ಶ್ರೀಭಗೀರಥ ಸೇವಾ ಟ್ರಸ್ಟ್  ಉದ್ದೇಶ ಸಮುದಾಯ ಜಾಗೃತಿ: ಮಹದೇವಸ್ವಾಮಿ

  •  ಶ್ರೀಭಗೀರಥ ಸೇವಾ ಟ್ರಸ್ಟ್ ನ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ

ಚಾಮರಾಜನಗರ : ಉಪ್ಪಾರ ಸಮುದಾಯವನ್ನು ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಶ್ರೀಭಗೀರಥ ಸೇವಾ ಟ್ರಸ್ಟ್ ಸ್ಥಾಪಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಕೋರಿಯರ್ ಮಹದೇವಸ್ವಾಮಿ ಹೇಳಿದರು.
ನಗರದ ಚೆನ್ನೀಪುರಮೋಳೆಯಲ್ಲಿರುವ ಶ್ರೀಭಗೀರಥ ಸೇವಾ ಟ್ರಸ್ಟ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಟ್ರಸ್ಟ್‌ನ 2026ನೇ ಸಾಲಿನ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು. ಶ್ರೀಭಗೀರಥ ಸೇವಾ ಟ್ರಸ್ಟ್ 2026 ನೇ ಸಾಲಿನ ಕ್ಯಾಲೆಂಡರ್ ನ್ನು ಹೊರತರಲಾಗಿದೆ. ಹಿಂದುಳಿದ ಉಪ್ಪಾರ ಸಮುದಾಯದ ಜಾಗೃತಿಗಾಗಿ, ಅಭಿವೃದ್ಧಿಗಾಗಿ ಈ ಟ್ರಸ್ಟ್ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಮುದಾಯ ಜಾಗೃತಿ ಮೂಡಿಸಲಾಗುವುದು ಜೊತೆಗೆ ಸಮುದಾಯ ವಾಸಮಾಡುವ ಗ್ರಾಮ, ಬೀದಿಗಳಿಗೆ ಮೂಲಭೂತ ಸೌಕರ್ಯಗಳನ್ನು ಸರ್ಕಾರದಿಂದ ಒದಗಿಸಿಕೊಡುವ ಕೆಲಸವನ್ನು ಮಾಡಲಾಗುತ್ತದೆ ಎಂದು ಹೊಸ ವರ್ಷದ ಶುಭಾಶಯ ಕೋರಿದರು.
   ಸಭೆಯಲ್ಲಿ ಶ್ರೀಭಗೀರಥ ಸೇವಾ ಟ್ರಸ್ಟ್ ಉಪಾಧ್ಯಕ್ಷ ಪಿ.ಲೋಕೇಶ್, ಕಾರ್ಯದರ್ಶಿ ರಂಗಸ್ವಾಮಿ, ಖಜಾಂಚಿ ಪಿ.ಲಿಂಗರಾಜು, ಸಹ ಕಾರ್ಯದರ್ಶಿ ಆರ್.ಮಹದೇವಶೆಟ್ಟಿ, ನಿರ್ದೇಶಕರಾದ ಮಹದೇವಶೆಟ್ಟಿ ಡೇರಿ, ನಾಗರಾಜು, ಎಂ.ನಾಗರಾಜು, ಮಹದೇವಶೆಟ್ಟಿ, ಸಿ.ರಾಜು,  ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *