ಸಿದ್ದಲಿಂಗಸ್ವಾಮಿ ನೇತೃತ್ವದ ತಂಡ ಜಯಭೇರಿ

  • ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿ

ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಿದ್ದಲಿಂಗಸ್ವಾಮಿ ಅವರ ನೇತೃತ್ವದ ಚಾಮರಾಜನಗರ ತಂಡ ಜಯಭೇರಿ ಬಾರಿಸಿ ಟ್ರೋಫಿ ಎತ್ತಿಹಿಡಿಯಿತು.
ಫೈನಲ್ ಪಂದ್ಯದಲ್ಲಿ ಹನೂರು ತಂಡದ ವಿರುದ್ಧ ಚಾಮರಾಜನಗರ ತಂಡವು 30 ರನ್ ಗಳ ಅಂತರದ ಗೆಲುವು ಪಡೆಯಿತು.
ಮೊದಲು ಬ್ಯಾಟಿಂಗ್‌ ಮಾಡಿದ ಚಾಮರಾಜನಗರ ತಂಡವು ಮಧುಸೂದನ್ ಹಾಗೂ ವಿಜಯಕುಮಾರ್ ಅವರ ಅತ್ಯುತ್ತಮದ ಬ್ಯಾಟಿಂಗ್ ಪ್ರದರ್ಶನದಿಂದ 6 ಓವರ್‌ಗಳಲ್ಲಿ 78 ರನ್ ಗಳನ್ನು ಗಳಿಸಿತು.
ಗುರಿ ಬೆನ್ನತ್ತಿದ್ದ ಹನೂರು ತಂಡವು 44 ರನ್ ಗಳನ್ನು ಹೊಡೆಯಲಷ್ಟೇ ಸಾಧ್ಯವಾಯಿತು. ಆ ಮೂಲಕ ಚಾ.ನಗರ ತಂಡ ಗೆಲವು ಸಾಧಿಸಿತು.
ಹಿರಿಯ ಪತ್ರಕರ್ತ ಅಬ್ರಾಹಂ ಡಿ.ಸಿಲ್ವ ಹಾಗೂ ಹಿರಿಯ ಕ್ರಿಕೆಟ್ ಆಟಗಾರ ಶ್ರೀನಿವಾಸಪ್ರಸಾದ್ ಉಭಯ ತಂಡಗಳಿಗೆ ಟ್ರೋಫಿಗಳನ್ನು ವಿತರಿಸಿದರು.
ಸರಣಿ ಶ್ರೇಷ್ಠ ಪ್ರಶಸ್ತಿಗೆ ಮಧುಸೂದನ್, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ವಿಜಯಕುಮಾರ್ ಭಾಜನರಾದರು.
ಪಂದ್ಯಾವಳಿಯಲ್ಲಿ ಗುಂಡ್ಲುಪೇಟೆ ಹಾಗೂ ಯಳಂದೂರು ಪತ್ರಕರ್ತರ ಸಂಘದ ತಂಡಗಳು ಸಹ ಪಾಲ್ಗೊಂಡಿದ್ದವು.

Leave a Reply

Your email address will not be published. Required fields are marked *