ಚಾಮರಾಜನಗರ: ಗ್ರಾಮೀಣ ಮಕ್ಕಳು ಮುಖ್ಯ ವಾಹಿನಿಗೆ ಬರಲು ಪೋಷಕರ ಸಹಕಾರ ಅತ್ತಗತ್ಯ ಎಂದು ತಾಲೂಕಿನ ಸರಗೂರು.ಚಂದಕವಾಡಿ ರಸ್ತೆಯಲ್ಲಿರುವನ್ಯೂ ಮಿಲೇನಿಯಮ್ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆ ವ್ಯವಸ್ಥಾಪಕ ಹಾಗೂ ಸಮಾಜಸೇವಕ ಮೋಹನ್ ತಿಳಿಸಿದರು.
ಶಾಲೆಅವರಣದಲ್ಲಿ ಮಕ್ಕಳ ಸಂಭ್ರಮಎಲ್ ಕೆ ಜಿ ಗ್ರೇಡ್ ಒನ್ ಸಹಸ್ರಮಾನ ಪದವಿ ಕಾರ್ಯಕ್ರಮದಲ್ಲಿ ಪುಟಾಣಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿ 33 ವರ್ಷದಲ್ಲಿ ಬೀದರ್ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೆ ಶಿಕ್ಷಣ ಕ್ಷೇತ್ರಕ್ಕೆ ಅಪಾರಸೇವಾ ಸಲ್ಲಿಸಿದ್ದೇನೆ. ಗ್ರಾಮೀಣ ಮಕ್ಕಳ ಸಾಕ್ಷರತೆ ಅಭಿವೃದ್ಧಿಗಾಗಿ ಹಾಗೂ ಗುಣಮಟ್ಟದ ನುರಿತ ಶಿಕ್ಷಕರಿಂದ ಎಲ್ ಕೆ ಜಿ ವಿದ್ಯಾರ್ಥಿಗಳಿಂದಲೇ ಪ್ರಾರಂಭ ಮಾಡಲಾಗುತ್ತದೆ ಮೌಲ್ಯ ಶಿಕ್ಷಣ ಕೌಶಲ್ಯ ತರಬೇತಿ ಜೊತೆಗೆ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಯೋಗ ಕ್ರೀಡೆ ಚಿತ್ರಕಲೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಮಗುವಿನ ಜ್ಞಾನ ಅಭಿವೃದ್ಧಿಪಡಿಸಲು ವಿಶೇಷ ಜನರಲ್ ನಾಲೆಜ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು
ಶಿಕ್ಷಕಿ ಕವಿತಾಮೋಹನ್ ಮಾತನಾಡಿ ಮನೆಯೇ ಮೊದಲ ಪಾಠಶಾಲೆ ಆದ್ದರಿಂದ ಇಂದಿನ ಕಾಲದಲ್ಲಿ ಅಕ್ಷರ ಅಭ್ಯಾಸ ಮಾಡಿಸಲು ದೇವಸ್ಥಾನಗಳಿಗೆ ಹಾಗೂ ಗುರುಕುಲಗಳಿಗೆ ಹೋಗುತ್ತಿದ್ದರು ಇವಾಗ ಕಂಪ್ಯೂಟರ್ ಯುಗ. ತಮ್ಮ ಪುಟಾಣಿ ಮಕ್ಕಳ ಜ್ಞಾನ ಅಭಿವೃದ್ಧಿಪಡಿಸಲು ಕನ್ನಡ ಭಾಷೆ ಜೊತೆಗೆ ಇಂಗ್ಲಿಷ್ಗ ಭಾಷೆಯನ್ನು ಅಭ್ಯಾಸ ಕೂಡ ಮಾಡಿಕೊಳ್ಳಿ ನಿಮ್ಮ ಮಕ್ಕಳು ಎಲ್ ಕೆ ಜಿ ಶಾಲೆಯಿಂದಲೇ ಗುಣಮಟ್ಟದ ಶಿಕ್ಷಣಕ್ಕೆ ಪೋಷಕರು ಆದ್ಯತೆ ನೀಡಬೇಕು ಅವಾಗ ನಿಮ್ಮ ಮಕ್ಕಳ ಭವಿಷ್ಯ ಉಜ್ಜಿಲವಾಗುತ್ತದೆ. ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸದ ಜೊತೆಗೆ ಭಾರತೀಯ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳು ಹಮ್ಮಿಕೊಂಡು ಬರಲಾಗುತ್ತಿದೆ. ಸಮಯ ಪ್ರಜ್ಞೆಯ ಶಿಸ್ತು. ಹಾಗೂ ರಾಷ್ಟ್ರೀಯ ನಾಯಕರ ಜನ್ಮ ದಿನಾಚರಣೆ ದಿನಾಚರಣೆಗಳಲ್ಲಿ ಶಾಲೆ ಸುತ್ತಮುತ್ತ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಹಾಗೂ ಗಿಡ ನೆಡುವ ಅಭಿರುಚಿ ನೀಡಲಾಗಿದೆ ಎಂದು ತಿಳಿಸಿದರು
ಚಾಮರಾಜನಗರಜಿಲ್ಲಾ ಪ್ರೆಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ಹಾಗೂ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ. ಅಧ್ಯಕ್ಷ,ಜಿ ಬಂಗಾರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಶಿಕ್ಷಣದಿಂದ ಈ ದೇಶ ಅಭಿವೃದ್ಧಿ ಸಾಧ್ಯ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ಜನಪರ ಯೋಜನೆಗಳನ್ನು ಜಾರಿ ಮಾಡಿದ್ದಾರೆ ಈ ಎಲ್ಲಾ ಸೌಲಭ್ಯಗಳನ್ನು ಪಡೆದು ಪಡೆದುಕೊಂಡು ವಿದ್ಯಾರ್ಥಿಗಳು ಮುಖ್ಯ ವಾಹಿನಿಗೆ ಬರಬೇಕು ಎಂದು ತಿಳಿಸಿದವರು. ಶ್ರೀ ವರಮಹಾಲಕ್ಷ್ಮಿ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆ ವತಿಯಿಂದ ಈಗಾಗಲೇ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಶಾಲೆ ಸಾಮಗ್ರಿ ಸಮಯ ಪ್ರಜ್ಞೆ ರೂಡಿಸಿಕೊಳ್ಳಲು ಉಚಿತ ಅಲಾರಂ ಗಡಿಯಾರ ಬಿಸಿಲು ಹಾಗೂ ಮಳೆಯ ಅನುಕೂಲವಾಗಲು ಉಚಿತ ಛತ್ರಿ. ಆರೋಗ್ಯ ತಪಾಸಣಾ ಶಿಬಿರ ಇನ್ನು ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಆಶಾ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಕಾರ್ತಿಕ್. ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕರು ಪ್ರತಿಭಾವಂತ ವಿದ್ಯಾರ್ಥಿಗಳು. ಪೋಷಕರು ಹಾಜರಿದ್ದರು