ಚಾಮರಾಜನಗರ: ಚಾಮರಾಜನಗರ ವಿಶ್ವವಿದ್ಯಾನಿಲಯ, ಶ್ರೀಯೋಗಿನಾರೇಯಣ ಯತೀಂದ್ರರ ಪ್ರಚಾರ ಸಭಾ ವತಿಯಿಂದ
ಮಾ.22 ರಂದು ನಗರದಲ್ಲಿ ಕೈವಾರ ಸದ್ಗುರು ಯೋಗಿನಾರೇ ಯಣ ಯೋಗಿಗಳ ಪರಿಚಯ ಮತ್ತು ಆತ್ಮಬೋಧೆ ಕುರಿತು ವಿಚಾರ ಸಂಕಿರಣ ಹಾಗೂ . ಯತೀಂದ್ರ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಮೈಸೂರು ವಿವಿ – ವಿಶ್ರಾಂತ ಪ್ರಾಧ್ಯಾಪಕ ಡಾ.ಎಸ್. ಶಿವರಾಜಪ್ಪ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,
ಅಂದು ಬೆಳಗ್ಗೆ 11.30 ಗಂಟೆಗೆ ನಗರದ ವರನಟ ಡಾ.ರಾಜಕು ಮಾರ್ ಜಿಲ್ಲಾ ರಂಗಮಂದಿರ ದಲ್ಲಿ ಸಮಾರಂಭ ನಡೆಯಲಿದ್ದು ಸುತ್ತೂರು ಶ್ರೀಶಿವರಾತ್ರಿದೇಶೀ ಕೇಂದ್ರಮಹಾಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.ಶ್ರೀಕ್ಷೇತ್ರ ಕೈವಾರ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಘನ ಉಪಸ್ಥಿತಿ ಇರಲಿದ್ದು, ಚಾ.ನಗರ ವಿವಿ ಕುಲಪತಿ ಡಾ.ಎಂ.ಆರ್.ಗಂಗಾಧರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿ ದಾನಂದಾಜೀ ಮಹಾರಾಜ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಬೆಂಗಳೂರಿನ ಎಂ.ಎಸ್. ರಾಮಯ್ಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಎಂಎಲ್‌ಸಿ ಡಾ.ಎಂ.ಆರ್.ಸೀತಾರಾಮ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಬ್ಬಹಳ್ಳಿ ಶ್ರೀಮದ್ದಾನೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಎನ್.ಕವಿತಾ ವಿಷಯ ಮಂಡನೆ ಮಾಡಲಿದ್ದಾರೆ. ಮುಖ್ಯ ಆತಿಥಿಗಳಾಗಿ ಜಿಲ್ಲಾಧಿಕಾರಿ ಶ್ರೀರೂಪ, ಎಸ್ಪಿ ಮುತ್ತುರಾಜು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಬೆಂಗಳೂರಿನ ರೈಟ್ಸ್ ಜನರಲ್ ಮ್ಯಾನೇಜರ್ ಎಂ.ಜಿ.ಸುದೀಪ್, ಹೈಕೋರ್ಟ್ ವಕೀಲ ಬಿ.ಎಂ.ಅರುಣ್, ಮುಖ್ಯ ಇಂಜಿನಿಯರ್ ಕೆ.ಟಿ.ರವಿಕುಮಾರ್, ಹಿರಿಯ ಲೆಕ್ಕ ಪರಿಶೋಧಕ ಸುರೇಂದ್ರ ಹೆಗಡೆ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು. ಇದಕ್ಕೂ ಮುನ್ನ ಬೆಳಗ್ಗೆ 9.30 ರಿಂದ 10.30 ತನಕ ಶ್ರೀ ಯೋಗಿನಾರೇಯಣ ಯತೀಂದ್ರರ ಕೀರ್ತನೆಗಳು ಹಾಗೂ ಸಾಮೂಹಿಕ ನಾಮ ಸಂಕೀರ್ತನೆಯ ಕೀರ್ತನೆಗಳನ್ನು ವಾನರಾಶಿ ಬಾಲಕೃಷ್ಣ ಭಾಗವತರ್ ಹಾಡಲಿದ್ದಾರೆ. ಶ್ರೀಕ್ಷೇತ್ರ ಕೈವಾರ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಘನ ಉಪಸ್ಥಿತಿ ವಹಿಸಲಿದ್ದು ಡಾ.ಎಸ್.ಶಿವರಾಜಪ್ಪ ಪುಷ್ಪಾರ್ಚನೆ ಮಾಡಲಿದ್ದಾರೆ. ಸಮಾಜ ಸೇವಕ ಚಂದ್ರಶೇಖರ್, ನಿವೃತ್ತ ಇಂಜಿನಿಯರ್ ಎಂ.ನಾರಾಯಣ, ಹಿರಿಯ ಲೆಕ್ಕ ಪರಿಶೋಧಕ ಕೆ.ಎನ್.ಮೋಹನ್ ಕುಮಾರ್ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಸಿ.ವಿ.ಶ್ರೀನಿವಾಸಶೆಟ್ಟಿ, ನಾಡದೇಶಶೆಟ್ಟರು ವೈ.ವಿ.ಲೋಕನಾಥ್, ದಾಸ ಬಣಜಿಗರ ಸಂಘದ ಅಧ್ಯಕ್ಷ ಚಂದ್ರಶೇಖರ್. ಉಪಾಧ್ಯಕ್ಷ ಸತೀಶ್,
ಕಾರ್ಯದರ್ಶಿ ಆರ್.ಸುಬ್ರಹ್ಮಣ್ಯ, ನಿರ್ದೇಶಕ ರಾದ ಪದ್ಮಪುರುಷೋತ್ತಮ, ಸಿ.ವಿ.ಶ್ರೀಧರ್, ಹಾಜರಿದ್ದರು.