ಮಾತೃ ಭಾಷೆಯಿಂದ ವಿಜ್ಞಾನ ವಿಷಯ ಸರಳೀಕರಣ : ಕೇರಳ ಕುಲಪತಿಗಳಾದ ಪ್ರೊ. ಸಿದ್ದು ಪಿ. ಅಲಗೂರ್

ಚಾಮರಾಜನಗರ: ವಿಜ್ಞಾನ ಇನ್ನೂ ಕೂಡ ಅತ್ಯಂತ ಕಠಿಣವಾದ ವಿಷಯವೆಂದೇ ಭಾವಿಸಿರುವ ಸಮಾಜದಲ್ಲಿ ಕೇವಲ ಮಾತೃಭಾಷೆ ಮಾತ್ರ ಇದನ್ನು ಸರಳೀಕರಣಗೊಳಿಸಬಲ್ಲದು. ಭಾಷೆಯ ಮೂಲಕ ವಿಜ್ಞಾನವನ್ನು ಜನಸಾಮಾನ್ಯರು ಒಪ್ಪಿಕೊಳ್ಳುವ ಹಾಗೂ ಅಪ್ಪಿಕೊಳ್ಳುವ ವಿಷಯವನ್ನಾಗಿಸಬಹುದಾಗಿದೆ ಎಂದು ಕಾಸರಗೋಡು ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಸಿದ್ದು ಪಿ ಅಲಗೂರ್ ಅವರು ಹೇಳಿದರು. 

  ಚಾಮರಾಜನಗರ ವಿಶ್ವವಿದ್ಯಾಲಯದ ಆವರಣದಲ್ಲಿಂದು ಆಯೋಜಿಸಲಾಗಿದ್ದ 18ನೇ ಕನ್ನಡ ವಿಜ್ಞಾನ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. 

  ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಇಂದು ಮುಂಚೂಣಿಯಲ್ಲಿದೆ. ಅನೇಕ ಆವಿಷ್ಕಾರ, ಸಂಶೋಧನೆಗಳು ಭಾರತದಲ್ಲಿ ಜನ್ಮ ತಳಿಯುತ್ತಿವೆ. ವಿಜ್ಞಾನ ಜನಸಾಮಾನ್ಯರನ್ನು ಒಳಗೊಂಡು ಅದು ಕಟ್ಟಕಡೆಯ ವ್ಯಕ್ತಿಗೂ ತಿಳಿಯುಂತಾಗಬೇಕಾದರೆ ಅವರ ಮಾತೃಭಾಷೆಯಲ್ಲಿಯೇ ಆ ವಿಷಯ ಪ್ರಸರಣಗೊಳ್ಳಬೇಕು. ಆಗ ಮಾತ್ರ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಜನರ ನಾಡಿಮಿಡಿತವಾಗಬಲ್ಲದು. ಎಲ್ಲ ಬಗೆಯ ಹಿನ್ನೆಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಅಭಿವೃದ್ದಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. 

  ಕರ್ನಾಟಕವು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವವೇ ಮೆಚ್ಚುವ ಮಹತ್ತರವಾದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಹೀಗೆ ಮೊದಲಿಗೆ ಬರುವ ಹೆಸರು ಮೋಕ್ಷಗುಂಡಂ ವಿಶ್ವೇಶ್ವರಯ್ಯನವರದ್ದು. ಇಡೀ ವಿಶ್ವವನ್ನೇ ಬೆರಗುಗೊಳಿಸುವ ಅವರ ನಿರ್ಮಾಣಗಳು ಮುಂಬರುವ ಎಂಜಿನಿಯರ್‍ಗಳು, ವಿಜ್ಞಾನಿಗಳು ಹಾಗೂ ತಂತ್ರಜ್ಞರಿಗೆ ಮಾದರಿಯಾಗಿದೆ. ನೋಬಲ್ ಪ್ರಶಸ್ತಿ ಪುರಸ್ಕøತ ಸರ್ ಸಿ.ವಿ. ರಾಮನ್ ಅವರ ಬೆಳಕು ಮತ್ತು ಬೆಳಕಿನ ವಕ್ರೀಭವನದ ಕುರಿತಾದ ಸಂಶೋಧನೆಗಳು ಹಾಗೂ ರಾಮನ್ ಪರಿಣಾಮ ವಿಶ್ವದ ಮುಂದೆ ಭಾರತದ ಸಾಮಥ್ರ್ಯವನ್ನು ಎಂದೋ ಸಾಬೀತುಪಡಿಸಿಯಾಗಿದೆ ಎಂದರು. 

  ವಿಜ್ಞಾನವನ್ನು ಕನ್ನಡದಲ್ಲಿ ಪ್ರಸರಣ ಮಾಡುವ ಮೂಲಕ ರಾಜ್ಯದ ಯುವ ಮನಸುಗಳಿಗೆ ಯುವ ವಿಜ್ಞಾನಿಗಳಿಗೆ ಹೊಸ ಕನಸುಗಳನ್ನು ಬಿತ್ತಲು ಅನುಕೂಲವಾಗಿದೆ. ವಿಜ್ಞಾನ ಎಲ್ಲರಿಗೂ ಸೇರಿದ್ದು ಎನಿಸಬೇಕೆಂದರೆ ಅದಕ್ಕೆ ಮಾತೃಭಾಷೆ ನೀಡಬಹುದಾದ ಕಾಣಿಕೆ ಬಹಳ ಮಹತ್ವದ್ದಾಗಿದೆ ಎಂದು ಪ್ರೊ. ಸಿದ್ದು ಪಿ ಅಲಗೂರ್ ಅವರು ತಿಳಿಸಿದರು. 

  ದಿಕ್ಸೂಚಿ ಭಾಷಣ ಮಾಡಿದ ತಿರುವನಂತಪುರದ ಐ.ಐ.ಎಸ್.ಟಿ ಕುಲಾಧಿಪತಿಗಳು, ಇಸ್ರೋ ಖ್ಯಾತ ವಿಜ್ಞಾನಿಗಳು, ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕøತರಾದ ಡಾ. ವಿ.ಎನ್. ಸುರೇಶ್ ಅವರು ಭಾರತ ಇಂದು ಅನೇಕ ಕ್ಷೇತ್ರಗಳಲ್ಲಿ ಮುನ್ನೋಟದಲ್ಲಿ ಸಾಗುತ್ತಿದೆ. ವಿಶ್ವದಲ್ಲೇ ಹೆಚ್ಚು ಪರಿಣಾಮಕಾರಿ ಪ್ರಬಂಧಗಳು ಸಂಶೋಧನೆ ನಡೆಯುತ್ತಿರುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. 2047ರ ವೇಳೆಗೆ ಭಾರತ ವಿಶ್ವಗುರುವಾಗುವ ಶಕ್ತಿ ಹೊಂದಿದೆ ಎಂದರು. 

  ಅಧ್ಯಕ್ಷತೆ ವಹಿಸಿ ಮಾತನಾಡಿದ ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ. ಎಂ.ಆರ್. ಗಂಗಾಧರ್ ಅವರು ಜಾನಪದ ಕಲೆ, ಸಂಸ್ಕøತಿ, ವೈಶಿಷ್ಟ್ಯತೆಗೆ ಚಾಮರಾಜನಗರ ಹೆಸರುವಾಸಿಯಾಗಿದೆ. ಕನ್ನಡಕ್ಕೆ ಎಲ್ಲಿಯೇ ಅಪಮಾನವಾದರೂ ಸಮಸ್ಯೆ ಉದ್ಬವಿಸಿದರೆ ಮೊದಲು ಧ್ವನಿ ಎತ್ತವುದೇ ಚಾಮರಾಜನಗರದಲ್ಲಿ. ಇಂತಹ ಜಿಲ್ಲೆಯ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಜ್ಞಾನ ಸಮ್ಮೇಳನ ಆಯೋಜನೆಗೆ ಅವಕಾಶ ದೊರೆತಿದೆ. ವಿಜ್ಞಾನವನ್ನು ಮಾತೃಭಾಷೆಯಲ್ಲಿ ಕಲಿಯುವ ಭರವಸೆ ಮೂಡಿಸುವ ಉದ್ದೇಶದಿಂದ ಸಮ್ಮೇಳನ ನಡೆಯುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು. 

   ಈ ಸಂದರ್ಭದಲ್ಲಿ ಸ್ವದೇಶಿ ವಿಜ್ಞಾನ ಅಂದೋಳನ ಕರ್ನಾಟಕ ವತಿಯಿಂದ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರ ಪ್ರಶಸ್ತಿಯನ್ನು ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ. ಎಂ.ಆರ್. ಗಂಗಾಧರ್, ಕೊಡಗು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಆಶೋಕ ಎಸ್. ಅಲೂರ್ ಅವರಿಗೆ, ಡಾ. ಸಿ.ಎನ್.ಆರ್. ರಾವ್ ವಿಜ್ಞಾನ ಪುರಸ್ಕಾರ ಪ್ರಶಸ್ತಿಯನ್ನು ಹಾವೇರಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಸುರೇಶ್ ಹೆಚ್. ಜಂಗಮಶೆಟ್ಟಿ, ಅವರಿಗೆ, ಡಾ. ಭೀಮ್ ಸೇನ್ ಜೋಶಿ ಸಾಂಸ್ಕøತಿಕ ವಿಜ್ಞಾನ ಪ್ರಶಸ್ತಿಯನ್ನು ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ. ರಮೇಶ್ ಅವರಿಗೆ ಪ್ರಧಾನ ಮಾಡಲಾಯಿತು. 

  ಮೈಸೂರು ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕರಾದ ಪ್ರೊ. ಮೊರಬದ ಮಲ್ಲಿಕಾರ್ಜುನ, ಕೊಳ್ಳೇಗಾಲ ಮಾನಸ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಡಾ. ಎಸ್. ದತ್ತೇಶ ಕುಮಾರ್, ಚಾಮರಾಜನಗರ ವಿಶ್ವ ವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಪ್ರೊ. ಕೆ.ಎಂ. ಮಹದೇವನ್, ಸ್ವದೇಶಿ ವಿಜ್ಞಾನ ಆಂದೋಳನ ಕರ್ನಟಕದ ರಾಜ್ಯಾಧ್ಯಕ್ಷರಾದ ಡಾ. ಎಂ.ಎಸ್. ಜೋಗದ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *