ಫೆ. 6 ರಿಂದ 11 ವರೆಗೆ ಸುತ್ತೂರಿನಲ್ಲಿ ಜಾತ್ರೆ ವೈಭವ
ಚಾಮರಾಜನಗರ: ಸುತ್ತೂರು ಶ್ರೀ ಶಿವರಾತ್ರಿಶ್ವರÀ ಜಾತ್ರಾ ಮಹೋತ್ಸವ ಫೆ. 6 ರಿಂದ 11 ರವೆಗೆ ಐದು ದಿನಗಳ ಕಾಲ ನಡೆಯಲಿದ್ದು, ಸುತ್ತೂರು ಪ್ರಚಾರ ರಥಕ್ಕೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.
ನಗರದ ಜೆಎಸ್‍ಎಸ್ ಕಾಲೇಜು ಮೈದಾನದಿಂದ ಹೊರಟ ಸುತ್ತೂರು ಜಾತ್ರಾ ಪ್ರಚಾರ ರಥಕ್ಕೆ ಪೂಜೆ ಸಲ್ಲಿಸಿ, ಶ್ರೀ ಶಿವರಾತ್ರೀಶ್ವರರ ಪುತ್ಥಳಿಗೆ ಪುಷ್ಪ ಮಾಲೆ ಹಾಕಿ ಪ್ರಚಾರ ರಥಕ್ಕೆ ಚಾಲನೆ ಕೊಟ್ಟರು.
ಬಳಿಕ ಮಾತನಾಡಿದ ಅವರು ನಾಡಿನ ಸಂಸ್ಕøತಿ ಪರಂಪರೆಯನ್ನು ಬಿಂಬಿಸುವ ಸುತ್ತೂರು ಶ್ರೀ ಶಿವರಾತ್ರೀಶ್ವರ ಜಾತ್ರೆಯು ಫೆ. 6 ರಿಂದ 11 ವರೆಗೆ ಐದು ದಿನಗಳ ವಿಜೃಂಭಣೆಯಿಂದ ನಡೆಯಲಿದ್ದು, ನಮ್ಮ ರಾಜ್ಯ ಅಲ್ಲದೇ ಹೊರ ರಾಜ್ಯ ಹಾಗೂ ವಿದೇಶಗಳಿಂದಲು ಜಾತ್ರೆ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಐದು ದಿನಗಳ ಕಾಲ ಸುತ್ತೂರಿನಲ್ಲಿ ಲಕ್ಷಾಂತರÀ ಮಂದಿ ಭಕ್ತರಿಗೆ ಊಟದ ವ್ಯವಸ್ಥೆಯ ಹಾಗೂ ವಸತಿ ಸೌಲಭ್ಯ ಸೇರಿದಂತೆ ಬಹಳ ಅಚ್ಚುಕಟ್ಟಾಗಿ ಜಾತ್ರೆ ನಡೆಯುತ್ತದೆ. ಈ ಸಾಂಸ್ಕøತಿಕ ವೈಭವವನ್ನು ಕಣ್ಮುಂಬಿಕೊಳ್ಳುವುದು ಚೆಂದ. ಹೀಗಾಗಿ ಎಲ್ಲರು ಜಾತ್ರೆಯಲ್ಲಿ ಭಾಗವಹಿಸಿ, ಸ್ವಾಮಿಯ ಕೃಪೆಗೆ ಪಾತ್ರರಬೇಕು ಎಂದು ಪುಟ್ಟರಂಗಶೆಟ್ಟಿ ಮನವಿ ಮಾಡಿದರು.
ಸುತ್ತೂರಿನಲ್ಲಿ ಫೆ. 6 ಮಂಗಳವಾರ ಶ್ರೀ ವೀರಭದ್ರೇಶ್ವರ ಕೊಂಡೋತ್ಸವ, ಫೆ. 7 ಬುಧವಾರ ಹಾಲರವಿ ಉತ್ಸವ ಹಾಗೂ ಸಾಮೂಹಿಕ ವಿವಾಹ, ಫೆ. 8 ಗುರುವಾರ ರಥೋತ್ಸವ , ಫೆ. 9ರ ಶುಕ್ರವಾರ ಶ್ರೀ ಮಹದೇಶ್ವರ ಕೊಂಡೋತ್ಸವ, ಲಕ್ಷದೀಪೋತ್ಸವ ಶ್ರೀ ಮಹದೇಶ್ವರ ಮುತ್ತಿನ ಪಲ್ಲಕ್ಕಿ ಉತ್ಸವ, ಫೆ. 10 ರಂದು ತೆಪ್ಪೋತ್ಸವ ಹಾಗೂ ಫೆ. 11 ರಂದು ಅನ್ನ ಬ್ರಹ್ಮೋತ್ಸವ ಕಾರ್ಯಕ್ರಮಗಳು ನಡೆಯಲಿದೆ ಎಂದು ಹರವೆ ಮಠದ ಶ್ರೀ ಸರ್ಪಭೂಷಣಸ್ವಾಮೀಜಿ ತಿಳಿಸಿದರು.
ಈ ಸಂದರ್ಭದಲ್ಲಿ ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ, ಮುಖಂಡರಾದ ಎಂ.ರಾಮಚಂದ್ರ, ಬಿ.ಕೆ. ರವಿಕುಮಾರ್, ಮಹಾಸಭಾದ ಅಧ್ಯಕ್ಷ ಮೂಡ್ಲುಪುರ ನಂದೀಶ್, ಕಾರ್ಯದರ್ಶಿ ನಾಗೇಂದ್ರ, ಜೆಎಸ್‍ಎಸ್ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ, ಪ್ರಾಂಶುಪಾಲ ಸಿದ್ದರಾಜು, ಮಹಮದ್ ಅಸ್ಗರ್, ಸೈಯದ್ ರಫಿ, ಚಿನ್ನಮ್ಮ, ಗುರುಸ್ವಾಮಿ, ಹಾಗೂ ಜೆಎಸ್‍ಎಸ್ ಸಂಸ್ಥೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಮುಖಂಡರು ಇದ್ದರು.