ಉಡಿಗಾಲದಲ್ಲಿ ವಿಜೃಂಭಣೆ ಶ್ರೀಪಟ್ಟಲದಮ್ಮನ ರಥೋತ್ಸವ

ಚಾಮರಾಜನಗರ: ತಾಲೂಕಿನ ಉಡಿಗಾಲದಲ್ಲಿ ಶ್ರೀ ಪಟ್ಟಲದಮ್ಮ ರಥೋತ್ಸವ ವಿಜೃಂಭಣೆಯಿಂದ ಜರುಗಿತು. 
ಗ್ರಾಮ ಮಾರಿಗುಡಿ ಮುಂಭಾಗದಲ್ಲಿ ಚಾಲನೆಗೊಂಡು ರಥ ಬೀದಿಯ ಮೂಲಕ ಪಟ್ಟಲದಮ್ಮ ದೇವಸ್ಥಾನದ ಪ್ರದಕ್ಷಿಣೆ ಹಾಕಿ  ಸ್ವಸ್ಥಾನ
ತಲುಪಿತು.  ಇದಕ್ಕೂ ಮುನ್ನಾ ಉತ್ಸವಮೂರ್ತಿಯನ್ನು  ಸತ್ತಿಗೆ,ಸೂರಿಪಾನಿ, ನಾನಾ ಜಾನಪದ ಕಲಾತಂಡಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಾಯಂಕಾಲ 5 ಗಂಟೆಗೆ ಉತ್ಸವ ಮೂರ್ತಿವನ್ನು ರಥಕ್ಕೆ ಕೂರಿಸಲಾಗುತ್ತದೆ.  ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಕೆಲ ಭಕ್ತರು ರಥೋತ್ಸವಕ್ಕೆ ವೀಳ್ಯದೆಲೆ, ಬಾಳೆಹಣ್ಣನ್ನು ರಥಕ್ಕೆ  ಎಸೆದು ಭಕ್ತಭಾವ ಮೆರೆದರು.
ಮುಂಜಾನೆ  ಅದ್ದೂರಿ ಕೊಂಡೋತ್ಸವ ನಡೆಯಿತು. 7 ಗಂಟೆಯ ನಂತರ ಪಟ್ಟಲದಮ್ಮನ ವಿಗ್ರಹ ವನ್ನು ಕುದುರೆ ವಾಹನದಲ್ಲಿ ಕುರಿಸಿ ಉತ್ಸವ ನಡೆಸಲಾಯಿತು. ರಥೋತ್ಸವದಲ್ಲಿ ಭಕ್ತರು, ನಂಟರು, ಗ್ರಾಮದ ಎಲ್ಲ ಕೋಮಿನ ಯಜಮಾನರು, ಗ್ರಾಮಸ್ಥರ ಭಾಗವಹಿಸಿದ್ದರು.

Leave a Reply

Your email address will not be published. Required fields are marked *