ರೋಟರಿ ಸಂಸ್ಥೆಯ ತರವೇ ಶರಣ ಸಾಹಿತ್ಯ ಪರಿಷತ್ ಒಂದು ಸೇವಾ ಸಂಸ್ಥೆ: ಬಿ.ಕೆ.ರವಿಕುಮಾರ್

  • ಶ್ರೀಮಲ್ಲಪ್ಪ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ

ಚಾಮರಾಜನಗರ: ರೋಟರಿ ಸಂಸ್ಥೆಯ ತರವೇ ಶರಣ ಸಾಹಿತ್ಯ ಪರಿಷತ್ ಒಂದು ಸೇವಾ ಸಂಸ್ಥೆ: ಬಿ.ಕೆ.ರವಿಕುಮಾರ್
ನಗರದ ರೋಟರಿ ಭವನದಲ್ಲಿ  ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು,  ರೋಟರಿ ಸಂಸ್ಥೆ  ಸಹಯೋಗದಲ್ಲಿ ನಡೆದ
ಶ್ರೀಮಲ್ಲಪ್ಪ ಸ್ಮರಣಾರ್ಥ  ದತ್ತಿ ಉಪನ್ಯಾಸ ಸೇವೆ ಮತ್ತು ಶರಣರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಾನವ ಹಣದಿಂದ ಏನೆಲ್ಲ ಸಂಪಾದಿಸಿದರೂ ಸುಖ ಶಾಂತಿ ನೆಮ್ಮದಿಯನ್ನು ಸಂಪಾದಿಸಲು ಸಾಧ್ಯವಿಲ್ಲ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ ಕೆ ರವಿಕುಮಾರ್ ಅಭಿಪ್ರಾಯಪಟ್ಟರು
ಅವರು ಅಖಿಲ ಭಾರತ ಶರಣ ಸಾಹಿತ್ಯಪರಿಷತ್ ಹಾಗೂ ರೋಟರಿ ಸಂಸ್ಥೆ ಸಹಯೋಗ ದಲ್ಲಿ ಹಮ್ಮಿಕೊಂಡಿದ್ದ ಸೇವೆ ಮತ್ತು ಶರಣರು ಎಂಬ ದತ್ತಿ ಉಪನ್ಯಾಸ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು ಹಣ ಇದ್ದ ರೆ ಎಲ್ಲವೂ ಎಂಬ ಭಾವನೆ ಇದೆ ಮನಸ್ಸಿಗೆ ಅಗತ್ಯವಾದ ಸುಖ ಶಾಂತಿ ನೆಮ್ಮದಿಯನ್ನು ಶ್ರೀಮಂತಿಕೆಯಿಂದ ಸಂಪಾದಿಸಲು ಆಗದು ನಾವು ಮಾಡುವ ಕಾಯಕ ದಾನ ಧರ್ಮ ಗಳ ಸೇವೆಯ  ಮೂಲಕ ನೆಮ್ಮದಿಯ ಬದುಕು ಕಟ್ಟಾ ಬಹುದು ಶರಣರು ತಮ್ಮ ಕಾಯಕದ ಮೂಲಕವೇ ಸಮ ಸಮಾಜ ಕಟ್ಟಿ ಆದರ್ಶಪ್ರಾಯ ರಾದರು ಎಂದರುಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಮಡಿವಂತಕೆ’ ಸಂಘ ಸಂಸ್ಥೆ ಅಲ್ಲ . ಎಲ್ಲ ಸಮಾಜದ ಶರಣರು ಬಿತ್ತಿದ . ಚಿಂತನೆಗಳು, ಆದರ್ಶಗಳನ್ನು ಇಂದಿನ ಯುವಪೀಳಿಗೆಗೆ ವರ್ಗಾಯಿಸಬೇಕು. ಅವರಲ್ಲಿ ಪ್ರಚುರಪಡಿಸಬೇಕು. ಇಂತಹ ಜಂಜಾಟಗಳ ನಡುವೆ ಶಾಂತಿ, ಸೌಹಾರ್ದತೆ, ಪ್ರೀತಿ, ವಿಶ್ವಾಸ ಇಂತಹ ಗುಣಗಳನ್ನು ಗಳಿಸಬೇಕು ಎಂಬ ಸದುದ್ದೇಶದಿಂದ ಕೆಲಸ ಮಾಡುತಿದೆ ಎಂದರು.
ರೋಟರಿ ಸಂಸ್ಥೆಯ ತರವೇ ಶರಣ ಸಾಹಿತ್ಯ ಪರಿಷತ್ ಒಂದು ಸೇವಾ ಸಂಸ್ಥೆಯಾಗಿದೆ. ರೋಟರಿ ಸಂಸ್ಥೆಯು ದೇಶದಲ್ಲಿ ಪಲ್‌ಪೋಲಿಯೋವನ್ನು ನಿರ್ಮೂಲನೆ ಮಾಡಿದೆ. ಒಂದು ಸರ್ಕಾರ ಮಾಡಲಾಗದ ಕೆಲಸವನ್ನು ರೋಟರಿ ಸಂಸ್ಥೆ ಸಂಸ್ಥೆಯು ಸೇವಾಭಾವನೆಯಂದ ಮಾಡುತ್ತಿದೆ. ಅಂತಹ ಹಲವಾರು ಸೇವಾ ಕಾರ್ಯಗಳನ್ನು ಮಾಡಿದೆ. ರೋಟರಿ ಸಂಸ್ಥೆಯೊಂದಿಗೆ ಶರಣ ಸಾಹಿತ್ಯ ಪರಿಷತ್ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.
ಜಿಲ್ಲೆಯಲ್ಲಿ 36 ದತ್ತಿಗಳು ಇದ್ದವೆ. ಅಂತಹ ದತ್ತಿ ಕಾರ್ಯಕ್ರಮಗಳಲ್ಲಿ ಆ‌ರ್.ಎಂ.ಸ್ವಾಮಿ ಅವರು ತಂದೆ ಮಲ್ಲಪ್ಪ ಅವರ ಹೆಸರಿನಲ್ಲಿ ದತ್ತಿ ಕಾರ್ಯಕ್ರಮ ನಡೆಯುತ್ತಿರುವುರುವುದು ಶಾಘನೀಯವಾದದ್ದು. ಆರ್.ಎಂ.ಸ್ವಾಮಿ ಅವರು ಅನೇಕ ಸಂಘ- ಸಂಸ್ಥೆಗಳಿದ್ದು ಸೇವಾ ಕಾರ್ಯ ಮಾಡುತ್ತಿದ್ದಾರೆ. ಅವರ ತಂದೆ ಮಲ್ಲಪ್ಪ ಅವರು ಜನರ ಕಷ್ಟಸುಖಗಳಿಗೆ ಸ್ಪಂದಿಸಿದರು. ಎಂದು ಸ್ಮರಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು  ನಿಕಟಪೂರ್ವ ಅಧ್ಯಕ್ಷ ಬಿ ಎಸ್ ವಿನಯ್ ಮಾತನಾಡಿ, ಶರಣರು ಕಾಯಕ ಜೀವಿಗಳು. ಶ್ರಮ ಪಡದೇ ಸಂಪಾದನೆ ಮಾಡಬಾರದು ಎಂಬುದು ಅವರ ಧ್ಯೇಯ. ಸಾಂವಿಧಾನಿಕವಾಗಿ ಚೌಕಟ್ಟಿನಲ್ಲಿ ಸಂಪಾದನೆಯಾಗಬೇಕು. ಆಯ್ದಕ್ಕಿ ಮಾರಯ್ಯ ದಂಪತಿ ಒಂದು ನಿದರ್ಶನ ಎಂದರು.
ಉಣ್ಣುವ ಆಹಾರ ಕೂಡ ಶ್ರಮದ ಕಾಯಕದಿಂದ ಬರಬೇಕು ಎಂಬುದು ಶರಣರ ಆಶಯವಾಗಿತ್ತು.
ಆಯ್ದಕ್ಕಿ ಮಾರಯ್ಯ, ಕಿನ್ನರಿ ಬೊಮ್ಮಯ್ಯ, ಮಡಿವಾಳ ಮಾಚಯ್ಯ, ಹಡಪದ ಅಪ್ಪಣ್ಣ, 12 ನೇ ಶತಮಾನದ ಶರಣರು ಮಾದರಿ ಯಾಗಿದ್ದರು. ಇವರೆಲ್ಲ ಅನಕ್ಷರಸ್ಥರು, ತಳ ಸಮುದಾಯದವರು.
೨೦೦೦೦ ವಚನಗಳಲ್ಲಿ ದಿನ ಒಂದೊಂದು ವಚನಗಳ ಆಶಯವನ್ನು ಪಾಲಿಸಿದರೆ ನಮ್ಮ ಜೀವನ ಪಾವನ ವಾಗುತ್ತದೆ. ಸಮಾಜದ ಎಲ್ಲ ಸ್ತರದ ಜನರೂ ದುಡಿಯಬೇಕು. ತೆರಿಗೆ ಕಟ್ಟಬೇಕು.  ಶರಣರು ಕಾಯಕವನ್ನು  ಸೇವೆಯನ್ನಾಗಿ ಪರಿಗಣಿಸಿದವರು ಎಂದರು
ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ  ರೋಟರಿ ಕಾರ್ಯದರ್ಶಿ ಕೆಂಪನಪುರ ಸಿದ್ದರಾಜು, ಖಜಾಂಚಿ ಆರ್ .ಎಂ.ಸ್ವಾಮಿ ಕದಳಿ ಮಹಿಳವೇದಿಕೆಯ ಅಧ್ಯಕ್ಷೆ ವಸಂತಮ್ಮ ಮಾಜಿ ಶರಣ ಸಾಹಿತ್ಯಪರಿಷತ್ ಅಧ್ಯಕ್ಷ ದುಗ್ಗಹಟ್ಟಿ ಮಲ್ಲಿಕಾರ್ಜುನ ತಾಲ್ಲೂಕು ಅಧ್ಯಕ್ಷ ಆರ್ ಎಸ್ ಲಿಂಗರಾಜು ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ ಆರ್ ಎಸ್ ನಾಗಾರ್ಜುನ ಉಡಿಗಾಲ ಕುಮಾರಸ್ವಾಮಿ ಮೂಡ್ಲುಪುರ ನಂದೀಶ್ ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಶಮಿತ್ ಕುಮಾರ್ ಎಪಿ ಎಂಸಿ ಮಾಜಿ ಅಧ್ಯಕ್ಷ ಸೋಮೇಶ್ ಸೇರಿದಂತೆ ಅನೇಕರು ಹಾಜರಿದ್ದರು

Leave a Reply

Your email address will not be published. Required fields are marked *