಲೂರು ಹೊಮ್ಮ ಗ್ರಾಮದಲ್ಲಿ  ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ  ನೀಡಿ
ಅವರು ಮಾತನಾಡಿ,  ನಾನು  ಶಾಸಕನಾಗಿ ಎರಡುವರೆ ವರ್ಷಗಳ ಅವಧಿಯಲ್ಲಿ  ಬಹಳಷ್ಟು ಯೋಜನೆಗಳನ್ನು ಜಾರಿ ಮಾಡಿಸಿದ್ದೇನೆ. ಮುಖ್ಯಮಂತ್ರಿಗಳ ವಿಶೇಷ ಯೋಜನೆ, ವಿವಿಧ ಇಲಾಖೆಗಳ ಅಡಿಯಲ್ಲಿ ವಿಶೇಷ ಒತ್ತು ನೀಡಿ, ಆಯಾಯ ಇಲಾಖೆಯ  ಸಚಿವರುಗಳ ಮೂಲಕ  ನೂರಾರು ಕೋಟಿ ರೂಗಳ ಅನುದಾನವನ್ನು ಬಿಡುಗಡೆ ಮಾಡಿಸಿದ್ದು, ಕ್ಷೇತ್ರದಲ್ಲಿ ಅಭಿವೃದ್ದಿ ಪರ್ವ ಅರಂಭವಾಗಿದೆ ಎಂದರು.
  ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಲೂರು ಹೊಮ್ಮದಿಂದ ಕಂದಹಳ್ಳಿ ಮಹದೇಶ್ವರ ದೇವಸ್ಥಾನದ ವರೆಗಿನ ಸುಮಾರು 5 ಕಿ.ಮೀ. ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ಅನುದಾನದಡಿಯಲ್ಲಿ 5 ಕೋಟಿ ರೂ. ಬಿಡುಗಡೆಯಾಗಿದೆ. ಇಂದಿನಿಂದಲೇ ಕಾಮಗಾರಿ ಆರಂಭವಾಗಲಿದೆ. ಗ್ರಾಮದ ಜನರ ಬಹು ದಿನಗಳ ಬೇಡಿಕೆಯಾಗಿದ್ದು, ನಾನು  ಗ್ರಾಮಕ್ಕೆ ಬಂದಾಗಲೆಲ್ಲಾ  ಎಲ್ಲಾ ಸಮುದಾಯದವರು ಸಹ  ನಮ್ಮ ಗ್ರಾಮದ
ರಸ್ತೆಯನ್ನು ಮಾಡಿಕೊಡಿ ಎಂದು ಕೇಳುತ್ತಿದ್ದರು. ಇದು  ಕೋಟಿ ಲೆಕ್ಕದಲ್ಲಿ ಇದ್ದ ಕಾಮಗಾರಿಯಾದ ಕಾರಣದಿಂದ ಮುಖ್ಯಮಂತ್ರಿಗಳ  ವಿಶೇಷ ಅನುದಾನದಲ್ಲಿ  5 ಕೋಟಿ ರೂ. ಬಿಡುಗಡೆ ಮಾಡಿಸಿ, ಇಂದು ಅಧಿಕಾರಿಗಳೊಂದಿಗೆ  ಭೂಮಿ ಪೂಜೆಗೆ ಬಂದಿದ್ದೇನೆ ಎಂದರು.
ಇಂದಿನಿಂದಲೇ ಕಾಮಗಾರಿ ಆರಂಭವಾಗಲಿದೆ.  ನಾನು ಮೊದಲ ಬಾರಿ ಶಾಸಕನಾಗಿದ್ದಾಗ   ಈ ರಸ್ತೆಯನ್ನು ಅಭಿವೃದ್ದಿ ಪಡಿಸಿದ್ದೆ, ನಂತರ 20 ವರ್ಷಗಳಿಂದ ನೆನಗುದಿ ಬಿದ್ದು ಹಳ್ಳ ಕೊಳ್ಳದಿಂದ ಕೂಡಿದ್ದ ಈ ರಸ್ತೆಯನ್ನು ನನ್ನ ಅವಧಿಯಲ್ಲಿ  ಪುನರ್ ಅಭಿವೃದ್ದಿಗೆ ಚಾಲನೆ ನೀಡಿದ್ದೇನೆ. ಹೀಗಾಗಿ  ನಮ್ಮ ಸ್ವಗ್ರಾಮವಾದ ಆಲೂರು ಪಕ್ಕದ ಗ್ರಾಮದ ಜನರು ಹಾಗೂ ಕ್ಷೇತ್ರದ ಅಭಿವೃದ್ದಿ ಹೊಂದಬೇಕು ಎಂಬ ಕಾಳಜಿ ಹಾಗು ಬದ್ದತೆ ಇದ್ದರೆ ಇವೆಲ್ಲವು ಸಾಧ್ಯ ಎಂದು  ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಹೊಮ್ಮ ಗ್ರಾಮದ ಪರಿಮಿತಿಯಲ್ಲಿ  ಕೆಆರ್‌ಐಡಿಎಲ್‌ನಿಂದ ಗ್ರಾಮದ ನಾಯಕರ ಬೀದಿ, ಲಿಂಗಾಯತರ ಬೀದಿ, ಕುರುಬರ ಬೀದಿ, ಪರಿಶಿಷ್ಟ ಜಾತಿಗೆ ಸೇರಿದ ಬೀದಿಗಳಲ್ಲಿ  56 ಲಕ್ಷ ರೂ. ವೆಚ್ಚಗಳಲ್ಲಿ ಸಿಮೆಂಟ್ ರಸ್ತೆ ಚರಂಡಿ ನಿರ್ಮಾಣಕ್ಕೆ ಚಾಲನೆ  ನೀಡಿದ್ದು, ಕಾಮಗಾರಿಯನ್ನು ಗುಣಮಮಟ್ಟದಿಂದ  ಮಾಡಿಸಿಕೊಳ್ಳುವ ಜೊತೆಗೆ ಎಲ್ಲಾ ಬೀದಿಗಳಲ್ಲಿಯ ಸಿಮೆಂಟ್ ರಸ್ತೆ  ನಿರ್ಮಾಣವಾದಂತೆ ಆಗಿದೆ. ಪಕ್ಕದ ಬಸವರಾಜಪುರದಲ್ಲಿ ರಸ್ತೆ, ಚರಂಡಿ, ಸಿ.ಸಿ. ರಸ್ತೆ ನಿರ್ಮಾಣಕ್ಕೆ 30 ಲಕ್ಷ ರೂ. ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಗ್ರಾಮದ ನಿರ್ಮಾಣವಾದ ದಿನದಿಂದಲೂ ಈ ಗ್ರಾಮದಲ್ಲಿ  ಮೂಲಸೌಲಭ್ಯ ಇರಲಿಲ್ಲ. ನಾನು ಗ್ರಾಮಸ್ಥರು ಚುನಾವಣಾ ಸಂದರ್ಭದಲ್ಲಿ  ಮನವಿ ಮಾಡಿಕೊಂಡಿದ್ದರು. ಅದರಂತೆ ಈ ಗ್ರಾಮಕ್ಕು ಅನುದಾನ ನೀಡಿ, ಕಾಮಗಾರಿಗೆ ಚಾಲನೆ ಕೊಟ್ಟಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಯ ಸಮಿತಿಯ ಅಧ್ಯಕ್ಷ ಎಚ್.ವಿ. ಚಂದ್ರು, ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ, ಎಪಿಎಂಸಿ ನಿರ್ದೇಶಕ ಹೊಮ್ಮ ರವಿಶಂಕರ ಮೂರ್ತಿ, ಗ್ರಾ.ಪಂ. ಮಾಜಿ ಅಧ್ಯಕ್ಷ ರಾಮು, ಪಿಡಬ್ಲುಡಿ  ಎಇಇ ಪುರುಷೋತ್ತಮ್, ಸುರೇಂದ್ರ,  ಕೆಆರ್‌ಐಡಿಎಲ್ ಎಇಇ ಚಿಕ್ಕಲಿಂಗಯ್ಯ, ಪಿಡಿಓ ವಸಂತ್ ಜಿಲ್ಲಾ ಪ್ರಗತಿ ಪರಿಶೀಲನಾ ಸಮಿತಿಯ ಸದಸ್ಯ ಬೂದಂಬಳ್ಳಿ ಶಂಕರ್, ಅಶ್ವಥ್, ರಾಜೇಶ್, ವೆಂಕಟೇಶ್, ಮಯೂರ, ವೆಂಕಟರಂಗನಾಯಕ, ಚಂದ್ರೇಗೌಡ, ಶಿವಣ್ಣ, ಪರಶಿವ,  ನಾಗೇಂದ್ರ,
ಕುಮಾರ್, ಪಿಡಬ್ಲುಡಿ  ಎಇಇ ಪುರುಷೋತ್ತಮ್, ಸುರೇಂದ್ರ,  ಕೆಆರ್‌ಐಡಿಎಲ್ ಎಇಇ ಚಿಕ್ಕಲಿಂಗಯ್ಯ, ಪಿಡಿಓ ವಸಂತ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *