ಸ್ಕೇಟಿಂಗ್ ಮಕ್ಕಳಲ್ಲಿ ಆತ್ಮವಿಶ್ವಾಸ, ಏಕಾಗ್ರತೆ ಹೆಚ್ಚಿಸುತ್ತದೆ : ಶ್ರೀನಿಧಿಕುದರ್

  • ಗಮನ ಸೆಳೆದ 30ಕಿ.ಮೀ ಸ್ಕೇಟಿಂಗ್ ಮ್ಯಾರಥಾನ್

ಚಾಮರಾಜನಗರ: ಕ್ರೀಡಾ ದಿನಾಚರಣೆ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮರಾಜನಗರ ಜಿಲ್ಲಾ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ನಡೆದ ಚಾಮರಾಜನಗರ – ಕೊಳ್ಳೇಗಾಲ 30 ಕಿ.ಮೀ ಸ್ಟೇಟಿಂಗ್ ಮ್ಯಾರಥಾನ್ ಗಮನ ಸೆಳೆಯಿತು.
ನಗರದ ಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಆರಂಭವಾದ ಸ್ಕೇಟಿಂಗ್ ಮ್ಯಾರಥಾನ್‌ಗೆ ಉದ್ಯಮಿ ಶ್ರೀನಿಧಿಕುದರ್, ಕ್ರೀಡಾಪಟು ವಿ.ಶ್ರೀನಿವಾಸಪ್ರಸಾದ್ ಇತರರು ಹಸಿರುನಿಶಾನೆ ತೋರುವ ಮೂಲಕ ಚಾಲನೆ ನೀಡಿ ಶುಭ ಕೋರಿದರು.

ಚಾಲನೆ ನೀಡಿದ ಉದ್ಯಮಿ ಶ್ರೀನಿಧಿಕುದರ್ ಮಾತನಾಡಿ, ಕ್ರೀಡಾ ದಿನಾಚರಣೆ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮರಾಜನಗರ ಜಿಲ್ಲಾ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಚಾಮರಾಜನಗರ – ಕೊಳ್ಳೇಗಾಲ 30 ಕಿ.ಮೀ ಸ್ಕೇಟಿಂಗ್ ಮ್ಯಾರಥಾನ್ ಅಯೋಜಿಸಿರುವುದು ತುಂಭಾ ಖುಷಿಯಾಗಿದೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಪುರ್ಖಾನ್ ತಂಡದವರು ಸ್ಟೇಟಿಂಗ್ ಮ್ಯಾರಥಾನ್ ಮೂಲಕ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಾಗಿದೆ. ಸ್ಟೇಟಿಂಗ್ ದೈಹಿಕ, ಮಾನಸಿಕ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಮಕ್ಕಳಲ್ಲಿ ಆತ್ಮವಿಶ್ವಾಸ, ಏಕಾಗ್ರತ ಹೆಚ್ಚಿಸುತ್ತದೆ. ಎಂದು ಸ್ಟೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಶುಭ ಕೋರಿದರು.

ಕ್ರೀಡಾಪಟು ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, ಯುವಜನಾಂಗವನ್ನು ದುಶ್ಚಟಗಳಿಂದ ದೂರವಿರಬೇಕು. ಅವರನ್ನು ಆರೋಗ್ಯಕರವಾಗಿ ನೋಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರಗಳು ಮಾದಕದ್ರವ್ಯಗಳನ್ನು ಬುಡಸಮೇತ ನಾಶ ಮಾಡುವ ಕೆಲಸವನ್ನು ಮಾಡಬೇಕು. ಅಂತಹ ಕೆಲಸ ಕೆಲಸವನ್ನು ಚಾಮರಾಜನಗರ ಜಿಲ್ಲಾ ಸ್ಕೇಟಿಂಗ್ ಅಸೋಸಿಯೇಷನ್‌ ಮಾಡುತ್ತಿರುವುದು ಒಳ್ಳೆಯ ಕೆಲಸ ಆಗಿದೆ. ಜಿಲ್ಲೆಯ ಕ್ರೀಡೆ ಬೆಳವಣಿಗೆಗೆ ಜಿಲ್ಲೆಯ ಜನಪ್ರತಿನಿಧಿಗಳು ಪ್ರೋತ್ಸಾಹ ಅಗತ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಸ್ಕೇಟಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಪುರ್ಖಾನ್ ಪಾಷ, ಕರಾಟೆ ಗ್ಯಾಂಡ್ ಮಾಸ್ಟರ್ ನಾಗರಾಜಜಟ್ಟಿ, ಅಧ್ಯಕ್ಷ ರೆಹಾನ್, ಅಜೀಂ, ಯೂಟ್ಯೂಬ್ ಪ್ರಮೋಟರ್ ನಿತಿ, ಹಸಿರುಪಡೆ ಸತೀಶ್, ಪಿಡಿಓ ರಮೇಶ್, ಹಾಗೂ ಸ್ಕೇಟಿಂಗ್ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *