ರಾಜ್ಯ ಮಟ್ಟದ ರೈಫಲ್ ಶೂಟಿಂಗ್ ಸ್ಪರ್ಧೆ : ಚಾ.ನಗರದ ಸತ್ಯಭಾಮ ರಮೇಶ್ ಹ್ಯಾಟ್ರಿಕ್ ಗೆಲುವು

ಚಾಮರಾಜನಗರ: ಕರ್ನಾಟಕ ಸ್ಟೇಟ್ ರೈಫಲ್ ಅಸೋಸಿಯೇಷನ್‌  ಬೆಂಗಳೂರಿನಲ್ಲಿ ಅಯೋಜಿಸಿದ 3ನೇ ನಾಗರಾಜರಾವ್ ಜಗದಾಲಿಯ ಶೂಟಿಂಗ್ & ಚಾಂಪಿಯನ್ ಶಿಪ್  2026 ರ ಅಟ್ ಸ್ಪೋರ್ಟ್ಸ್ ಅತಾರಿಟಿ ಆಫ್ ಇಂಡಿಯಾ ಶೂಟಿಂಗ್ ರೆಂಜ್ ನ .22 ರೈಫಲ್ ಪ್ರೋನ್ ಮಹಿಳಾ ವಿಭಾಗದಲ್ಲಿ ನಗರದ  ಸತ್ಯಭಾಮ ರಮೇಶ್ ಭಾಗವಹಿಸಿ ಪ್ರತ್ಯೇಕ ವಿಭಾಗದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ  ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಸೌತ್ ಜೋನ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು,ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
    ಮಹಿಳಾ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದ ಸತ್ಯಭಾಮ ರಮೇಶ್ ಸತತ ಮೂರು ವರ್ಷಗಳಿಂದಲ್ಲೂ ಚಿನ್ನದಪದಕವನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಅವರ ಪತಿ ರಮೇಶ್‌ಬಾಬು ಕೂಡ ಉತ್ತಮ ಶೂಟರ್ ಆಗಿ ಅನೇಕ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಸತ್ಯಭಾಮ ಅವರಿಗೆ ತಮ್ಮ  ಪತಿ ರಮೇಶ್ ಬಾಬು ಅವರೆ ಪ್ರೇರಣಿಯಾಗಿದ್ದಾರೆ.  ಅವರನ್ನು ಅವರ ಸ್ನೇಹ ಬಳಗ ಅಭಿನಂದಿಸಿದೆ.

Leave a Reply

Your email address will not be published. Required fields are marked *