ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ
ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿನ ಬ್ರೈಟ್‍ಪದವಿಪೂರ್ವ ಕಾಲೇಜು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ100 ಫಲಿತಾಂಶ ಪಡೆದಿದ್ದು, ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾz ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತಮಂಡಳಿಯಿಂದ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಕಾಲೇಜು ಪ್ರಾಂಶುಪಾಲ ಸಿ.ಪ್ರಜ್ವಲ್ ಕುಮಾರ್ ಮಾತನಾಡಿ, ಈ ಬಾರಿನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 196 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ 87ಮಂದಿ ಅತ್ಯುನ್ನತ ಶ್ರೇಣಿ, 106ಮಂದಿ ಪ್ರಥಮದರ್ಜೆ, 3ಮಂದಿದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಸತತ ನಾಲ್ಕನೇ ಬಾರಿಯೂ ಕಾಲೇಜು ಶೇ100ಫಲಿತಾಂಶ ಪಡೆಯುವುದರ ಮೂಲಕ ವಿದ್ಯಾರ್ಥಿಗಳು ಪೋಷಕರು, ತಾವು ವ್ಯಾಸಂಗ ಮಾಡಿದ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿಜ್ಞಾನವಿಭಾಗದಲ್ಲಿ ತಾಲ್ಲೂಕಿಗೆ ತೃತೀಯಸ್ಥಾನಪಡೆದ ಎಸ್,ಸೃಷ್ಟಿ(569), ಎನ್.ಅಪೇಕ್ಷ(567), ಡಿ.ಶ್ರೇಯಾ(566), ವಾಣಿಜ್ಯವಿಭಾಗದಲ್ಲಿ ಜಿಲ್ಲೆಯಲ್ಲಿ ದ್ವಿತೀಯಸ್ಥಾನ ಪಡೆದ ಕೆ.ಸುಪ್ರೀತಾ(586), ಮದೀಹಕೌಸರ್(582), ಎ.ಎಸ್.ಮನೋಜ್(574) ಅವರನ್ನು ಕಾಲೇಜು ಆಡಳಿತಮಂಡಳಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಬ್ರೈಟ್‍ಪದವಿಪೂರ್ವ ಕಾಲೇಜು ಆಡಳಿತಾಧಿಕಾರಿ ಮೇನಕಾ, ರಂಗನಾಥ, ಪೋಷಕರು, ಆಡಳಿತಮಂಡಳಿ, ಉಪನ್ಯಾಸಕರು ಹಾಜರಿದ್ದರು.