ಮಾ.15 ರಂದು ಒಳಮೀಸಲಾತಿ ಕುರಿತು ವಿಚಾರ ಸಂಕಿರಣ

ಚಾಮರಾಜನಗರ: ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ, ಗಡಿಕಟ್ಟೆ ಯಜಮಾನರುಗಳು ಹಾಗೂ ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿಯು ಮಾ.15 ರಂದು ನಗರದ ಅಂಬೇಡ್ಕರ್ ಭವನದಲ್ಲಿ ಒಳಮೀಸಲಾತಿ ವಿಚಾರವಾಗಿ ಸಾಧಕ-ಬಾಧಕಗಳನ್ನು ಚರ್ಚಿಸಲು ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ  ಎಂದು ತಾ.ಪಂ.ಮಾಜಿ ಅಧ್ಯಕ್ಷ ಆರ್.ಮಹದೇವು ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,  ಭಾನುವಾರದಂದು ಬೆಳಿಗ್ಗೆ 10:30ಕ್ಕೆ ಆರಂಭವಾಗುವ ವಿಚಾರ ಸಂಕಿರಣ ಕಾರ್ಯಕ್ರಮದ ನೇತೃತ್ವವನ್ನು ಮೈಸೂರು ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ವಹಿಸಲಿದ್ದಾರೆ.  ಕೊಳ್ಳೇಗಾಲದ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವವರು, ಕರ್ನಾಟಕ ರಾಜ್ಯ ಎಸ್ ಸಿ, ಎಸ್ ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಚಂದ್ರಶೇಖರಯ್ಯ ಅವರು ವಿಚಾರ ಮಂಡನೆ ಮಾಡಲಿದ್ದಾರೆ.ಈ ಕಾರ್ಯಕ್ರಮಕ್ಕೆ ಬಲಗೈ ಸಮುದಾಯ ಮಾಜಿ ಶಾಸಕರು, ಕಡಿಕಟ್ಟೆ ಯಜಮಾನರು, ಸಂಘ- ಸಂಸ್ಥೆ ಯ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮಗಳ ಯಜಮಾನರುಗಳು, ಹಾಲಿ ಮಾಜಿ ಚುನಾಯಿತ ಜನಪ್ರತಿನಿಧಿಗಳು, ಸಮಾಜ ದ ಕುಲಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕು ಎಂದು‌ ಮನವಿ ಮಾಡಿದರು.  
  ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ,ನಗರಸಭಾ ಮಾಜಿ ಸದಸ್ಯ ಆರ್.ಪಿ.ನಂಜುಂಡಸ್ವಾಮಿ,  ನಲ್ಲೂರು ಮಹಾದೇವಸ್ವಾಮಿ, ಗಡಿ ಯಜಮಾನರಾದ ಸೋಮಣ್ಣ, ರಂಗಸ್ವಾಮಿ, ನಾಗಯ್ಯ, ರಾಮಸಮುದ್ರ ಪಾಪಣ್ಣ ಹಾಜರಿದ್ದರು.–

Leave a Reply

Your email address will not be published. Required fields are marked *