ಕಾಡಂಚಿನ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಬಾಲರಾಜು ಪರ ರುದ್ರೇಶ್ ಪ್ರಚಾರ

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಸ್. ಬಾಲರಾಜು ಪರ ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಂ. ರುದ್ರೇಶ್ ಕಾಡಂಚಿನ ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡಿದರು.

ತಾಲೂಕಿನ ಪುಣಜನೂರು, ಕೋಳಿಪಾಳ್ಯ, ಮೂಡಹಳ್ಳಿ, ಮೂಕನಪಾಳ್ಯ, ದೊಳ್ಳಿಪುರ, ರಂಗಸಂದ್ರ, ಅಟ್ಟುಗೂಳಿಪುರ, ಬ್ಯಾಡಾಮೂಡ್ಲು, ಹರದನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಿಗೆ ತೆರಳಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರುದ್ರೇಶ್ ಪ್ರಧಾನಿ ನರೇಂದ್ರ ಮೋದಿ ಅವರ ಹತ್ತು ವರ್ಷಗಳ ಜನಪರ ಆಡಳಿತವನ್ನು ಮೆಚ್ಚಿರುವ ದೇಶದ ಜನರು ಮತ್ತೇ ಮೋದಿ ಅವರನ್ನು ಪ್ರದಾನಿ ಮಾಡಲು ಮುಂದಾಗಿದ್ದಾರೆ. ಅದೇ ರೀತಿ ಕರ್ನಾಟದಲ್ಲಿಯೂ ಸಹ ಮೋದಿ ಆಲೆ ಜೋರಾಗಿದೆ. ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಇಟ್ಟುಕೊಂಡು ಅಭಿವೃದ್ದಿ ಮಾಡಿದ್ದೇವೆ ಎಂದು ಬೊಬ್ಬೆ ಹೊಡೆಯುತ್ತಿದೆ. ಕಳೆದ 10 ತಿಂಗಳಆಡಳಿತ ಶೂನ್ಯವಾಗಿದೆ. ರೈತ ಪರವಾದ ಒಂದು ಯೋಜನೆಯನ್ನು ಜಾರಿ ಮಾಡಿಲ್ಲ. ಈಗ ಓಟಿಗಾಗಿ ಕೇಂದ್ರದಲ್ಲಿ ಕಾಂಗ್ರೆಸ್ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ ಎಂದು ಟೀಕೆ ಮಾಡಿದರು.


ಕೃಷಿ ಸನ್ಮಾನ್ ಯೋಜನೆಯಡಿ ಪ್ರತಿ ವರ್ಷದ ರೈತರ ಖಾತೆಗೆ ಕೇಂದ್ರ ಸರ್ಕಾರ 6 ಸಾವಿರ ರೂ. ಜಮಾ ಮಾಡುತ್ತಿದೆ. ಕೃಷಿ ಕ್ಷೇತದ ಬಲವರ್ಧನೆಗೆ ಸಹಕಾರ ಕ್ಷೇತ್ರದಲ್ಲಿ ರೈತರು ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಂಡು ಅಭಿವೃದ್ದಿ ಮಾಡಲು ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಆರಂಭಿಸಿ, ಈ ಮೂಲಕ ರೈತರ ಸಹಕಾರ ಸಂಘಗಳನ್ನು ಬಲವರ್ಧನೆ ಮಾಡುತ್ತಿದ್ದಾರೆ. ರೈತರ ಮಕ್ಕಳು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದಾರೆ.ಕೃಷಿಗೆ ಹೆಚ್ಚಿನ ಒತ್ತು ನೀಡಿರುವ ಕೇಂದ್ರ ಸರ್ಕಾರವನ್ನು ರೈತರು ಹಾಗೂ ರೈತ ಮಹಿಳೆಯರು ಬೆಂಭಲಿಸಬೇಕು. ಚಾ.ನಗರ ಕ್ಷೇತ್ರದಿಂದ ಬಾಲರಾಜು ಗೆಲುವು ಸಾಧಿಸಿದರೆ ಕೇಂದ್ರದಲ್ಲಿ ಮೋದಿ ಸರ್ಕಾರಕ್ಕೆ ಬೆಂಬಲ ದೊರೆಯಲಿದೆ. ಅತ್ಯಂತ ಸಭ್ಯತೆವುಳ್ಳ, ಗುಣವಂತ ಹಾಗೂ ರಾಜಕೀಯದಲ್ಲಿ ಅನುಭವನ್ನು ಹೊಂದಿರುವ ಬಾಲರಾಜು ಗೆಲುವು ಕ್ಷೇತ್ರದ ಜನರ ಗೆಲುವುದಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎನ್‍ರಿಎಚ್ ಮಹದೇವಸ್ವಾಮಿ, ಮಾಜಿ ಸದಸ್ಯ ಹನುಮೇಗೌಢ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಪುಣಜನೂರು ಚಂದ್ರಶೇಖರ್, ಬಾಲರಾಜು ಪುತ್ರ ಯೋಗ ಹಂಸ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಶಿವುನಾಯಕ, ಗುರುನಾಯಕ, ಚಂದಕವಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯೇಂದ್ರ, ಮೂಡ್ಲುಪುರ ನಂದೀಶ್, ಪ್ರಮೋದ್, ಮೊದಲಾದವರು ಇದ್ದರು.

Leave a Reply

Your email address will not be published. Required fields are marked *