- 77ನೇ ಗಣರಾಜ್ಯೋತ್ಸವ : ಸ್ಕೆಟಿಂಗ್ ಮ್ಯಾರಥಾನ್
ಚಾಮರಾಜನಗರ : ಗಣರಾಜೋತ್ಸವ ಅಂಗವಾಗಿ ನಗರದ ಸ್ಕೆಟಿಂಗ್ ಅಸೋಸಿಯೇಷನ್ ವತಿಯಿಂದ ಸ್ಕೆಟಿಂಗ್ ಮ್ಯಾರಥಾನ್ ನಡೆಯಿತು.
ನಗರದ ಸುಲ್ತಾನ್ ಷರೀಫ್ ವೃತ್ತದ ನಮ್ಮ ಚೆಲುವ ಚಾಮರಾಜನಗರ ನಾಮಫಲಕದ ಮುಂಭಾಗದಲ್ಲಿ ಚಾಲನೆಗೊಂಡು ಅಲ್ಲಿಂದ ದೊಡ್ಡಂಗಡಿ ಬೀದಿ, ನಗರಸಭೆ, ಚಾಮರಾಜೇಶ್ವರ ದೇವಸ್ಥಾನ ರಸ್ತೆ ಮೂಲಕ ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ಕರಾಟೆ ಪ್ರದರ್ಶನ, ಸ್ಕೆಟಿಂಗ್ ಪ್ರದರ್ಶನ ನಡೆಯಿತು. ನಂತರ ಬಿ.ರಾಚಯ್ಯ ಜೋಡಿರಸ್ತೆಯ ಮೂಲಕ ಜಿಲ್ಲಾಡಳಿತದ ಮುಖ್ಯಗೇಟ್ ಮುಂಭಾಗಕ್ಕೆ -ತೆರಳಿತು. ಮಕ್ಕಳಿಗೆ ಬಹುಮಾನ, ಪ್ರಶಸ್ತಿ ಪತ್ರ ವಿತರಿಸಲಾಯಿತು.
ಉದ್ಯಮಿ ಶ್ರೀನಿಧಿ ಸ್ಕೆಟಿಂಗ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, 77ನೇ ಗಣರಾಜ್ಯೋತ್ಸವ ಅಂಗವಾಗಿ ಸ್ಕೆಟಿಂಗ್ ಅಸೋಸಿಯೇಷನ್ ವತಿಯಿಂದ ಸ್ಕೆಟಿಂಗ್ ಮಾರಥಾನ್ ಅಯೋಜನೆ ಮಾಡಿರುವುದು ಒಂದು ಸಂತಸದ ಸಂಗತಿಯಾಗಿದೆ. ಗಣರಾಜ್ಯೋತ್ಸವ ದಿನ ಅಂದರೆ ಸಂವಿಧಾನ ಅರ್ಪಣೆ ಮಾಡಿದ ಒಂದು ಐತಿಹಾಸಿಕ ದಿನ. ಭಾರತ ಸಂವಿಧಾನ ದೇಶದ ಸರ್ವರಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಒದಗಿಸಿದೆ. ಸೈಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿರುವ ಮಕ್ಕಳು,. ಸ್ಕೆಟಿಂಗ್, ಶಿಕ್ಷಣದಲ್ಲಿ ಒಳ್ಳೆಯ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತರಲಿ ಎಂದು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಚೂಡಾ ಅಧ್ಯಕ್ಷ ಮಹಮ್ಮಅಸ್ಕರ್, ಅಂಕುರಂ ಶಾಲೆಯ ಆದರ್ಶ ಅರಸು, ಹಸಿರುಪಡೆ ಸತೀಶ್, ಕೌಶಲ್ಯ ಇಲಾಖೆ ಅನ್ಸಾರ್‌ಖಾನ್, ಸ್ಕೆಟಿಂಗ್, ಕರಾಟೆ ಕೋಚ್ ಪುರ್ಖಾನ್ ಹಾಗೂ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.