ಚಾಮರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜ್ಞಾನ ಮಾದರಿ ಪ್ರದರ್ಶನ

ಚಾಮರಾಜನಗರ: ಚಾಮರಾಜನಗರದ ಸರ್ಕಾವರಿ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ಮತ್ತು ಗಣಿತಶಾಸ್ತ್ರ ವಿಭಾಗ, ರೆಡ್‍ಕ್ರಾಸ್ ಘಟಕ ಹಾಗೂ ಐಕ್ಯೂಎಸಿ (Iಕಿಂಅ) ಇವರ ಸಂಯುಕ್ತ ಆಶ್ರಯದಲ್ಲಿ “ವಿಜ್ಞಾನ ಮಾದರಿ ಪ್ರದರ್ಶನ” ಕಾರ್ಯಕ್ರಮವನ್ನು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ (ಮಾರ್ಚ್ 13) ಆಯೋಜಿಸಲಾಗಿತ್ತು.

  ಬಿಎಸ್ಸಿ ವಿದ್ಯಾರ್ಥಿಗಳು ವಿವಿಧ ವಿಷಯಗಳ ಕುರಿತಾಗಿ ಸೃಜನಾತ್ಮಕ ಮತ್ತು ಮನಮುಟ್ಟುವಂತಹ ವಿಜ್ಞಾನ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು. ಈ ಮಾದರಿಗಳು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಗಮನ ಸೆಳೆಯುವ ಮೂಲಕ ವಿಜ್ಞಾನ ವಿಷಯದ ಬಗ್ಗೆ ಆಸಕ್ತಿ ಮತ್ತು ಕುತೂಹಲವನ್ನು ಹೆಚ್ಚಿಸಿತು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಅಶ್ವಿನಿ ಆರ್. ಎಸ್. ವಹಿಸಿದ್ದರು. ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ಅಮೂಲ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮವು ದಿವ್ಯಶ್ರೀ ಮತ್ತು ಭೂಮಿಕಾ ಅವರಿಂದ ಹಾಡಲಾದ ಪ್ರಾರ್ಥನಾ ಗೀತೆಯಿಂದ ಆರಂಭವಾಯಿತು.

  ಪ್ರದರ್ಶನದಲ್ಲಿ ಉತ್ತಮ ಮಾದರಿಗಳನ್ನು ಆಯ್ಕೆ ಮಾಡಲು ನಿಸರ್ಗ, ತೇಜಸ್ವಿನಿ ಹಾಗೂ ಕಾವ್ಯ ಅವರು ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದರು.

  ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ಅಧ್ಯಾಪಕರುಗಳಾದ ಡಾ. ಚಿನ್ಮಯ್ ಭಟ್, ಡಾ. ಶಿವಪ್ರಸಾದ್ ಎನ್. ಜಿ., ಶ್ರೀ ಚಂದ್ರಶೇಖರ್, ಲೋಕೇಶ್, ಡಾ. ಮಲ್ಲೇಶ್, ಡಾ. ನೀಲಕಂಠಸ್ವಾಮಿ, ನಾರಾಯಣ, ದೀಪಿತಾ ಹಾಗೂ ಮಹಾದೇವ ಉಪಸ್ಥಿತರಿದ್ದು ವಿದ್ಯಾರ್ಥಿಗಳ ವಿಜ್ಞಾನಾತ್ಮಕ ಚಿಂತನೆ ಹಾಗೂ ಸೃಜನಶೀಲತೆಯನ್ನು ಪ್ರಶಂಸಿಸಿದರು.

  ಈ ವಿಜ್ಞಾನ ಮಾದರಿ ಪ್ರದರ್ಶನವು ವಿದ್ಯಾರ್ಥಿಗಳಿಗೆ ತಮ್ಮ ವೈಜ್ಞಾನಿಕ ಜ್ಞಾನ ಹಾಗೂ ಪ್ರಾಯೋಗಿಕ ಕೌಶಲ್ಯಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಯನ್ನು ಒದಗಿಸಿತು.

Leave a Reply

Your email address will not be published. Required fields are marked *