ಎಡಿಸಿ ಮುಖಾಂತರ ಪಿಎಂಗೆ ಮನವಿ ಸಲ್ಲಿಕೆ
ಚಾಮರಾಜನಗರ: ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿವೃತ್ತ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ಸಂಬಂಧಪಟ್ಟಂತೆ, ಮುಂದಿನ ದಿನಗಳಲ್ಲಿ ನಿವೃತ್ತಿ ವೇತನ ಮತ್ತು ಕುಟುಂಬ ಪಿಂಚಣಿಯನ್ನು ಪರಿಷ್ಕರಣೆ ಮಾಡಲು ಹಾಗೂ ವಾರ್ಷಿಕವಾಗಿ ನೀಡುತ್ತಿದ್ದ ತುಟ್ಟಿ ಭತ್ಯೆಯನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ನೀಡಿರುವ
ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ
ಜಿಲ್ಲಾ ಶಾಖೆಯ ಪದಾಧಿಕಾರಿಗಳು, ಸದಸ್ಯರು ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಸಂಘದ ಜಿಲ್ಲಾಧ್ಯಕ್ಷ ಎನ್.ನಾಗೇಶ್ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ತೋಳಿಗೆ ಕಪ್ಪು ಪಟ್ಟಿಧರಿಸಿ ಮೌನಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಎನ್.ನಾಗೇಶ್ ಮಾತನಾಡಿ, ಕೇಂದ್ರ ಸರ್ಕಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು
ನಿವೃತ್ತ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ಸಂಬಂಧಪಟ್ಟಂತೆ, ಮುಂದಿನ ದಿನಗಳಲ್ಲಿ ನಿವೃತ್ತಿ ವೇತನ ಮತ್ತು ಕುಟುಂಬ ಪಿಂಚಣಿಯನ್ನು ಪರಿಷ್ಕರಣೆ ಮಾಡಲು ಹಾಗೂ ವಾರ್ಷಿಕವಾಗಿ ನೀಡುತ್ತಿದ್ದ ತುಟ್ಟಿ ಭತ್ಯೆಯನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ನೀಡಿರುವ ಹೇಳಿಕೆ ಖಂಡಿಸಿ ನಮ್ಮ ಸಂಘದ ಪದಾಧಿಕಾರಿಗಳು, ಸದಸ್ಯರು
ಕಪ್ಪು ಬಟ್ಟೆ”ಯನ್ನು ಧರಿಸಿ ಸಂಕೇತಿಕವಾಗಿ ಪ್ರತಿಭಟನೆ ನಡೆಸಿ, ನರೇಂದ್ರ ಮೋದಿಯವರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಗುತ್ತದೆ ಎಂದರು.
ಕೇಂದ್ರ ಸರ್ಕಾರ ನಿವೃತ್ತ ನೌಕರಿಗೆ ಜನವರಿ, ಜುಲೈ ತಿಂಗಳಲ್ಲಿ ಆರು ತಿಂಗಳಿಗೊಮ್ಮೆ ವರ್ಷಕ್ಕೆ 2 ಬಾರಿ ತುಟ್ಟಿಭತ್ಯೆ ನೀಡುತ್ತಿದ್ದು ಈಗ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀ
ತಾರಾಮನ್ ಹೇಳಿಕೆ ನೀಡುವುದು ಸರಿಯಲ್ಲ ನಿವೃತ್ತ ನೌಕರರ ಇಳಿ ವಯಸ್ಸಿನಲ್ಲಿ ತುಟ್ಟಿ ಭತ್ಯೆಗಳ ಅವಶ್ಯಕತೆ ಇರುತ್ತದೆ.ಆಗಾಗಿ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ತುಟ್ಟಿಭತ್ತೆ ನಿಲ್ಲಿಸದೇ ಮುಂದುವರಿಸಿ, ನಿವೃತ್ತ ನೌಕರರ ಹಿತ ಕಾಯಬೇಕು
ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಹೊನ್ನೂರಯ್ಯ, ಎಲ್.ದೇವಣ್ಣ, ಜಂಟಿ ಕಾರ್ಯದರ್ಶಿ ಜಿ.ರಾಘವೇಂದ್ರ, ಸಂಘಟನಾ ಕಾರ್ಯದರ್ಶಿ ಎ.ಸಿದ್ದಯ್ಯ, ಲೆಕ್ಕ ಪರಿಶೋಧಕ ಬಿ.ರಾಮು, ನಿರ್ದೇಶಕರರಾದ ಹೆಚ್.ಬಿ.ಕೃಷ್ಣ ನಾಯಕ,
ಶ್ರೀಕಂಠಸ್ವಾಮಿ, ರಾಜ್ ಗೋಪಾಲ್, ಎಂ.ಬಿ.ಕೃಷ್ಣಮೂರ್ತಿ, ಕೆ.ಸಿ.ಮರಿಸ್ವಾಮಿ, ಕೆ.ಸೋಮಣ್ಣ, ಎನ್.ಸುಬ್ರಹ್ಮಣ್ಯ, ನಟರಾಜು, ಎ.ಸುಂದರ್, ಎ.ಪಿ.ಚಂದ್ರಶೇಖರ್, ಎ.ಎನ್.ಪದ್ಮಾಕ್ಷಿ, ಭಾಗ್ಯಲಕ್ಷ್ಮೀ, ಟಿ.ಬಸವರಾಜು, ರಾಘವೇಂದ್ರ, ಶಿವಣ್ಣ, ಸಿ.ಎನ್.ಕೃಷ್ಣಮೂರ್ತಿ, ಅರ್.ಎನ್.ಸುಂದರ್, ಶ್ರೀನಿವಾಸ, ಎಸ್.ಐ ಸಿದ್ದರಾಜು, ಪಿ.ಪುಟ್ಟಸ್ವಾಮಿ
ಇತರರು ಭಾಗವಹಿಸಿದ್ದರು.