ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಆಸಕ್ತಿ ಬೆಳೆಯುತ್ತದೆ: ಪರಶಿವಮೂರ್ತಿ

  • ಎಂಸಿಎಸ್ ಪಬ್ಲಿಕ್ ಶಾಲೆಯಲ್ಲಿ ಗಮನ ಸೆಳೆದ ವಿಜ್ಞಾನ ವಸ್ತುಪ್ರದರ್ಶನ
  • ವಿಜ್ಞಾನ ವಸ್ತುಪ್ರದರ್ಶನದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣ

ಚಾಮರಾಜನಗರ : ನಗರದ ಸೋಮವಾರಪೇಟೆ ಎಂಸಿಎಸ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಂಡಿತು.
ವಸ್ತುಪ್ರದರ್ಶನದಲ್ಲಿ ಸೌರಶಕ್ತಿ ಬಳಕೆ, ಕೃಷಿಯಲ್ಲಿ ಹನಿನೀರಾವರಿ ಪದ್ಧತಿ, ಎಕೋಸಿಟಿ ಸೇರಿದಂತೆ ಹಲವು ಬಗೆಯ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ವಿವರಿಸಿ ಪೇಕ್ಷಕಕರಿಂದ ಮೆಚ್ಚುಗೆ ಪಡೆದರು. ವಿದ್ಯಾರ್ಥಿಗಳಿಂದ ನಾನಾ ವಿಷಯಗಳ ಮಾದರಿಗಳು ಪ್ರದರ್ಶನವಾಯಿತು. ಎಲ್ಲ ಮಾದರಿಗಳು ಜನರ ಗಮನ ಸೆಳೆಯಿತು.
ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿದ ಶಿಕ್ಷಣ ಸಂಯೋಜಕ ಪರಶಿವಮೂರ್ತಿ  ಮಾತನಾಡಿ, ವಿಜ್ಞಾನ ವಸ್ತುಪ್ರದರ್ಶನವು ಮಕ್ಕಳ ವೈಜ್ಞಾನಿಕ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಲು  ಒಂದು ಉತ್ತಮ ವೇದಿಕೆಯಾಗಿದೆ ಎಂದರು.  
ವಿಜ್ಞಾನ ವಸ್ತುಪ್ರದರ್ಶನದಲ್ಲಿ ಮಕ್ಕಳು ಆಶಕ್ತಿಯಿಂದ ತಮ್ಮದೆಯಾದ ಶಕ್ತಿ, ಸಾಮಾರ್ಥ್ಯ ಬಳಸಿಕೊಂಡು ಭೌತಿಕ ಕೌಶಲ್ಯದಿಂದ ವಸ್ತುಪ್ರದರ್ಶನ ವಿನ್ಯಾಸ ಮಾಡಿದ್ದಾರೆ. ಬಹಳ ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ. ಅವರಯಾದ೦ತಹ ತತ್ವಗಳನ್ನು ಬಳಸಿಕೊಂಡಿದ್ದಾರೆ. ಒಂದು ರೋಟೇಷನ್ ಮಾದರಿ, ಸೌರವ್ಯೂಹದ ಮಾದರಿ, ತ್ರಿಡಿ ಎಫೆಕ್ಟ್ ಕೊಡುವ ಮಾದರಿ ಆಗಿರಬಹುದು. ದೂರದರ್ಶನ ಕೇಂದ್ರ ನಿರ್ಮಾಣ ಸೇರಿದಂತೆ ವಿವಿಧ ಹಂತಗಳಲ್ಲಿ ಅವರೆಯಾದಂತಹ ಚಾಕಚಕ್ಯತೆಯಿಂದ ಅವರಯಾದ ಭಾಷೆಯಲ್ಲಿ ವಿವರಣೆ ನೀಡುತ್ತಿದ್ದಾರೆ. ಇದು ಮುಂದೆ ದೊಡ್ಡಹ೦ತ ತಲುಪಲು ಮುನ್ನುಡಿ ಬರೆಯಲು ಆದ್ಯತೆಯಾಗುತ್ತದೆ ಎಂದರು.
ಸಂಸ್ಥೆಯ ಅಡಳಿತ ಮಂಡಳಿ ಸದಸ್ಯ ಡಿ.ಎನ್.ಮಹದೇವಪ್ಪ ಮಾತನಾಡಿ, ನಮ್ಮ ಶಾಲೆಯಲ್ಲಿ ಪಠ್ಯದ ಜೊತೆಗೆ ವಿಜ್ಞಾನ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಲು ವಿಜ್ಞಾನ ವಸ್ತುಪ್ರದರ್ಶನ ಅಯೋಜಿಸಲಾಗಿದ್ದು. ವಿದ್ಯಾರ್ಥಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರಕ್ಕೆ ಸ೦ಬ೦ಧಪಟ್ಟಂತೆ ವಿದ್ಯಾರ್ಥಿಗಳು ವಿವಿಧ ವಸ್ತುಗಳನ್ನು ಬಳಸಿಕೊಂಡು ಮಾದರಿಯ ರೀತಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಯೋಗಗಳನ್ನು ಮಾಡಲಿ ಈ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ  ಆಡಳಿತಾಧಿಕಾರಿ ಎಂ.ನಾಗರಾಜು, ಪ್ರಾಂಶುಪಾಲ ಕೆ.ಶಶಿಧರಮೂರ್ತಿ, ಮುಖ್ಯ ಶಿಕ್ಷಕ ಮಹಾದೇವಸ್ವಾಮಿ,  ಕಲಾ ಶಿಕ್ಷಕ ಸಂಪತ್ ಕುಮಾರ್, ಶಿಕ್ಷಕ ವರ್ಗ, ಪೋಷಕರು, ಮಕ್ಕಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *