ಸಾರ್ವಕರ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಲು ಒತ್ತಾಯ.
ಚಾಮರಾಜನಗರ: ಸಾವರ್ಕರ್ ಪ್ರತಿಷ್ಠಾನ ಮೈಸೂರು ವತಿಯಿಂದ ಸಾವರ್ಕರ್ ಅವರ 60 ವರ್ಷದ ಪುಣ್ಯಸ್ಮರಣಾರ್ಥ ಪ್ರಯುಕ್ತ ಪಂಜಿನ ಮೆರವಣಿಗೆ ನಡೆಯಿತು.
ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಹೊರಟ ಪಂಜಿನ ಮೆರವಣಿಗೆ ರಥಬೀದಿ, ದೊಡ್ಡಂಗಡಿ ಬೀದಿ,
ಚಿಕ್ಕಂಗಡಿ ಬೀದಿ, ಅಗ್ರಹಾರ ಬೀದಿ ಮೂಲಕ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ
ಮುಕ್ತಾಯಗೊಂಡಿತು.
ಪ್ರತಿಷ್ಡಾನದ ಸಹ ಕಾರ್ಯದರ್ಶಿ ಶಿವು ಚಿಕ್ಕಕಾನ್ಯ ಮಾತನಾಡಿ, ಅಂತಾರಾಷ್ಟ್ರೀಯ ನ್ಯಾಯಾಲಯ ಪ್ರವೇಶ ಮಾಡಿದ ಮೊಟ್ಟಮೊದಲ ಖೈದಿಯಾಗಿದ್ದರು, ಹಿಂದೂ ಮಹಾಸಭಾ ಕಟ್ಟಿದ ಕಾರಣದಿಂದ ಬ್ಯಾರಿಸ್ಟರ್ , ಬಿ.ಎ ಪದವಿ ಕಳೆದುಕೊಳ್ಳಬೇಕಾಯಿತು. 1857 ಸಿಪಾಯಿದಂಗೆ ಯನ್ನು ಭಾರತದ ಸ್ವತಂತ್ರ ಸಂಗ್ರಾಮ ಎಂದ ದೇಶದ ಮೊದಲ ಇತಿಹಾಸಕಾರ.ಸಾರ್ವಕರ್ ಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು
ಸಾರ್ವಕರ್ ಪ್ರತಿಷ್ಠಾನವು ಸಾರ್ವಕರ್ ಇತಿಹಾಸ ತಿಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ವಂದೇಮಾತರಂ ಗೀತೆ ಮನೆಮನೆಗೆ ತಲುಪಿಸುವ ಗುರಿ ಹೊಂದಲಾಗಿದೆ ಎಂದರು. ವಂದೇ ಮಾತರಂ ಗೀತೆ ಹಾಡಲಾಯಿತು.
ಮೆರವಣಿಗೆಯಲ್ಲಿ ಸಾರ್ವಕರ್ ಪ್ರತಿಷ್ಠಾನ ದ ಕಾರ್ಯದರ್ಶಿ ರಾಕೇಶ್ ಭಟ್, ಟ್ರಸ್ಟಿ ಅಶ್ವಿನ್, ಸಂತೋಷ, ಮೋಹನ್, ಚೂಡಾ ಮಾಜಿ ಅಧ್ಯಕ್ಷ ಕುಲಗಾಣ ಶಾಂತಮೂರ್ತಿ ನಗರಸಭಾ ಮಾಜಿ ಸದಸ್ಯರಾದ ಶಿವರಾಜ್, ರಾಜೇಶ್, ಮುಖಂಡರಾದ ಮಣಿ, ಬುಲೆಟ್ ಚಂದ್ರು, ರಮೇಶ್, ಬಂಗಾರನಾಯಕ, ರಾಜೇಶ್,ತ್ಯಾಗರಾಜು, ಪಾಪು, ಚಂದ್ರಶೇಖರ್, ಚಿಕ್ಕರಾಜು, ವೀರೇಂದ್ರ, ನಟರಾಜು, ಕೂಸಣ್ಣ ಇತರರು ಭಾಗವಹಿಸಿದ್ದರು.