ಇತಿಹಾಸದಲ್ಲಿಯೇ ಶಿವಾಜಿ ದಿವ್ಯ ತೇಜಸ್ಸು ಧೈರ್ಯ ಹಾಗೂ ಯುವಶಕ್ತಿಯ ಆರಾಧ್ಯ ದೈವ: ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ವಿಶ್ವದ ಇತಿಹಾಸದಲ್ಲಿಯೇ ಶಿವಾಜಿ ದಿವ್ಯ ತೇಜಸ್ಸು ,ಯಶಸ್ಸು ,ಸಾಹಸ, ಧೈರ್ಯ ಹಾಗೂ ಯುವಶಕ್ತಿಯ ಆರಾಧ್ಯ ದೈವ ಆಗಿದ್ದಾರೆ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟ ಮತ್ತು ಋಗ್ವೇದಿ ಯೂಥ್ ಕ್ಲಬ್ ಅಮಚವಾಡಿಯಲ್ಲಿ ಹಮ್ಮಿಕೊಂಡಿದ್ದ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಶಿವಾಜಿ ಶಿವನ ಅವತಾರವಾಗಿ ಭಾರತದಲ್ಲಿ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿ, ಭಾರತವನ್ನು ಮೊಘಲರ ಮತ್ತು ಆದಿಲ್ ಶಾಹಿಗಳ ವಿರುದ್ಧ ಸಂರಕ್ಷಣೆ ಮಾಡಿದ ಮಹಾನ್ ವೀರ. ಶಿವಾಜಿಯ ಸಾಧನೆಗೆ ಆತನಲ್ಲಿದ್ದ ದೇಶಭಕ್ತಿ, ಮಾತೃಭಕ್ತಿ, ಗುರು ಭಕ್ತಿಯ ಕಾರಣ. ಇಂದಿನ ಯುವಕರು ಶಿವಾಜಿಯ ಆದರ್ಶ ಗುಣಗಳಾದ ಮಾತೃಭಕ್ತಿ, ಗುರು ಭಕ್ತಿ ಹಾಗೂ ದೇಶಭಕ್ತಿಯನ್ನು ಉಸಿರಾಗಿಸಿಕೊಂಡು ಮುನ್ನಡೆಯಬೇಕು. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಗುರು ಹಿರಿಯರ, ತಂದೆ ತಾಯಿಯರ ಆಶೀರ್ವಾದವಿದ್ದಾಗ ಹೊಸ ರಾಷ್ಟ್ರವನ್ನೇ ಮುನ್ನಡೆಸುವ ಹಾಗೂ ಕಟ್ಟುವ ಶಕ್ತಿ, ಚೈತನ್ಯ, ಸ್ಪೂರ್ತಿ ಸಾಧ್ಯವಾಗುತ್ತದೆ.

ಶಿವಾಜಿಯ ರಾಷ್ಟ್ರ ನಿರ್ಮಾಣಕ್ಕೆ ತಾಯಿ ಜೀಜಾಬಾಯಿ ,ದಾದಾ ಜಿ ಕೊಂಡ ದೇವ ,ಗುರು ರಾಮದಾಸರ ಪ್ರೇರಣೆ ಕಾರಣವಾಗಿದೆ. ಯುವಕರು ತಮ್ಮ ಜೀವನದಲ್ಲಿ ಇಂತಹ ಸದ್ಗುಣಗಳ ಮೌಲ್ಯವನ್ನು ಕಟ್ಟಿಕೊಳ್ಳಬೇಕು. ದೇಶಕ್ಕೆ ಸಮರ್ಪಣೆಯ ಭಾವವನ್ನು ಭಕ್ತಿಯನ್ನು ಬೆಳೆಸಿಕೊಳ್ಳಲು ಶಿವಾಜಿಯಂತಹ ಮಹಾನ್ ವೀರರ ಇತಿಹಾಸವನ್ನು ಅಧ್ಯಯನ ಮಾಡಿ ಹೋರಾಟದ ಸಾಹಸದ ಕಥೆಗಳನ್ನು ತಿಳಿಯಿರಿ.

ಶಿವಾಜಿ ತನ್ನದೇ ಆದ ವಿಶಿಷ್ಟವಾದ ಸೇನಾ ನಿರ್ಮಾಣ, ಆಡಳಿತ, ದಕ್ಷತೆ ವಿಶಿಷ್ಟತೆ ಹಾಗೂ ನೌಕಾಪಡೆಯ ನಿರ್ಮಾಣ ತಂತ್ರದ ಚಿಂತನೆ ಮಾದರಿಯಾದದ್ದು. ಸಮಾಜದಲ್ಲಿ,ಯುದ್ಧದ ನಂತರದಲ್ಲೂ ಯಾವುದೇ ರೀತಿಯಲ್ಲೂ ಸ್ತ್ರೀಗೆ ಅವಮಾನವಾಗುವುದನ್ನು ಸಹಿಸದ ಶಿವಾಜಿಯಂತಹ ರಾಜರು ಅಗತ್ಯ. ಹಾಗೆಯೇ ಸಮಾಜವನ್ನು ಸ್ತ್ರೀ ಶೋಷಣೆಯಿಂದ ನಿರ್ಮೂಲನೆ ಮಾಡುವ ದೃಢ ನಿರ್ಧಾರವನ್ನು, ಆಡಳಿತವನ್ನು ನಡೆಸಲು ಶಿವಾಜಿ ಪ್ರೇರಣೆಯನ್ನು ನೀಡಲಿ ಎಂದು ತಿಳಿಸಿದರು.

ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ದೊಡ್ಡ ಮೊಳೆ ಸುರೇಶ್ ಮಾತನಾಡಿ ಜಿಲ್ಲಾ ಯುವ ಸಂಘಟನೆಗಳ ಮೂಲಕ ಶಿವಾಜಿ ಆದರ್ಶಗಳನ್ನು ಮತ್ತು ಅವರ ಇತಿಹಾಸದ ಹೋರಾಟಗಳನ್ನು ತಿಳಿಸುವ ಕಾರ್ಯವನ್ನು ಮಾಡುತ್ತಿದೆ. ಯುವಕರು ಪ್ರಕೃತಿಯ ಸಂರಕ್ಷಣೆ ಸಮಾಜದ ನವ ನಿರ್ಮಾಣಕ್ಕೆ ತೊಡಗಿಸಿಕೊಳ್ಳಬೇಕು .ಶಿಕ್ಷಣವನ್ನು ಪ್ರೀತಿಸಿ ,ಅಧ್ಯಯನಶೀಲರಾಗಿ, ಶ್ರೇಷ್ಠ ಭಾರತವನ್ನಾಗಿ ರೂಪಿಸೋಣ ಎಂದರು.

ಯುವ ಸಂಘಟನೆಗಳ ಪದಾಧಿಕಾರಿಗಳಾದ ಗುರುರಾಜ್, ಕೀರ್ತಿ ವಿಕಾಸ್ ,ಚಂದನ್ ಮಂಜು ಸೂರ್ಯ ,ಮನೋಜ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *